Tap to Read ➤

30 ಕೆಜಿ ತೂಕ ಇಳಿಸಿಕೊಂಡ ಗೀತಾ ಭಾರತಿ ಭಟ್ ವರ್ಕೌಟ್ ಸೀಕ್ರೆಟ್ ಇಲ್ಲಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅವರ ವರ್ಕೌಟ್ ಸೀಕ್ರೆಟ್ ಇಲ್ಲಿದೆ.
sowmya malnad
ಕಿರುತೆರೆ ನಟಿ ಗೀತಾ ಭಾರತಿ ಭಟ್ ಸದ್ಯ 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ನಟಿ ಗೀತಾ ಭಾರತಿ ಭಟ್ 'ಬ್ರಹ್ಮಗಂಟು' ಧಾರಾವಾಹಿ ಮೂಲಕ ಗುಂಡಮ್ಮ ಎಂದೇ ಕರ್ನಾಟಕದಲ್ಲಿ ಮನೆಮಾತಾಗಿದ್ದರು.
ನಂತರ ಬಿಗ್ ಬಾಸ್ ಸೀಸನ್ 8ರಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಖ್ಯಾತಿ ಗಳಿಸಿದ್ದರು.
ಗೀತಾ ಅವರ ತೂಕ ತುಂಬಾ ಹೆಚ್ಚಾಗಿದ್ದರಿಂದ ಬಿಗ್ ಬಾಸ್ ಬಳಿಕ ನಿರಂತರವಾಗಿ ವರ್ಕೌಟ್ ಮಾಡಲು ಆರಂಭಿಸಿದ್ದರು.
ಸದ್ಯ ನಟಿ ಗೀತಾ ಭಾರತಿ ಭಟ್ 30 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಸಿಹಿ ಕಹಿ ಚಂದ್ರು ನಡೆಸಿಕೊಡುವ 'ಬೊಂಬಾಟ್ ಭೋಜನ' ಶೋನಲ್ಲಿ ರಿವೀಲ್ ಮಾಡಿದ್ದಾರೆ.
ಡಯೆಟಿಷಿಯನ್ ಸಲಹೆ ಮೇರೆಗೆ ಡಯೆಟ್, ವರ್ಕೌಟ್ ಮಾಡುತ್ತಿದ್ದು, ಇನ್ನೂ 30 ಕೆಜಿ ತೂಕ ಕಳೆದುಕೊಳ್ಳುವ ಗೋಲ್ ಇದೆ ಎಂದು ಹೇಳಿದ್ದಾರೆ.
ಜಂಕ್‌ಫುಡ್‌ಗೆ ಬ್ರೇಕ್ ಹಾಕಿರುವ ಗೀತಾ, ಮನೆಯ ಆಹಾರವನ್ನು ಬ್ಯಾಲೆನ್ಸ್ ಆಗಿ ಸೇವನೆ ಮಾಡುತ್ತಿದ್ದಾರೆ.
ಜೊತೆಗೆ ತಮ್ಮ ವರ್ಕೌಟ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
Created by potrace 1.15, written by Peter Selinger 2001-2017
More