Tap to Read ➤

ಬಿಗ್ ಬಾಸ್ ಸ್ಪರ್ಧಿ ಸೈಕ್ ನವಾಜ್ ಬಗ್ಗೆ ನಿಮಗೆಷ್ಟು ಗೊತ್ತು?

ಸಾಮಾಜಿಕ ಜಾಲತಾಣದಲ್ಲಿ ತನ್ನ ಪ್ರಾಸ ಪದಗಳ ಮೂಲಕ ಸಿನಿಮಾಗಳ ವಿಮರ್ಶೆ ಮಾಡಿ ವೈರಲ್ ಆದ ನವಾಜ್ ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರವೇಶಿಸಿದ್ದಾನೆ.
sowmya malnad
ಇವರು ರಿವ್ಯೂವ್ ನವಾಜ್ ಎಂದೇ ಸಾಕಷ್ಟು ಖ್ಯಾತಿಯನ್ನು ಪಡೆದಿದ್ದಾರೆ.
ನವಾಜ್ ತನ್ನದೇ ಸ್ಟೈಲ್ ಅಲ್ಲಿ ಸಿನಿಮಾದ ರಿವ್ಯೂವ್ ಹೇಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ.

ಫೋಟೋ ಕ್ರೆಡಿಟ್:  ಕಲರ್ಸ್ ಕನ್ನಡ
ಯಾವುದೇ ಸಿನಿಮಾದ ಫಸ್ಟ್ ಡೇ ಶೋ ಇರಲಿ, ಮುಹೂರ್ತವಿರಲಿ ನವಾಜ್ ಅಲ್ಲಿ ಪ್ರತ್ಯಕ್ಷ ಆಗುತ್ತಾರೆ.
ಸೈಕ್ ನವಾಜ್ ಥಿಯೇಟರ್ ಮುಂದೆ ತನ್ನದೇ ಸ್ಟೈಲ್ ಅಲ್ಲಿ ಆಯಾ ಸಿನಿಮಾದ ಡೈಲಾಗ್ ಹೊಡೆಯುತ್ತಿದ್ದರು. ಅದನ್ನ ಕಂಡ ಅನೇಕರು ತುಂಬಾ ಖುಷಿ ಪಡುತ್ತಿದ್ದರು.
ಸಿನಿಮಾದ ಮೊದಲ ಶೋ ಆಗುತ್ತಿದ್ದಂತೆ ನವಾಜ್ ಮಾಧ್ಯಮದ ಮುಂದೆ ಬಂದು ಸಿನಿಮಾ ವಿಮರ್ಶೆ ನೀಡುತ್ತಿದ್ದರು.
ತನ್ನ ಪ್ರಾಸ ಪದಗಳ ಮೂಲಕ ಸಿನಿಮಾಗಳ ವಿಮರ್ಶೆ ಮಾಡಿ ವೈರಲ್ ಆದ ನವಾಜ್ ಸದ್ಯ ಬಿಗ್ ಬಾಸ್ ಪ್ರವೇಶಿಸಿದ್ದಾರೆ.

ಫೋಟೋ ಕ್ರೆಡಿಟ್: ಕಲರ್ಸ್ ಕನ್ನಡ
ಸುಮಾರಷ್ಟು ಜನರು ನನ್ನ ರಿವ್ಯೂ ನೋಡಿ ಬೈದರು. ನಾನು ಹುಚ್ಚಾನೇ. ಅವಾಗ ಯಾರೂ ಇರಲಿಲ್ಲ. ಈಗ ಥಿಯೇಟರ್​​ಗೆ ಬಂದ್ರೆ ಎಲ್ಲರೂ ನನಗೆ ಮಾತನಾಡೋಕೆ ಕೊಡ್ತಾರೆ ಎಂದು ಹೇಳಿಕೊಂಡಿದ್ದಾರೆ ನವಾಜ್.
ಕಾಮಿಡಿಯನ್ ಆಗಬೇಕು ಎಂಬುದು ನನ್ನ ಆಸೆ. ಬಿಗ್ ಬಾಸ್​ ವೇದಿಕೆ ಏರಿದಾಗಲೇ ನಾನು ಗೆದ್ದೆ. ನನಗೆ ಕಸ ಗುಡಿಸೋಕೂ ಬರಲ್ಲ ಎಂದಿದ್ದಾರೆ.
More