Tap to Read ➤

'ಗೀತಾ' ಧಾರಾವಾಹಿಯ ನಟಿ ಭವ್ಯಾ ಗೌಡ ಬಗ್ಗೆ ನಿಮಗೆಷ್ಟು ಗೊತ್ತು..?

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗೀತಾ' ಮೂಲಕ ಖ್ಯಾತಿ ಗಳಿಸಿರುವ ನಟಿ ಭವ್ಯಾ ಗೌಡ ಬಗ್ಗೆ ನಿಮಗೆ ಗೊತ್ತಿರದ ಒಂದಷ್ಟು ವಿಷಯಗಳು ಇಲ್ಲಿವೆ.
sowmya malnad
ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗೀತಾ' ಮೂಲಕ ಖ್ಯಾತಿ ಗಳಿಸಿರುವ ನಟಿ ಭವ್ಯಾ ಗೌಡಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಭವ್ಯಾ ಗೌಡ ನಟನಾ ಲೋಕಕ್ಕೆ ಬರುವುದಕ್ಕೂ ಮುನ್ನ ಗಗನಸಖಿ ಆಗಬೇಕು ಎಂದು ಕನಸು ಕಂಡಿದ್ದಂರಂತೆ. ಅದಕ್ಕಾಗಿ ಅರ್ಜಿಯನ್ನೂ ಕೂಡ ಹಾಕಿದ್ದರಂತೆ.
ಅಷ್ಟರಲ್ಲಿ ಟಿಕ್​ಟಾಕ್​ನಲ್ಲಿ ಲಿಪ್ ಸಿಂಕ್ ವೀಡಿಯೋಗಳ ಮೂಲಕ ಪ್ರಸಿದ್ಧರಾಗಿದ್ದ ಭವ್ಯಾ ಗೌಡ ಅವರಿಗೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಬರಲು ಶುರುವಾಯಿತು.
ನಂತರ ಅವರು 'ಗೀತಾ' ಧಾರಾವಾಹಿಯಲ್ಲಿ 'ಗೀತಾ' ಪಾತ್ರಕ್ಕೆ ಆಯ್ಕೆಯಾದರು. ಈ ಸೀರಿಯಲ್ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತು.
ಮೂಲತಃ ಬೆಂಗಳೂರಿನವರಾದ ಭವ್ಯಾ ಗೌಡ ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್, ನಟಿ ಅಮೂಲ್ಯ ಅವರ ಕಸಿನ್ ತಂಗಿ.
ಇದರ ಜೊತೆಗೆ ನಟಿ ಭವ್ಯಾ ಗೌಡ 'ಡಿಯರ್ ಕಣ್ಮಣಿ' ಸಿನಿಮಾ ಮುಖಾಂತರ ಬೆಳ್ಳಿ ತೆರೆಗೆ ಕೂಡ ಕಾಲಿಡಲು ಸಜ್ಜಾಗಿದ್ದಾರೆ.
ವಿಸ್ಮಯಾ ಗೌಡ ನಿರ್ದೇಶನ 'ಡಿಯರ್ ಕಣ್ಮಣಿ' ಚಿತ್ರದಲ್ಲಿ ಕಿಶನ್ ಹಾಗೂ ಸಾತ್ವಿಕಾ ಜೊತೆ ಭವ್ಯಾ ಗೌಡ ಕಾಣಿಸಿಕೊಳ್ಳಲಿದ್ದಾರೆ.
More