Tap to Read ➤

'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ನಾಯಕಿ ಕುರಿತು ನಿಮಗೆಷ್ಟು ಗೊತ್ತು?

ಈ ಮೊದಲು ನಟಿ ರಮ್ಯಾ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಬೇಕಿದ್ದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾಗೆ ಸಿರಿ ರವಿಕುಮಾರ್ ನಾಯಕಿಯಾಗಿ ಆಯ್ಕೆಯಾಗಿದ್ದು, ಅವರ ಕುರಿತ ಆಸಕ್ತಿಕರ ಸಂಗತಿಗಳು ಇಲ್ಲಿವೆ.
sowmya malnad
ನಟಿ ಸಿರಿ ರವಿಕುಮಾರ್ ಬಹುಮುಖ ಪ್ರತಿಭೆಯಾಗಿದ್ದು, ಈ ಹಿಂದೆ 'ಸಕುಂಟುಂಬ ಸಮೇತ' ಎಂಬ ಸಿನಿಮಾದಲ್ಲಿ ನಟಿಸಿದ್ದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡದ ಕೋಗಿಲೆ' ಕಾರ್ಯಕ್ರಮದ ನಿರೂಪಕಿಯಾಗಿದ್ದರು.
ಸಿರಿ ರವಿಕುಮಾರ್ ನಟಿ ಮಾತ್ರವಲ್ಲದೆ, ರೂಪದರ್ಶಿಯೂ ಕೂಡ ಹೌದು.
ಜೊತೆಗೆ ನಟಿ ಸಿರಿ ರವಿಕುಮಾರ್ ಆರ್ ಜೆ ಆಗಿ ಕೆಲಸ ಮಾಡಿದ್ದು, ಕೆಲ ವೆಬ್ ಸೀರೀಸ್​​​ಗಳಲ್ಲೂ ನಟಿಸಿದ್ದಾರೆ.
ಈ ಮೊದಲು ರಮ್ಯಾ ನಟಿಸಬೇಕಿದ್ದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾಗೆ ಸಿರಿ ರವಿಕುಮಾರ್ ನಾಯಕಿಯಾಗಿದ್ದಾರೆ.
ಈ ಸಿನಿಮಾವನ್ನು ಮೋಹಕತಾರೆ ರಮ್ಯಾ ನಿರ್ಮಾಣ ಮಾಡುತ್ತಿದ್ದು, ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ.
'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದಲ್ಲಿ ಸಿರಿ ರವಿಕುಮಾರ್ 'ಪ್ರೇರಣಾ' ಪಾತ್ರ ನಿರ್ವಹಿಸಲಿದ್ದಾರೆ.
More