ತಿಂಗಳುಗಳ ಒಳಗೆ ಬಾಡಿದ ಪ್ರೀತಿ: ಹನ್ಸಿಕಾಗಾಗಿ ಸಿಂಬು ಖರ್ಚು ಮಾಡಿದ್ದು ಒಂದೆರಡು ಕೋಟಿ ಅಲ್ಲ!

ತಮಿಳು ಚಿತ್ರರಂಗದ ಕ್ರೇಜಿ ನಟ ಸಿಂಬು ಉರ್ಫ್ ಸಿಲಂಬರಸನ್. ಹಲವು ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಈ ನಟಿನಿಗೆ ಅಭಿಮಾನಿಗಳ ಸಂಖ್ಯೆ ಏನು ಕಮ್ಮಿಯಿಲ್ಲ. ತಮಿಳು ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಎಸ್‌ಟಿಆರ್ ಅಂತಲೇ ಕರೆಯುತ್ತಾರೆ. ಸದ್ಯ ಸಿಂಬು ಸಿನಿಮಾಗಳ ವಿಚಾರದಲ್ಲಿ ಚೂಸಿಯಾಗಿದ್ದರೂ, ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಸಿಂಬು ನಟನೆಯಲ್ಲಿ ಎಷ್ಟು ಫೇಮಸ್ ಆಗಿದ್ದಾರೋ ಅಷ್ಟೇ ವಿವಾದಗಳಿಂದಲೂ ಸುದ್ದಿಯಲ್ಲಿರುತ್ತಾರೆ. ಇವರ ಸುತ್ತ ಒಂದಿಷ್ಟಯ ಗಾಸಿಪ್‌ಗಳು ಸದ್ದು ಮಾಡುತ್ತಲೇ ಇರುತ್ತವೆ. ಸದ್ಯ ವಿವಾದಗಳಿಂದ ಕೊಂಚ ದೂರ ಉಳಿದಿದ್ದು, ತಮ್ಮ ವೃತ್ತಿ ಬದುಕಿನ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

Do you know how much money spent on Hansika Motwani when Tamil actor Simbu in love

ಆರಂಭದ ದಿನಗಳಲ್ಲೇ ಸಿಂಬು ಸ್ಟಾರ್ ಪಟ್ಟಕ್ಕೇರಿದ್ದರು. ಒಂದರ ಹಿಂದೊಂದು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದ್ದವು. ಸಿನಿಮಾಗಳು ಹೇಗೆ ಸೌಂಡು ಮಾಡುತ್ತಿದ್ದವೋ ಹಾಗೇ ಅವರ ಲವ್‌ ಸ್ಟೋರಿಗಳು ಅದಕ್ಕಿಂತ ಹೆಚ್ಚು ಸದ್ದು ಮಾಡಿವೆ. ಆದರೂ, ಸಿಂಬು ಪ್ರೀತಿಯಲ್ಲಿ ತಳುಕು ಹಾಕಿಕೊಂಡ ನಟಿಯರು ಯಾರೂ ಇವರನ್ನು ಮದುವೆ ಆಗಿಲ್ಲ.

ವಯಸ್ಸು 41 ಆಗಿದ್ದರೂ ಸಿಂಬು ತಮಿಳುನಾಡಿನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಆದರೆ, ಪ್ರೀತಿ ವಿಷಯದಲ್ಲಿ ಸಿಂಬು ಜೀನಿಯಸ್. ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ, ಹನ್ಸಿಕಾ ಮೋಟ್ವಾನಿ ಹೆಸರುಗಳು ಇವರೊಂದಿಗೆ ತಳುಕು ಹಾಕಿಕೊಂಡಿದ್ದವು. ಅಷ್ಟೇ ಅಲ್ಲದೆ ಸೂಪರ್‌ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾರನ್ನೂ ಪ್ರೀತಿ ಮಾಡುತ್ತಿದ್ದರು ಅಂತ ಗುಲ್ಲೆದ್ದಿತ್ತು. ಇಷ್ಟೇ ಅಲ್ಲದೆ ಇಬ್ಬರ ಆಡಿಯೋ ಕ್ಲಿಪ್‌ಗಳು ಕೂಡ ಲೀಕ್ ಆಗಿತ್ತು.

Do you know how much money spent on Hansika Motwani when Tamil actor Simbu in love

ಸಿಂಬು ಹಾಗೂ ನಯನತಾರಾ ಬ್ರೇಕಪ್ ಮಾಡಿಕೊಂಡ ಬಳಿಕ ನಟಿ ಹನ್ಸಿಕಾ ಮೋಟ್ವಾನಿ ಜೊತೆ ತಳುಕು ಹಾಕಿಕೊಂಡಿತ್ತು. ಇಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು ಅನ್ನೋ ಸುದ್ದಿಗಳು ಹರಿದಾಡಿದ್ದವು. ಇನ್ನೇನು ಮದುವೆ ಆಗಿಯೇ ಬಿಡುತ್ತಾರೆ ಅನ್ನುವ ಮಟ್ಟಕ್ಕೂ ಸುದ್ದಿ ಹೋಗಿತ್ತು. ಆದರೆ ಇಬ್ಬರ ಮದುವೆ ಸುದ್ದಿ ಬ್ರೇಕ್ ಆಗುತ್ತಿದ್ದಂತೆ ಇವರಿಬ್ಬರು ಬೇರೆಯಾಗಿದ್ದರು. ಹನ್ಸಿತಾ ಜೊತೆ ಸಿಂಬು ಗಾಢವಾಗಿ ಪ್ರೀತಿ ಮಾಡುತ್ತಿದ್ದರು ಅನ್ನೋ ಸುದ್ದಿ ಹರಿದಾಡಿತ್ತು.

ಸಿಂಬು ಸಿನಿಮಾಗಳು ಒಂದರ ಹಿಂದೊಂದು ಸೋಲುತ್ತಿದ್ದವು. ತಮ್ಮ ವೃತ್ತಿ ಬದುಕಿನ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದ್ದರು. ಇಂತಹ ಸಮಯದಲ್ಲಿಯೇ ಹನ್ಸಿಕಾ ಮೋಟ್ವಾನಿ ಬಿಟ್ಟು ಹೋಗಿದ್ದರು. ಈ ಬಗ್ಗೆ ಸಿಂಬು ಆಪ್ತರ ಮುಂದೆ, ತಮ್ಮ ಸಿನಿಮಾದ ಕಾರ್ಯಕ್ರಮದ ವೇಳೆ ಬೇಸರ ವ್ಯಕ್ತಪಡಿಸಿದ್ದರು ಎಂದು ವರದಿಗಳಾಗಿವೆ.

ಸಿಂಬು ಹಾಗೂ ಹನ್ಸಿಕಾ ಪ್ರೀತಿ ಉಳಿದಿದ್ದು ಕೆಲವೇ ತಿಂಗಳುಗಳು ಮಾತ್ರ. ಆದರೆ, ಅಷ್ಟರಲ್ಲಿಯೇ ಸಿಂಬು, ಈ ನಟಿಗಾಗಿ ಬರೋಬ್ಬರಿ 6 ಕೋಟಿ ರೂಪಾಯಿಯನ್ನು ಖರ್ಚು ಮಾಡಿದ್ದಂತೆ. ಇಂತಹದ್ದೊಂದು ಸುದ್ದಿ ಕಾಲಿವುಡ್‌ನಲ್ಲಿ ಹರಿದಾಡಿತ್ತು. ಆದರೆ, ಈ ಬಗ್ಗೆ ಸಿಂಬು ಎಲ್ಲಿಯೂ ಮಾತಾನಾಡಿಲ್ಲ. ಹನ್ಸಿಕಾ ಮೋಟ್ವಾನಿ ವಿರುದ್ಧವೂ ಹೇಳಿಕೆಗಳನ್ನು ಕೊಟ್ಟಿಲ್ಲ. ಹನ್ಸಿಕಾ ಮೋಟ್ವಾನಿ 2022ರಲ್ಲಿ ಗೆಳೆಯ ಸೊಹೇಲ್ ಕಥುರಿಯಾರನ್ನು ವಿವಾಹವಾಗಿದ್ದಾರೆ.

More from Filmibeat

English summary
Simbu in love with Hansika Motwani.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X