Tap to Read ➤

ಜೀವ ಬೆದರಿಕೆ ಎದುರಿಸುತ್ತಿರುವ ಬಾಲಿವುಡ್‌ನ ಪ್ರಮುಖ ನಟರು

ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ನಂತರ ಈಗ ಹಲವು ಬಾಲಿವುಡ್ ತಾರೆಯರಿಗೆ ಇಂತಹ ಬೆದರಿಕೆಗಳು ಬಂದಿದ್ದು, ಇದರಲ್ಲಿ ಹಲವು ದೊಡ್ಡ ನಟರ ಹೆಸರುಗಳಿವೆ
ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ನಂತರ ಈಗ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆಗಳು ಬಂದಿವೆ.
ಮೇ 29ರ ಸಂಜೆ 28 ವರ್ಷದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ಇದೀಗ ಬಾಲಿವುಡ್ ಸೂಪರ್‌ಸ್ಟಾರ್ ನಟರಿಗೆ ಅಪರಿಚಿತರಿಂದ ಜೀವ ಬೆದರಿಕೆಯ ಕರೆಗಳು ಬರುತ್ತಿವೆ
ಈ ಸುದ್ದಿ ಮುನ್ನೆಲೆಗೆ ಬಂದ ನಂತರ ಸಲ್ಮಾನ್ ಖಾನ್ ಅವರಿಗೆ ಮುಂಬೈ ಪೊಲೀಸರಿಂದ  ಭದ್ರತೆ ಹೆಚ್ಚಿಸಲಾಗಿದೆ
ಅಕ್ಷಯ್ ಕುಮಾರ್ ಅವರಿಗೆ  ದರೋಡೆಕೋರ ರವಿ ಪೂಜಾರಿ ಜೀವ ಬೆದರಿಕೆ ಹಾಕಲಾಗಿತ್ತು. ಮೂಲಗಳ ಪ್ರಕಾರ, ಕೆಲಸ ಮಾಡುವ ಮಹಿಳೆಯನ್ನು ಅಕ್ಷಯ್ ಅವರ ಮನೆಯಿಂದ ವಜಾಗೊಳಿಸಲಾಯಿತು
ಇದಲ್ಲದೇ ಗಾಯಕ ಅರಿಜಿತ್ ಸಿಂಗ್ ಅವರಿಗೆ ಭೂಗತ ಜಗತ್ತಿನಿಂದಲೂ ಬೆದರಿಕೆಗಳು ಬಂದಿವೆ. ಭೂಗತ ಪಾತಕಿ ರವಿ ಪೂಜಾರಿ ಅರಿಜಿತ್‌ನಿಂದ 5 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದರು.
ಈ ಪಟ್ಟಿಯಲ್ಲಿ ಅಮೀರ್ ಖಾನ್ ಹೆಸರೂ ಸೇರಿದೆ. ‘ಸತ್ಯಮೇವ ಜಯತೆ’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾಗ ಅಮೀರ್ ಖಾನ್ ಅವರಿಗೆ ಬೆದರಿಕೆಗಳು ಬಂದಿದ್ದವು. ಇದಾದ ಬಳಿಕ ತಮ್ಮ ಭದ್ರತೆಗಾಗಿ ಬುಲೆಟ್ ಪ್ರೂಫ್ ಜಾಕೆಟ್‌ ಖರೀದಿಸಿದ್ದರು.
ಬೆದರಿಕೆ ಪಟ್ಟಿಯಲ್ಲಿ ಶಾರುಖ್ ಖಾನ್ ಹೆಸರೂ ಸೇರಿದೆ. ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ನ ಪಾಲುದಾರ ರವಿ ಪೂಜಾರಿಯಿಂದ ನಟನಿಗೆ ಕೊಲೆ ಬೆದರಿಕೆ ಇತ್ತು ಎಂದು ಹೇಳಲಾಗಾತ್ತಿದೆ
More Stories