ವಿಜಯಲಕ್ಷ್ಮೀ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹತ್ತಿರದ ಸಂಬಂಧಿಯಾಗಿದ್ದಾರೆ.
ವಿಜಯಲಕ್ಷ್ಮೀ ಅವರು ಕೆಮಿಕಲ್ ಇಂಜಿನಿಯರಿಂಗ್ ಮಾಡಿದ್ದಾರೆ.
ವರದಿಯ ಪ್ರಕಾರ, ದರ್ಶನ್ ತಮ್ಮ ಸ್ನೇಹಿತೆ ರೀನಾ ಎಂಬುವವರ ಬರ್ತಡೇ ಪಾರ್ಟಿಗೆ ಹೋದಾಗ ವಿಜಯಲಕ್ಷ್ಮೀ ಅವರನ್ನ ಮೊದಲ ಬಾರಿ ಭೇಟಿಯಾಗಿದ್ರು.
ಅಲ್ಲಿಂದ ಇಬ್ಬರ ನಡುವೆ ಸ್ನೇಹ ಬೆಳೆದು, ಲವ್ ಮ್ಯಾರೇಜ್‌ಗೆ ತಾಯಿಯ ಒಪ್ಪಿಗೆ ಪಡೆದಿದ್ದ ದರ್ಶನ್ ವಿಜಯಲಕ್ಷ್ಮೀಗೆ ಲವ್ ಪ್ರಪೋಸ್ ಮಾಡುತ್ತಾರೆ.
ಪರಸ್ಪರ ಪ್ರೀತಿಸಿದ ಈ ಜೋಡಿ ಮನೆಯವರ ಒಪ್ಪಿಗೆಯ ಮೇರೆಗೆ 2000ರ ಮೇ 19ರಂದು ಮದುವೆಯಾಗುತ್ತಾರೆ.
ದರ್ಶನ್ ಹಾಗೂ ವಿಜಯಲಕ್ಷ್ಮೀ ವಿವಾಹ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತ್ತು.
ಮದುವೆ ಬಳಿಕವೇ ದರ್ಶನ್ 'ಮೆಜಿಸ್ಟಿಕ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿಕೊಟ್ಟರು.