Tap to Read ➤

ಮತ್ತೆ ಮಚ್ಚು ಹಿಡಿದ ಶಿವಣ್ಣ: 'ವೇದ' ಟೀಸರ್ ಹೇಗಿದೆ ಗೊತ್ತಾ?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರ 125ನೇ ಸಿನಿಮಾ 'ವೇದ ' ಟೀಸರ್ ಬಿಡುಗಡೆಯಾಗಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ವೇದ ಟೀಸರ್ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
sowmya malnad
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರ 125ನೇ ಸಿನಿಮಾ 'ವೇದ '
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರ 125ನೇ ಸಿನಿಮಾ 'ವೇದ '
'ವೇದ' ಟೀಸರ್ ನೋಡಿದ್ರೆ ಸ್ಯಾಂಡಲ್‌ವುಡ್‌ನಿಂದ ಮತ್ತೊಂದು ಬ್ಲಾಕ್‌ ಬಸ್ಟರ್ ಸಿನಿಮಾ ಸಿಗೋದು ಗ್ಯಾರಂಟಿ.
ಟೀಸರ್‌ನಲ್ಲಿ ಕಲ್ಲು, ಮಚ್ಚು ಹಾಗೂ ಪಂಚು ಈ ಸಿನಿಮಾದ ಅಸ್ತ್ರಗಳೆಂದು ತೋರಿಸಲಾಗಿದೆ.
ಟೀಸರ್‌ನಲ್ಲಿ ತೋರಿಸಿರುವಂತೆ ಇದು 1960ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆ.
ಸಿನಿಮಾದಲ್ಲಿ ಶಿವಣ್ಣನ ಲುಕ್ ರಗಡ್ ಆಗಿದ್ದು, ಸೆಂಚುರಿ ಸ್ಟಾರ್ ಬಹಳ ದಿನಗಳ ಬಳಿಕ ಮತ್ತೊಂದು ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ.
ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್ ಸಿನಿಮಾ ಮೇಲೆ ಒಂದು ನಿರೀಕ್ಷೆ ಇದ್ದೇ ಇರುತ್ತೆ.
ಈ ಜೋಡಿ ನಿರಂತರವಾಗಿ ಹಿಟ್ ಸಿನಿಮಾಗಳನ್ನೇ ನೀಡುತ್ತಾ ಬಂದಿದ್ದು, ಈಗ ಮತ್ತೊಂದು ಸಿನಿಮಾ ಮೂಲಕ ಒಂದಾಗಿದೆ.
ಗೀತಾ ಪಿಕ್ಚರ್ಸ್ ಹಾಗೂ ಜೀ ಸಂಸ್ಥೆ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಕ್ರಿಸ್‌ಮಸ್‌ಗೆ ರಿಲೀಸ್ ಆಗುತ್ತಿದೆ.