Tap to Read ➤

'ಪಠಾಣ್'ಗೆ ಒಳ್ಳೆಯ ಪ್ರಚಾರ ಸಿಕ್ತು, ಚಿತ್ರ ಗೆಲ್ಲುತ್ತೆ ಎಂದ ಶಾರುಖ್

ದೇಶಾದ್ಯಂತ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಸಿನಿಮಾ ಬಾಯ್ಕಾಟ್ ಮಾಡುವಂತೆ ಟ್ರೆಂಡ್ ಸೃಷ್ಟಿಯಾಗಿದೆ. ಈ ಕುರಿತು ನಟ ಶಾರುಖ್ ಖಾನ್ ಮಾತನಾಡಿದ್ದಾರೆ.
sowmya malnad
ಪಠಾಣ್ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿರುವ ವಿಚಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಕೆಲವರು 'ಪಠಾಣ್' ಸಿನಿಮಾವನ್ನು ಬ್ಯಾನ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದು, ಇನ್ನೂಕೆಲವರು ಚಿತ್ರಕ್ಕೆ ರಾಜಕೀಯ ಬಣ್ಣ ಬಳಿಯಬೇಡಿ ಎಂದಿದ್ದಾರೆ.
ಇದೇ ಮೊದಲ ಬಾರಿಗೆ ಶಾರುಖ್ ಖಾನ್ 'ಪಠಾಣ್' ಹಾಡಿನ ವಿವಾದದ ಕುರಿತು ಮಾತನಾಡಿದ್ದಾರೆ.
ನಾವು ಸಿನಿಮಾವನ್ನು ಸಿನಿಮಾದಂತೆಯೇ ನೋಡಬೇಕು. ನಾನಂತು ಸಿನಿಮಾವಾಗಿಯೇ ಅಲ್ಲಿ ಕೆಲಸ ಮಾಡಿದ್ದೇನೆ.
ಈ ವಿವಾದವನ್ನು ಯಾಕೆ ಎಬ್ಬಿಸುತ್ತಿದ್ದಾರೆ ಅಂತ ಎಲ್ಲರಿಗೂ ಗೊತ್ತು.
ನನ್ನ ಮನಸ್ಸಲ್ಲಂತೂ ಯಾವುದೇ ಕೆಟ್ಟ ಆಲೋಚನೆಗಳು ಇಲ್ಲ. ಈ ವಿವಾದದಿಂದ ನಮ್ಮ ಸಿನಿಮಾ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ.
ಜನರು ಸಿನಿಮಾವನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.
More