Tap to Read ➤

ಮಾನ್ವಿತಾ ಕೆಲ ವರ್ಷ ಸಿನಿಮಾದಿಂದ ದೂರ ಸರಿಯಲು ಕಾರಣವೇನು ?

ಕೆಂಡಸಂಪಿಗೆ ಮಾನ್ವಿತಾ ಕಾಮತ್ ಹಿಟ್ ಚಿತ್ರಗಳನ್ನು ನೀಡಿತ್ತುದ್ದಾಗಲೇ ಸಿನಿಮಾದಿಂದ ಬ್ರೇಕ್ ಪಡೆದಿದ್ದರು, ಅದಕ್ಕೆ ಕಾರಣವಾದರೂ ಏನು? ಇಲ್ಲಿದೆ ಉತ್ತರ.
ಮಾನ್ವಿತಾ ಕೆಂಡ ಸಂಪಿಗೆ ಚಿತ್ರದ ಮೂಲಕ ಚಂದನವನದಲ್ಲಿ ಯಶಸ್ಸಿನ ಸಿನಿ ಜರ್ನಿ ಆರಂಭಿಸಿದರು.
ಶಿವಣ್ಣನ ಜೊತೆ ಸಖತ್ ಆಗಿ ನಟಿಸಿ ಟಗರು ಪುಟ್ಟಿ ಎಂದು ಕರೆಸಿಕೊಂಡರು.
ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡುತ್ತಿದ್ದರೂ, 2018 ರ ನಂತರ ಮಾನ್ವಿತಾ ಕಡಿಮೆ ಚಿತ್ರಗಳಲ್ಲಿ ಕಾಣಿಸಿಕೊಳ್ಳತೊಡಗಿದರು.
ಮಾನ್ವಿತಾ ಕೊನೆಯ ಚಿತ್ರ ತೆರೆಗೆ ಬಂದಿದ್ದು 2020 ರಲ್ಲಿ ತೆರೆಕಂಡ 'ಇಂಡಿಯಾ vs ಇಂಗ್ಲೆಂಡ್'.
ಕೆಂಡಸಂಪಿಗೆ ಬೆಡಗಿ ಚಿತ್ರರಂಗದಿಂದ ಕೆಲ ಕಾಲ ದೂರ ಉಳಿದರು. ಇದಕ್ಕೆ ಕಾರಣ ಮಾನ್ವಿತಾ ತಾಯಿ.
ಹೌದು, ಮಾನ್ವಿತಾ ತಾಯಿಗೆ ಮಗಳು ಸ್ನಾತಕೋತ್ತರ ಪದವಿ ಪಡೆಯಬೇಕೆಂಬ ಆಸೆಯಿತ್ತು.
ತಾಯಿಯ ಆಸೆಯನ್ನು ಪೂರೈಸಲು, ಚಿತ್ರರಂಗದಿಂದ ಕೆಲಕಾಲ ಬ್ರೇಕ್ ತೆಗೆದುಕೊಂಡ ಮಾನ್ವಿತಾ ಮಾಸ್ ಕಮ್ಯೂನಿಕೇಶನ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡ ಮಾನ್ವಿತಾ ಸದ್ಯ ತಮ್ಮ ಸ್ನಾತಕೋತ್ತರ ಪದವಿ ಮುಗಿದಿದ್ದು, ಚಿತ್ರಗಳ ಮೇಲೆ ಗಮನ ಹರಿಸುವೆ ಎಂದಿದ್ದಾರೆ.
ಮಾನ್ವಿತಾ ಪೋಸ್ಟ್ ಗೆ ರಮ್ಯಾ, ಆಶಿಕಾ ರಂಗನಾಥ್, ಅಮೂಲ್ಯ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ ಮುಂತಾದವರು ಶುಭಾಶಯ ತಿಳಿಸಿದ್ದಾರೆ.
ಮಾನ್ವಿತಾ ಪ್ರಸ್ತುತ 'ಶಿವ 143',' ರಾಜಸ್ಥಾನ ಡೈರೀಸ್', 'ಹ್ಯಾಪಿಲಿ ಮ್ಯಾರೀಡ್' ಮುಂತಾದ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Manvitha Pics

 Shrishail Mulawad

Credits
Manvitha Kamath Instagram