Tap to Read ➤

'ಬಿಗ್ ಬಾಸ್' ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ

ಬಿಗ್ ಬಾಸ್ ಸೀಸನ್ 9 ಈಗಾಗಲೇ ಏಳು ವಾರಗಳನ್ನು ಮುಗಿಸಿದೆ.ಈ ವೇಳೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕುರಿತಂತೆ ಹಲವು ದಿನಗಳಿಂದ ನಾನಾ ಹೆಸರುಗಳು ಕೇಳಿಬರುತ್ತಿವೆ.
sowmya malnad
ಬಿಗ್ ಬಾಸ್ ಸೀಸನ್ 9 ಈಗಾಗಲೇ ಏಳು ವಾರಗಳನ್ನು ಮುಗಿಸಿ, ಎಂಟನೇ ವಾರಕ್ಕೆ ಕಾಲಿಡುತ್ತಿದೆ.
ಈ ವೇಳೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕುರಿತಂತೆ ಹಲವು ದಿನಗಳಿಂದ ನಾನಾ ಹೆಸರುಗಳು ಕೇಳಿ ಬರುತ್ತಿವೆ.
ಈ ಹಿಂದೆ ಸೋನು ಶ್ರೀನಿವಾಸ್ ಗೌಡ ದೊಡ್ಮನೆ ಮರು ಪ್ರವೇಶ ಮಾಡುತ್ತಾರೆ ಎಂದು ಹೇಳಲಾಗಿತ್ತು.
ಸೋನು ಶ್ರೀನಿವಾಸ್ ಗೌಡ ಹೆಸರು ಕೇಳಿ ಬಂದ ಬೆನ್ನಲ್ಲೇ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಕೂಡ ಬಿಗ್ ಬಾಸ್ ಮನೆ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಹರಿದಾಡಿತ್ತು.
ಇದೀಗ ಮೊನ್ನೆಯಷ್ಟೇ ಮನೆಯಿಂದ ಹೊರ ಬಂದಿರುವ ಸಾನ್ಯ ಅಯ್ಯರ್ ಅವರನ್ನು ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಒಳಗೆ ಕಳುಹಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಾನ್ಯ ಮತ್ತೆ ಹೋಗಲಿ ಎನ್ನುವ ಒತ್ತಾಯ ಕೂಡ ಕೇಳಿ ಬರುತ್ತಿದೆ.
ಬಿಗ್ ಬಾಸ್ ಮನೆಯಿಂದ ಆಚೆ ಬಂದ ತಕ್ಷಣ ಹಲವು ಮಾಧ್ಯಮಗಳಿಗೆ ಸ್ಪರ್ಧಿಗಳು ಸಂದರ್ಶನ ನೀಡುತ್ತಿದ್ದರು. ಆದರೆ, ಸಾನ್ಯ ಈವರೆಗೂ ಯಾವುದೇ ಮಾಧ್ಯಮಕ್ಕೆ ಸಿಕ್ಕಿಲ್ಲ.
More