Tap to Read ➤

ಮನರಂಜನಾ ಜಗತ್ತಿನ ಇಂದಿನ ಟಾಪ್ ಸಿನಿಮಾ ಸುದ್ಧಿಗಳು - 08/04/2022

ಕನ್ನಡ ಸೇರಿದಂತೆ ಭಾರತದ ವಿವಿಧ ಭಾಷೆಗಳ ಇಂದಿನ (08/04/2022) ಟಾಪ್ ಮನರಂಜನಾ ಸುದ್ಧಿಗಳು ಇಲ್ಲಿವೆ.
ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಬಿಡುಗಡೆ ದಿನಾಂಕ ಎಪ್ರಿಲ್ 10 ರಂದು ಘೋಷಣೆಯಾಗಲಿದೆ.
ಪ್ರಮೋದ್ ಮಂಜು ತಮ್ಮ ಹೊಸ ಚಿತ್ರ ಬಾಂಡ್ ರವಿ'ಯಲ್ಲಿ ಅಪ್ಪು ಅಭಿಮಾನಿಯಾಗಿ ನಟಿಸಲಿದ್ದಾರೆ. ಚಿತ್ರದ ಮುಹೂರ್ತಕ್ಕೆ ಧ್ರುವ ಸರ್ಜಾ ಮತ್ತು ವಿನೋದ್ ಪ್ರಭಾಕರ್ ಕ್ಲ್ಯಾಪ್ ಮಾಡಿದರು.
ಬಾಂಡ್ ರವಿ
ಕೆಜಿಎಫ್ ವರ್ಸ್, ಎಪ್ರಿಲ್ 7 ರಂದು ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ, ಸಾವಿರಕ್ಕೂ ಹೆಚ್ಚು ಮೆಟಾವರ್ಸ್ ಟೋಕನ್ ಗಳು ಸೇಲ್ ಆಗಿವೆ.
ಏಪ್ರಿಲ್ 8 ರಿಂದ 10ರವರೆಗೆ ಬೆಂಗಳೂರಿನಲ್ಲಿ ಮೊದಲ ಬೆಂಗಾಳಿ ಚಲನಚಿತ್ರೋತ್ಸವ ಜರುಗಲಿದೆ. ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ ಈ ಫಿಲ್ಮ್ ಫೆಸ್ಟಿವಲ್ ಜರುಗಲಿದ್ದು, ಖ್ಯಾತ ಬಂಗಾಳಿ ನಟ-ನಟಿಯರು ಭಾಗವಹಿಸಲಿದ್ದಾರೆ.
ಖ್ಯಾತ ತೆಲುಗು ನಟ ಅಲ್ಲು ಅರ್ಜುನ್ 40 ನೇ ವಸಂತಕ್ಕೆ ಕಾಲಿಟ್ಟಿದ್ದೂ, ತಮ್ಮ 50 ಜನ ಸ್ನೇಹಿತರೊಂದಿಗೆ ಸರ್ಬಿಯಾದ ಬೆಲ್‌ಗ್ರೇಡ್ ನಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡರು.
ಏಪ್ರಿಲ್ 7 ರಿಂದ ಕೆಜಿಎಫ್ ಚಾಪ್ಟರ್ 2 ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು, ಮುಂಬೈ, ಚೆನ್ನೈ ಮತ್ತು ಕೇರಳ ಮತ್ತು ಯು.ಕೆ ಯಲ್ಲಿ ದಾಖಲೆ ಪ್ರಮಾಣದಲ್ಲಿ ಟಿಕೆಟ್ ಗಳು ಮಾರಾಟವಾಗುತ್ತಿವೆ.
ಬಂಗಾಳದ ಖ್ಯಾತ ಲೇಖಕ ಬಂಕೀಮ್ ಚಂದ್ರ ಚಟರ್ಜಿಯರ ಆನಂದಮಠ' ಆಧಾರಿತ 1770 - ಏಕ್ ಸಂಗಮ್' ಚಿತ್ರವನ್ನು ಜೀ ಸ್ಟುಡಿಯೋಸ್ ಘೋಷಿಸಿದ್ದು, ಚಿತ್ರದ ಕಥೆಯನ್ನು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ರವರಿಂದ ಬರೆಸುತ್ತಿದೆ.
1770 - ಏಕ್ ಸಂಗಮ್