Tap to Read ➤

ಕಾಂತಾರ ಸಿನಿಮಾದ ನಟಿ ಚಂದ್ರಕಲಾ ಭಟ್ ಬಗ್ಗೆ ನಿಮಗೆಷ್ಟು ಗೊತ್ತು?

ಕಾಂತಾರ ಸಿನಿಮಾದ ಅನೇಕ ಹಾಸ್ಯ ಪಾತ್ರಗಳಲ್ಲಿ ಶೀಲಾ ಕೂಡ ಒಂದು. ಶೀಲಾ ಪಾತ್ರ ಮಾಡಿರುವ ಚಂದ್ರಕಲಾ ಭಟ್ ಅವರ ಕುರಿತ ಒಂದಿಷ್ಟು ಆಸಕ್ತಿಕರ ವಿಷಯಗಳು ಇಲ್ಲಿವೆ.
sowmya malnad
ಕಾಂತಾರ ಸಿನಿಮಾದಲ್ಲಿ ಶೀಲಾ ಪಾತ್ರ ಮಾಡಿರುವ ನಟಿ ಚಂದ್ರಕಲಾ ಭಟ್ ರಂಗಭೂಮಿ ಕಲಾವಿದೆಯಾಗಿದ್ದು, ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ.
ಇವರು ಕಾಂತಾರ ಸಿನಿಮಾದಲ್ಲಿ ಕೂದಲು ತುಂಬಾ ಹೋಗಿದೆ, ಕಾಡಲ್ಲಿ ಒಂದು ಸೊಪ್ಪು ಸಿಕ್ತದೇ ಎಂಬ ಡೈಲಾಗ್ ಮೂಲಕ ಪ್ರೇಕ್ಷಕರನ್ನು ನಗಿಸಿದ್ದಾರೆ.
ಕಾಂತಾರ ಚಂದ್ರಕಲಾ ಭಟ್ ಅವರ ಮೊದಲ ಸಿನಿಮಾವಲ್ಲ. ಅವರು ಈ ಹಿಂದೆ ಉಳಿದವರು ಕಂಡಂತೆ, ರಿಷಬ್ ಶೆಟ್ಟಿ ಅವರ ರಿಕ್ಕಿ ಸಿನಿಮಾದಲ್ಲಿ ನಟಿಸಿದ್ದಾರೆ.
ಉಳಿದವರು ಕಂಡಂತೆ ಸಿನಿಮಾದಲ್ಲಿ ಮೀನು ಮಾರುವ ಮಹಿಳೆಯಾಗಿ ಹಿರಿಯ ನಟಿ ತಾರಾ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು.
ಸಾಕಷ್ಟು ನಾಟಕ, ಹಾಗೂ ತುಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕರಾವಳಿ ಪ್ರತಿಭೆ ಚಂದ್ರಕಲಾ ಭಟ್, ಕಾಂತಾರ ಸಿನಿಮಾ ಮೂಲಕ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದಾರೆ.
More