Tap to Read ➤

ಓಟಿಟಿಯಲ್ಲಿ ಟಾಪ್ ಪರ್ಫಾಮರ್ ಆಗಿದ್ದ ರೂಪೇಶ್ ಶೆಟ್ಟಿ ಟಿವಿ ಸೀಸನ್ ಗೆಲ್ತಾರಾ?

ಬಿಗ್ ಬಾಸ್ ಕನ್ನಡ ಓಟಿಟಿ ಕಾರ್ಯಕ್ರಮದಲ್ಲಿ ಅತಿಹೆಚ್ಚು ಮತಗಳನ್ನು ಪಡೆದ ರೂಪೇಶ್ ಶೆಟ್ಟಿ ಸದ್ಯ ಟಿವಿ ಸೀಸನ್ ನಲ್ಲಿ ಟಾಪ್ 5 ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.
sowmya malnad
ಫೋಟೋ ಕ್ರೆಡಿಟ್: ಕಲರ್ಸ್ ಕನ್ನಡ
ಬಿಗ್ ಬಾಸ್ ಕನ್ನಡ ಓಟಿಟಿ ಕಾರ್ಯಕ್ರಮದಲ್ಲಿ ರೂಪೇಶ್ ಶೆಟ್ಟಿ ಟಾಪರ್ ಆಗಿದ್ದರು.
ವೀಕ್ಷಕರಿಂದ ಅತಿಹೆಚ್ಚು ಮತಗಳನ್ನು ಪಡೆದ ರೂಪೇಶ್ ಶೆಟ್ಟಿ 'ಬಿಗ್ ಬಾಸ್ ಕನ್ನಡ ಓಟಿಟಿ' ಕಾರ್ಯಕ್ರಮದ ಜನಪ್ರಿಯ ಸ್ಪರ್ಧಿಯಾಗಿ ಹೊರಹೊಮ್ಮಿದ್ದರು.
ಅತಿಹೆಚ್ಚು ವೋಟ್ ಪಡೆದ ರೂಪೇಶ್ ಶೆಟ್ಟಿಗೆ 5 ಲಕ್ಷ ರೂ. ಬಹುಮಾನವನ್ನೂ ನೀಡಲಾಗಿತ್ತು. ಓಟಿಟಿ ಮೂಲಕ ರೂಪೇಶ್ ಅತಿಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ.
ಓಟಿಟಿ ಕಾರ್ಯಕ್ರಮದಲ್ಲಿ ಸಾನ್ಯಾ ಅಯ್ಯರ್ ಮತ್ತು ಆರ್ಯವರ್ಧನ್ ಜೊತೆ ರೂಪೇಶ್ ಆತ್ಮೀಯರಾಗಿದ್ದರು. ಇದು ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲೂ ಮುಂದುವರೆದಿತ್ತು.
ಸಾನ್ಯಾ ಇದ್ದಷ್ಟು ದಿನ ರೂಪೇಶ್ ಬೇರೆಯವರೊಂದಿಗೆ ಹೆಚ್ಚು ಬೇರೆಯಲಿಲ್ಲ. ಇದು ಅವರಿಗೆ ಮೈನಸ್ ಪಾಯಿಂಟ್ ಆಗಿತ್ತು.
ಸಾನ್ಯಾ ಔಟ್ ಆದಮೇಲೂ ರೂಪೇಶ್ ಒಂದು ವಾರ ಅವರ ನೆನಪಲ್ಲೇ ತಲೆಗೆ ಬಟ್ಟೆ ಕಟ್ಟಿಕೊಂಡು ಒಂದು ವಾರ ಇದ್ದರು.
ಅನಂತರ ರೂಪೇಶ್ ಆಟದ ವೈಖರಿ ಬದಲಾಗಿತ್ತು. ರೂಪೇಶ್ ಎಲ್ಲರೊಂದಿಗೆ ಬೆರೆತು ಒಳ್ಳೆಯ ಮನೋರಂಜನೆ ನೀಡುತ್ತಿದ್ದರು.
ಇದೀಗ ಫೈನಲ್ ಹಂತಕ್ಕೆ ತಲುಪಿದ್ದು, ಬಿಗ್ ಬಾಸ್ ಪಟ್ಟ ಗೆಲ್ತಾರಾ ಕಾಡು ನೋಡಬೇಕಿದೆ.
More