Tap to Read ➤

ಕುಂದಾಪುರದ ಕಡಲ ತೀರದಲ್ಲಿ ಸಿದ್ದು ಮೂಲಿಮನಿ & ಪ್ರಿಯಾ ಜೆ ಆಚಾರ್ ಫೋಟೋಶೂಟ್

ಕಿರುತೆರೆ ಲೋಕದ ಲವ್ ಬರ್ಡ್ಸ್ ಆದ 'ಪಾರು' ಧಾರಾವಾಹಿಯ ಖ್ಯಾತಿಯ ಸಿದ್ದು ಮೂಲಿಮನಿ ಹಾಗೂ 'ಗಟ್ಟಿಮೇಳ' ಸೀರಿಯಲ್ ನ ಪ್ರಿಯಾ ಜೆ ಆಚಾರ್ ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆದಿದ್ದಾರೆ.
sowmya malnad
ಕಿರುತೆರೆ ಲೋಕದ ಲವ್ ಬರ್ಡ್ಸ್ ಸಿದ್ದು ಮೂಲಿಮನಿ ಮತ್ತು ಪ್ರಿಯಾ ಜೆ ಆಚಾರ್ ಹೊಸ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ.
ಕುಂದಾಪುರದ ಕಡಲ ತೀರದಲ್ಲಿ ಈ ಜೋಡಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆ ಹರಿಸಿದ್ದಾರೆ.
ಸಿದ್ದು ಮೂಲಿಮನಿ ಮತ್ತು ಪ್ರಿಯಾ ಜೆ ಆಚಾರ್ 2022ರ ನವೆಂಬರ್ 20ರಂದು ದಾವಣಗೆರೆಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.
ಡ್ಯಾನ್ಸ್ ಶೋವೊಂದರಲ್ಲಿ ಪರಿಚಿತರಾದ ಸಿದ್ದು ಮತ್ತು ಪ್ರಿಯಾ ನಂತರ ಧಮಾಕ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.
ಈ ವೇಳೆ ಇಬ್ಬರ ನಡುವೆ ಪ್ರೀತಿ ಶುರುವಾಗಿದ್ದು, ಬಳಿಕ ಗುರುಹಿರಿಯರ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಪ್ರಿಯಾ ಅವರು ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಯ ತಂಗಿ ಅದಿತಿ ಪಾತ್ರ ನಿರ್ವಹಿಸುತ್ತಿದ್ದಾರೆ.
ಸಿದ್ದು ಮೂಲಿಮನಿ 'ಪಾರು' ಧಾರಾವಾಹಿಯಲ್ಲಿ ಹೀರೋ ತಮ್ಮ ಪ್ರೀತುವಿನ ಪಾತ್ರ ನಿರ್ವಹಿಸುತ್ತಿದ್ದಾರೆ.
More