»   » ಅಜ್ಮೀರ್ ದರ್ಗಾದಲ್ಲಿ ವೀಣಾ ಮಲಿಕ್ ಸಖತ್ ಕೂಲ್

ಅಜ್ಮೀರ್ ದರ್ಗಾದಲ್ಲಿ ವೀಣಾ ಮಲಿಕ್ ಸಖತ್ ಕೂಲ್

Written by: ನಿಲೋಫರ್ ಅನ್ಸಾರಿ
Subscribe to Filmibeat Kannada

ಕನ್ನಡದ 'ಸಿಲ್ಕ್ ಸಖತ್ ಹಾಟ್' ಚಿತ್ರದ ಮೂಲಕ ಗಾಂಧಿನಗರಕ್ಕೆ ಅಡಿಯಿಟ್ಟ ಬಾಲಿವುಡ್ ಬ್ಯೂಟಿ ಕ್ವೀನ್ ವೀಣಾ ಮಲಿಕ್ ಈಗ ರಂಜಾನ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಅವರು ಇತ್ತೀಚೆಗೆ ಅಜ್ಮೀರ್ ಷರೀಫ್ ನ ಹಜರತ್ ಖ್ವಾಜಾ ಮೊಯಿದ್ದೀನ್ ಚೀಸ್ ದರ್ಗಾಗೆ ಭೇಟಿ ನೀಡಿದ್ದರು.

ಜೀವನದಲ್ಲಿ ಯಶಸ್ಸು ದೊರಕಲಿ ಎಂದು ಅವರು ಪ್ರಾರ್ಥಿಸಿದರು. ಭಾರತ ಉಪಖಂಡದಲ್ಲೇ ಅಜ್ಮೀರ್ ಷರೀಫ್ ದರ್ಗಾ ಸೂಫಿ ಪುಣ್ಯಕ್ಷೇತ್ರಕ್ಕೆ ಬಹಳ ಪ್ರಾಧಾನ್ಯತೆ ಇದೆ. ದರ್ಗಾದಲ್ಲಿ ಅವರು ಹೂಗಳು ಹಾಗೂ ಚಾದರವನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.

ತಿಳಿಹಳದಿ ಬಣ್ಣದ ಸಲ್ವಾರ್ ತೊಟ್ಟಿದ್ದ ವೀಣಾ ಮಲಿಕ್ ಎಲ್ಲರ ಗಮನಸೆಳೆದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, "ಅಜ್ಮೀರ್ ಷರೀಫ್ ದರ್ಗಾಗೆ ಭೇಟಿ ನೀಡಿದ್ದು ನನಗೆ ಖುಷಿಕೊಟ್ಟಿದೆ. ಇಲ್ಲಿ ಪ್ರಾರ್ಥನೆ ಸಲ್ಲಿಸಿದ್ದಕ್ಕೆ ಅವಕಾಶ ಕೊಟ್ಟಿದ್ದು ನಿಜಕ್ಕೂ ಸಂತಸವಾಗಿದೆ..." ಸ್ಲೈಡ್ ಗಳಲ್ಲಿ ವೀಣಾ ಮಲಿಕ್ ದರ್ಗಾ ನೋಟಗಳು...

ಆ ಅಲ್ಲಾ ಒಳ್ಳೇದು ಮಾಡಲಿ ಎಂದು ಪ್ರಾರ್ಥಿಸಿದ ತಾರೆ

ಆ ಅಲ್ಲಾ ಒಳ್ಳೇದು ಮಾಡಲಿ ಎಂದು ಪ್ರಾರ್ಥಿಸಿದ ತಾರೆ

ನನಗೆ ಹಾಗೂ ನನ್ನ The City That Never Sleeps ಚಿತ್ರಕ್ಕೆ ಅಲ್ಲಾ ಒಳ್ಳೆಯದು ಮಾಡಲಿ ಎಂದು ಬೇಡಿಕೊಂಡೆ.

ನನ್ನನ್ನು ಆರಾಧಿಸುವ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ

ನನ್ನನ್ನು ಆರಾಧಿಸುವ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ

ನನ್ನ ಕುಟುಂಬ ಹಾಗೂ ನನ್ನನ್ನು ಆರಾಧಿಸುವ ಪ್ರತಿಯೊಬ್ಬರಿಗೂ ಒಳ್ಳೆಯದಾಗಲ್ಲಿ. ನನ್ನ ಎಲ್ಲಾ ಚಿತ್ರಗಳು ಆದಷ್ಟು ಬೇಗ ಬಿಡುಗಡೆಯಾಗಿ ಎಲ್ಲಾ ಚಿತ್ರಗಳು ಸಕ್ಸಸ್ ಆಗಲಿ ಎಂದು ಪ್ರಾರ್ಥಿಸಿಕೊಂಡಿದ್ದಾಗಿ ಹೇಳಿದ್ದಾರೆ.

ಇದೇ ಮೊದಲಲ್ಲ ಈ ದರ್ಗಾಗೆ ಭೇಟಿ ನೀಡುತ್ತಿರುವುದು

ಇದೇ ಮೊದಲಲ್ಲ ಈ ದರ್ಗಾಗೆ ಭೇಟಿ ನೀಡುತ್ತಿರುವುದು

ಈ ಹಿಂದೊಮ್ಮೆ 2011ರಲ್ಲೂ ವೀಣಾ ಈ ದರ್ಗಾಗೆ ಭೇಟಿ ನೀಡಿದ್ದರು. ಆಗ ಅವರ ಜೊತೆಯಲ್ಲಿ ಬಾಯ್ ಫ್ರೆಂಡ್ ಇದ್ದ. ಈಗ ಏಕಾಂಗಿಯಾಗಿ ಬಂದು ಪ್ರಾರ್ಥಿಸಿಕೊಂಡಿದ್ದಾರೆ.

ಪಂಜಾಬಿ ಚಿತ್ರದಲ್ಲೂ ವೀಣಾ ಮಲಿಕ್

ಪಂಜಾಬಿ ಚಿತ್ರದಲ್ಲೂ ವೀಣಾ ಮಲಿಕ್

ಏಕ್ ದಿಲ್ ದೇ ಮಾಮ್ಲಾ ಎಂಬ ಪಂಜಾಬಿ ಚಿತ್ರದಲ್ಲೂ ವೀಣಾ ಅಭಿನಯಿಸುತ್ತಿದ್ದಾರೆ. ಪಂಜಾಬಿ ಚಿತ್ರಗಳೆಂದರೆ ವೀಣಾಗೆ ಪಂಚಪ್ರಾಣವಂತೆ.

ಅಲ್ಲೂ ಗುರುತಿಸಿಕೊಳ್ಳುವ ಬಯಕೆ

ಅಲ್ಲೂ ಗುರುತಿಸಿಕೊಳ್ಳುವ ಬಯಕೆ

ಅಲ್ಲೂ ಗುರುತಿಸಿಕೊಳ್ಳಬೇಕು ಎಂದು ಬಯಸಿದ್ದೇನೆ. ಈಗ ತಾನು ಅಭಿನಯಿಸುತ್ತಿರುವ ಪಂಜಾಬಿ ಚಿತ್ರ ಶುದ್ಧ ಪಂಜಾಬಿ ಎಮೋಷನ್ಸ್ ನಿಂದ ಕೂಡಿದೆ" ಎನ್ನುತ್ತಾರೆ ವೀಣಾ.

ಸಿಲ್ಕ್ ಚಿತ್ರಕ್ಕೆ ಕೋರ್ಟ್ ತಡೆಯಾಜ್ಞೆ

ಸಿಲ್ಕ್ ಚಿತ್ರಕ್ಕೆ ಕೋರ್ಟ್ ತಡೆಯಾಜ್ಞೆ

ಕನ್ನಡದಲ್ಲಿ ವೀಣಾ ಅಭಿನಯದ ಸಿಲ್ಕ್ ಸಖತ್ ಹಾಟ್ ಚಿತ್ರ ಭಾರಿ ಸದ್ದು ಮಾಡಿತ್ತು. ಪಾಕಿಸ್ತಾನದ ಸೆಕ್ಸಿ ಬೆಡಗಿ ವೀಣಾ ಮಲಿಕ್ ಅಭಿನಯದ 'ಸಿಲ್ಕ್' ಚಿತ್ರ ಪ್ರಸಾರ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ.

ಸೆಪ್ಟೆಂಬರ್ 10ರವರೆಗೂ ಚಿತ್ರ ಪ್ರದರ್ಶನ ಇಲ್ಲ

ಸೆಪ್ಟೆಂಬರ್ 10ರವರೆಗೂ ಚಿತ್ರ ಪ್ರದರ್ಶನ ಇಲ್ಲ

ರಾಜ್ಯದ ಯಾವುದೇ ಚಿತ್ರಮಂದಿರದಲ್ಲಿ ಸೆಪ್ಟಂಬರ್ ಹತ್ತನೇ ತಾರೀಕಿನವರೆಗೆ ಚಿತ್ರ ಪ್ರದರ್ಶಿಸುವಂತಿಲ್ಲ ಎಂದು ಸಿವಿಲ್ ಕೋರ್ಟ್ ಆದೇಶ ನೀಡಿದೆ.

ಸಿಲ್ಕ್ ಸಖತ್ ಚಿತ್ರದಲ್ಲಿ ಬಿಸಿಬಿಸಿ ದೃಶ್ಯಗಳು

ಸಿಲ್ಕ್ ಸಖತ್ ಚಿತ್ರದಲ್ಲಿ ಬಿಸಿಬಿಸಿ ದೃಶ್ಯಗಳು

ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಬಿಸಿಬಿಸಿ ದೃಶ್ಯಗಳು ಚಿತ್ರದಲ್ಲಿ ಇವೆ. ರಾಜ್ಯದೆಲ್ಲಡೆ ಕಾನೂನು ಬಾಹಿರವಾಗಿ ಚಿತ್ರದ ಪೋಸ್ಟರ್ ಗಳು ರಾರಾಜಿಸುತ್ತಿವೆ. ಚಿತ್ರ ಪ್ರಸಾರಕ್ಕೆ ನಿಷೇಧ ಹೇರಬೇಕೆಂದು ಪಾಟೀಲ್ ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್.

ಮಹಿಳಾ ಸಮುದಾಯಕ್ಕೆ ಅವಮಾನ ಎಂಬ ಆರೋಪ

ಮಹಿಳಾ ಸಮುದಾಯಕ್ಕೆ ಅವಮಾನ ಎಂಬ ಆರೋಪ

ಅಲ್ಲದೇ, ಚಿತ್ರದ ಹಾಡುಗಳಲ್ಲಿನ ದೃಶ್ಯಗಳು ಅಶ್ಲೀಲವಾಗಿದೆ ಮತ್ತು ಮಹಿಳಾ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಭೀಮಾಶಂಕರ್ ಪಾಟೀಲ್ ಮನವಿಗೆ ಕೋರ್ಟ್ ಸ್ಪಂಧಿಸಿ ಸೆಪ್ಟಂಬರ್ 10ರವರೆಗೆ ಚಿತ್ರ ಪ್ರಸಾರಕ್ಕೆ ತಡೆಯಾಜ್ಞೆ ನೀಡಿದೆ.

ಚುಂಬನದಲ್ಲಿ ಗಿನ್ನಿಸ್ ದಾಖಲೆ ಮಾಡಿದ್ದ ವೀಣಾ

ಚುಂಬನದಲ್ಲಿ ಗಿನ್ನಿಸ್ ದಾಖಲೆ ಮಾಡಿದ್ದ ವೀಣಾ

ತೀರಾ ಇತ್ತೀಚೆಗೆ ಒಂದು ನಿಮಿಷದಲ್ಲಿ ಅತ್ಯಧಿಕ ಚುಂಬನಗಳನ್ನು ಪಡೆಯುವ ಮೂಲಕ ಗಿನ್ನಿಸ್ ದಾಖಲೆಗೆ ಸೇರಿದ್ದಾರೆ.

English summary
Bollywood beautiful actress Veena Malik visited Hazrat Khawaja Moinudding Hasan Chisty Dargah at Ajmer Sharif. She offered a prayer in Ajmer Sharif Dargah to seek a blessing for her success.
Please Wait while comments are loading...

Kannada Photos

Go to : More Photos