Tap to Read ➤

'ಬಘೀರ' ಶ್ರೀಮುರುಳಿಗೆ ರುಕ್ಮಿಣಿ ವಸಂತ್ ಹೀರೋಯಿನ್

ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಹಾಗೂ ಗಣೇಶ್ ನಟನೆಯ ಬಾನ ದಾರಿಯಲ್ಲಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರುಕ್ಮಿಣಿ ವಸಂತ್ ಅವರಿಗೆ ಮತ್ತೊಂದು ಬಿಗ್ ಆಫರ್ ಸಿಕ್ಕಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
sowmya malnad
ನಟಿ ರುಕ್ಮಿಣಿ ವಸಂತ್ ಗೆ ಮತ್ತೊಂದು ಬಿಗ್ ಆಫರ್ ಸಿಕ್ಕಿದೆ.
ರುಕ್ಮಿಣಿ 'ಬೀರ್ ಬಲ್ ಟ್ರಯಾಲಜಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.
ನಂತರ ಸಪ್ತ ಸಾಗರದಾಚೆ ಎಲ್ಲೋ ಹಾಗೂ ಬಾನ ದಾರಿಯಲ್ಲಿ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡರು.
ಇವೆರಡು ಸಿನಿಮಾಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ರಿಲೀಸ್ ಗೆ ರೆಡಿಯಾಗಿವೆ.
ಈ ನಡುವೆ ನಟಿ ರುಕ್ಮಿಣಿ 'ಬಘೀರ' ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸುತ್ತಿರುವ ಈ ಸಿನಿಮಾವನ್ನು ಡಾ.ಸೂರಿ ನಿರ್ದೇಶಿಸುತ್ತಿದ್ದಾರೆ.
ಪ್ರಶಾಂತ್ ನೀಲ್ ಈ ಚಿತ್ರದ ಕಥೆ ಬರೆದಿದ್ದು, ವಿಜಯ್ ಕಿರಂಗದೂರ್ ಹೊಂಬಾಳೆ ಫಿಲ್ಸ್ಮ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
More