Tap to Read ➤

ಸಿದ್ದು ಮೂಲಿಮನಿ-ಪ್ರಿಯಾ ಪ್ರೀ ವೆಡ್ಡಿಂಗ್ ಫೋಟೋಶೂಟ್: ಇಲ್ಲಿವೆ ಕ್ಯೂಟ್ ಫೋಟೋಸ್

ಕಿರುತೆರೆ ಲೋಕದ ಲವ್ ಬರ್ಡ್ಸ್ ಆದ 'ಪಾರು' ಧಾರಾವಾಹಿಯ ಖ್ಯಾತಿಯ ಸಿದ್ದು ಮೂಲಿಮನಿ ಹಾಗೂ 'ಗಟ್ಟಿಮೇಳ' ಸೀರಿಯಲ್ ನ ಪ್ರಿಯಾ ಜೆ ಆಚಾರ್ ಸದ್ಯದಲ್ಲೇ ಹಸೆಮಣೆ ಇರಲಿದ್ದು, ಈ ಜೋಡಿಯ ಮುದ್ದಾದ ಫೋಟೋಗಳು ಇಲ್ಲಿವೆ.
sowmya malnad
ಕಿರುತೆರೆ ಲೋಕದ ಲವ್ ಬರ್ಡ್ಸ್ ಸಿದ್ದು ಮೂಲಿಮನಿ ಮತ್ತು ಪ್ರಿಯಾ ಜೆ ಆಚಾರ್ ಸದ್ಯದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಇದರ ಬೆನ್ನಲೇ ಕಡಲ ತೀರದಲ್ಲಿ ರೋಮ್ಯಾಂಟಿಕ್ ಫೋಟೋಶೂಟ್ ಮಾಡಿಸಿದ್ದಾರೆ.
ಸಿದ್ದು ಮೂಲಿಮನಿ ಮತ್ತು ಪ್ರಿಯಾ ಜೆ ಆಚಾರ್ 2022ರ ನವೆಂಬರ್ 20ರಂದು ದಾವಣಗೆರೆಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.
ಡ್ಯಾನ್ಸ್ ಶೋವೊಂದರಲ್ಲಿ ಪರಿಚಿತರಾದ ಸಿದ್ದು ಮತ್ತು ಪ್ರಿಯಾ ನಂತರ ಧಮಾಕ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.
ಈ ವೇಳೆ ಇಬ್ಬರ ನಡುವೆ ಪ್ರೀತಿ ಶುರುವಾಗಿದ್ದು, ಬಳಿಕ ಗುರುಹಿರಿಯರ ಒಪ್ಪಿಗೆ ಪಡೆದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಇದೀಗ ಸದ್ಯದಲ್ಲೇ ಇವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದು, ಇದರ ಬೆನ್ನಲೇ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ.
ಈ ಜೋಡಿ ಮದುವೆ ದಿನಾಂಕ ಅನೌನ್ಸ್ ಮಾಡಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಪ್ರೀ ವೆಡ್ಡಿಂಗ್ ಫೋಟೋಸ್ ಶೇರ್ ಮಾಡಿದ್ದಾರೆ.
More