Tap to Read ➤

ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಬ್ರೇಕ್ ಪಡೆಯಲು ಕಾಯುತ್ತಿರುವ ಸ್ಟಾರ್ ಮಕ್ಕಳು

ಉತ್ತಮ ಸಿನಿಮಾ ಹಿನ್ನೆಲೆಯಿದ್ದರೂ ಅನೇಕ ಸ್ಟಾರ್ ಮಕ್ಕಳು ಕನ್ನಡ ಚಿತ್ರರಂಗದಲ್ಲಿ ತಮ್ಮದೇಯಾದ ಸ್ಥಾನ ಸೃಷ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅನೇಕ ಸ್ಟಾರ್ ಮಕ್ಕರು ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಬ್ರೇಕ್ ಪಡೆಯಲು ಕಾಯುತ್ತಿದ್ದಾರೆ. ಆ ನಟರು ಯಾರ್ಯಾರು ಎಂಬ ಮಾಹಿತಿ ಇಲ್ಲಿದೆ.
sowmya malnad
ಅಭಿಷೇಕ್ ಅಂಬರೀಶ್ ಅವರ ಮೊದಲ ಸಿನಿಮಾ ಅಮರ್. ಇದು ಅಷ್ಟೇನೂ ಸದ್ದು ಮಾಡಿಲ್ಲ. ಅಭಿಷೇಕ್ ತಮ್ಮ ಮುಂದಿನ ಸಿನಿಮಾ 'ಬ್ಯಾಡ್ ಮ್ಯಾನರ್ಸ್' ಮೂಲಕ ದೊಡ್ಡ ಬ್ರೇಕ್ ಪಡೆಯಲು ಕಾಯುತ್ತಿದ್ದಾರೆ.
ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಂ ರವಿಚಂದ್ರನ್ 'ತ್ರಿವಿಕ್ರಮ' ಚಿತ್ರದ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟರು. ಸಾಕಷ್ಟು ನಿರೀಕ್ಷೆಯ ಜೊತೆಗೆ ಈ ಚಿತ್ರ ರಿಲೀಸ್ ಆಗಿತ್ತು. ಆದರೆ, ಅಂದುಕೊಂಡ ಮಟ್ಟಗೆ ಸಿನಿಮಾ ಯಶಸ್ಸು ಕಾಣಲಿಲ್ಲ.
ವಿನಯ್ ರಾಜ್​ಕುಮಾರ್ ಅವರ ಯಾವುದೇ ಸಿನಿಮಾ ಕಳೆದ ನಾಲ್ಕು ವರ್ಷಗಳಿಂದ ತೆರೆಕಂಡಿಲ್ಲ. ಸದ್ಯ 'ಪೆಪೆ' ಸಿನಿಮಾ ಮೂಲಕ ದೊಡ್ಡ ಬ್ರೇಕ್ ಪಡೆಯಲು ಹರಸಾಹಸ ಪಡೆಯುತ್ತಿದ್ದಾರೆ.
ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ರವಿಚಂದ್ರನ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದು, ಸೂಪರ್‌ ಹಿಟ್ ಕೊಡುವ ಸಿನಿಮಾ ಇನ್ನೂ ಬಂದಿಲ್ಲ.
ನಿಖಿಲ್ ಗೌಡ ಜಾಗ್ವಾರ್' ಚಿತ್ರದ ಮೂಲಕ ಕನ್ನಡ ಮತ್ತು ತೆಲುಗು ಚಿತ್ರರಂಗಕ್ಕೆ ಅದ್ಧೂರಿಯಾಗಿ ಪದಾರ್ಪಣೆ ಮಾಡಿದರು. ಆದರೆ, ನಿಖಿಲ್ ಗೌಡ ಅವರಿಗೆ ಒಳ್ಳೆಯ ಸಿನಿಮಾ ಹಾಗೂ ರಾಜಕೀಯ ಹಿನ್ನೆಲೆಯಿದ್ದರೂ ಸಿನಿಮಾ ಕ್ಷೇತ್ರದಲ್ಲಿ ಅಷ್ಟೇನು ಹೆಸರು ಮಾಡಿಲ್ಲ.
'ಸಿಕ್ಸರ್' ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಪ್ರಜ್ವಲ್, ಅಷ್ಟೇನು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿಲ್ಲ. ಇವರ ತಂದೆ ದೇವರಾಜ್ ಸಾಕಷ್ಟು ಹಿಟ್ ಸಿನಿಮಾ ನೀಡಿದ್ದಾರೆ. ಆದ್ರೆ, ಪ್ರಜ್ವಲ್ ಅಂತಹ ದೊಡ್ಡ ಸಿನಿಮಾಗಳನ್ನು ಮಾಡಿಲ್ಲ.
ಕಲಾಸಾಮ್ರಾಟ್ ಎಸ್‌.ನಾರಾಯಣ್ ಅವರ ಪುತ್ ಪಂಕಜ್, ಇಲ್ಲಿಯ ತನಕ ಸುಮಾರು 5 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಇವರ ಸಿನಿಮಾಗಳು ಅಷ್ಟೇನೂ ಹಿಟ್ ಆಗಿಲ್ಲ.