Tap to Read ➤

ರಕ್ಷಿತ್ ಶೆಟ್ಟಿ ಚಾರ್ಲಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ರವರು, 777 ಚಾರ್ಲಿ ಚಿತ್ರ ನೋಡಿ ರಕ್ಷಿತ್ ಶೆಟ್ಟಿಯವರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ.
Shrishail Mulawad
ಕಿರಣರಾಜ್ ನಿರ್ದೇಶನದಲ್ಲಿ ಮೂಡಿಬಂದ 777 ಚಾರ್ಲಿ ಚಿತ್ರಕ್ಕೆ ದೇಶವ್ಯಾಪಿಯಿಂದ ಪ್ರಶಂಸೆ ಬರುತ್ತಿದೆ.
ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿ, ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ವೀಕ್ಷಕರು ಮಾತ್ರವಲ್ಲದೇ ರಕ್ಷಿತ್ ಚಿತ್ರಕ್ಕೆ ಹಲವು ಸಿನಿತಾರೆಯರು ಕೂಡ ಮನ ಸೋತಿದ್ದಾರೆ.
ಇದೀಗ ಸೂಪರ್ ಸ್ಟಾರ್ ರಜನಿಕಾಂತ್ '777 ಚಾರ್ಲಿ' ಚಿತ್ರ ನೋಡಿ ಪ್ರಶಂಸಿಸಿದ್ದಾರೆ.
ಚಿತ್ರ ನೋಡಿ ರಕ್ಷಿತ್ ಶೆಟ್ಟಿಗೆ ಕರೆಮಾಡಿದ ರಜನಿಕಾಂತ್, ಚಿತ್ರದ ಮೇಕಿಂಗ್ ಕ್ವಾಲಿಟಿ ಮತ್ತು ಡಿಸೈನ್ ಬಗ್ಗೆ ಹೊಗಳಿದ್ದಾರೆ.
ಹಾಗೇ ಚಿತ್ರದ ಕ್ಲೈಮ್ಯಾಕ್ಸ್ ನ್ನು ಹೊಗಳಿದ ರಜಿನಿ, ಚಿತ್ರ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಅಂತ್ಯವಾಗುವುದರ ಬಗ್ಗೆ ಮೆಚ್ಚುಗೆ ಸೂಸಿದ್ದಾರೆ.
ಇದಕ್ಕೂ ಮೊದಲು ರಜನಿಯವರ ಪೆಟ್ಟಾ ಚಿತ್ರದಲ್ಲಿನ ವಿಜಯ್ ಸೇತುಪತಿ ಪಾತ್ರಕ್ಕೆ ರಕ್ಷಿತ್ ಶೆಟ್ಟಿಯವರನ್ನು ಸಂಪರ್ಕಸಿತ್ತು. ಕಾರಣಾಂತರಗಳಿಂದ ರಕ್ಷಿತ್ ಆ ಚಿತ್ರದಲ್ಲಿ ನಟಿಸಿರಲಿಲ್ಲ.
Created by potrace 1.15, written by Peter Selinger 2001-2017
ಸಿನಿ ಜಗತ್ತಿನ ಇನ್ನಷ್ಟು ರಂಗುರಂಗಿನ ಸುದ್ಧಿಗಳನ್ನು ಅಂದದ ಚಿತ್ರಗಳೊಂದಿಗೆ ಓದಲು, ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ಮೇಲಕ್ಕೆ ಜಗ್ಗಿ.