Tap to Read ➤

SIIMA: ಬೆಸ್ಟ್ ನಟ ಪ್ರಶಸ್ತಿ ದರ್ಶನ್‌ಗೆ ಯಾಕೆ ಸಿಗಲಿಲ್ಲ !?

ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಸೈಮಾದಲ್ಲಿ ಕನ್ನಡ ಕ್ರಿಟಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿ ನೀಡದೇ ಇರುವುದು ನಟ ದರ್ಶನ್‌ಗೆ ಭಾರಿ ಹಿನ್ನೆಡೆಯಾಗಿದೆ.
Shivam
ದರ್ಶನ್‌ ಅವರ ರಾರ್ಬಟ್‌ ಸೈಮಾಗೆ ನಾಮಿನೇಷನ್ ಪ್ರಕಟಗೊಂಡಾಗ ಅಭಿಮಾನಿಗಳಲ್ಲಿ ಇದ್ದ ಖುಷಿ ಕಾರ್ಯಕ್ರಮದ ಮುಕ್ತಾಯದಲ್ಲಿರಲಿಲ್ಲ.
ಹತ್ತು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದ  ರಾಬರ್ಟ್ ಸಿನಿಮಾ ಮೂರು ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿತ್ತು.
ರಾಬರ್ಟ್ ಪರ ನಿರ್ದೇಶಕ ತರುಣ್ ಸುಧೀರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಸುಧಾಕರ್ ರಾಜ್ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಹಾಗೂ ಅರ್ಜುನ್ ಜನ್ಯಾ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು.
ಆದರೆ ದರ್ಶನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಗುವುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಈ ನಡುವೆ ಕನ್ನಡದ ಪೈಕಿ ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತು.
ತೆಲುಗಿನಲ್ಲಿ ಅತ್ಯುತ್ತಮ ನಟ ಅಲ್ಲು ಅರ್ಜುನ್‌ಗೆ ಸಿಕ್ಕಿತು ಹಾಗೂ ಕ್ರಿಟಿಕ್ಸ್ ಅತ್ಯುತ್ತಮ ತೆಲುಗು ನಟ ಪ್ರಶಸ್ತಿ ನವೀನ್ ಪೊಲಿಶೆಟ್ಟಿಗೆ ಸಿಕ್ಕಿತು
ಇನ್ನು ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಇಬ್ಬರು ನಟರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.
ಕನ್ನಡದ ನಟಿಯರಾದ ಆಶಿಕಾ ರಂಗನಾಥ್‌ಗೆ ಅತ್ಯುತ್ತಮ ನಟಿ ಹಾಗೂ ನಟಿ ಅಮೃತಾ ಅಯ್ಯಂಗಾರ್‌ಗೆ ಕ್ರಿಟಿಕ್ಸ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಲಾಯಿತು.
ಅಷ್ಟೇ ಅಲ್ಲದೇ ಈ ಬಾರಿ ತಮಿಳಿನ ಮೂವರು ನಟರಿಗೆ ಪ್ರಶಸ್ತಿ ನೀಡಲಾಗಿದ್ದು, ಕನ್ನಡದಲ್ಲೇಕೆ ನೀಡಿಲಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ.
more stories