Tap to Read ➤

ಕಾಂತಾರ ಸಿನಿಮಾದ ಸ್ವರಾಜ್ ಶೆಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು?

ಕಾಂತಾರ ಸಿನಿಮಾದಲ್ಲಿ 'ಗುರುವ' ಪಾತ್ರದಲ್ಲಿ ನಟಿಸಿರುವ ಸ್ವರಾಜ್ ಶೆಟ್ಟಿ ಕುರಿತ ಮಾಹಿತಿ ಇಲ್ಲಿದೆ.
sowmya malnad
ಸ್ವರಾಜ್ ಶೆಟ್ಟಿ ರಂಗಭೂಮಿ ಕಲಾವಿದ, ಚಲನಚಿತ್ರ ನಟ, ನಿರ್ದೇಶಕ
ಸ್ವರಾಜ್ ಶೆಟ್ಟಿ ಹುಚ್ಚ 2, ಒಂದು ಮೊಟ್ಟೆಯ ಕಥೆ ಮತ್ತು ಬರ್ಕೆ, ಜೈ ಮಾರುತಿ ಯುವಕ ಮಂಡಲ ಎಂಬ ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಜೊತೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಕೃಷ್ಣ ತುಳಸಿ ಧಾರಾವಾಹಿಯಲ್ಲೂ ನಟಿಸಿದ್ದಾರೆ.
ಸ್ವರಾಜ್ ರಂಗಭೂಮಿ ಕಲಾವಿದರಾಗಿದ್ದು, 450ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದಲ್ಲಿ ಸ್ವರಾಜ್ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಕಾಂತಾರ ಸಿನಿಮಾದಲ್ಲಿ ಶಿವನ ತಮ್ಮ (ರಿಷಬ್ ) ಗುರುವ ಪಾತ್ರದಲ್ಲಿ ಸ್ವರಾಜ್ ಕಾಣಿಸಿಕೊಂಡಿದ್ದಾರೆ.
ಕಾಂತಾರ ಸಿನಿಮಾದಲ್ಲಿನ ಸ್ವರಾಜ್ ನಟನೆಗೆ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸ್ವರಾಜ್ ಗೆ ಒಳ್ಳೆಯ ಅವಕಾಶಗಳು ಸಿಗುವ ನಿರೀಕ್ಷೆಯಿದೆ.
Created by potrace 1.15, written by Peter Selinger 2001-2017
more