Tap to Read ➤

ಚಂದನ್ ಶೆಟ್ಟಿಗೆ ನಾಯಕಿಯಾದ 'ಸಲಗ' ಖ್ಯಾತಿಯ ಸಂಜನಾ ಆನಂದ್

ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಸಂಜನಾ ಆನಂದ್ ಇದೀಗ ಚಂದನ್ ಶೆಟ್ಟಿ ನಟನೆಯ ಸೂತ್ರಧಾರ ಸಿನಿಮಾಗೆ ನಾಯಕಿಯಾಗಿದ್ದಾರೆ.
sowmya malnad
ಚಂದನ್ ಶೆಟ್ಟಿ ನಟನೆಯ ಸೂತ್ರಧಾರ ಸಿನಿಮಾಗೆ ನಟಿ ಸಂಜನಾ ಆನಂದ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
'ಸೂತ್ರಧಾರ' ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಎರಡನೇ ಸಿನಿಮಾ.
ಈ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶಿಸುತ್ತಿದ್ದು, ಮೈ ಮೂವಿ ಬಜಾರ್ ನ ನವರಸನ್ ನಿರ್ಮಿಸುತ್ತಿದ್ದಾರೆ.
ಸಿನಿಮಾದ ಹೀರೋ ಇಂಟ್ರಡಕ್ಷನ್ ಹಾಡು ಡಿಸೆಂಬರ್ 27ರಂದು ಬಿಡುಗಡೆಯಾಗಲಿದ್ದು, ಇದರಲ್ಲಿ ಸಂಜನಾ ಕೂಡ ಕಾಣಿಸಿಕೊಳ್ಳಲಿದ್ದಾರೆ.
ಸಂಜನಾ ಆನಂದ್ ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟರು.
ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ಡೆಲ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು.
ಭರತನಾಟ್ಯ ಕಲಾವಿದೆಯಾಗಿರುವ ಇವರಿಗೆ ಆಕಸ್ಮಿಕವೆಂಬಂತೆ ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು.
More