»   » 7 ವರ್ಷ ಪ್ರೀತಿಸಿ ಕೊನೆಗೂ ದಂಪತಿಗಳಾದ ಸೆಲೆಬ್ರಿಟಿ ಲವರ್ಸ್

7 ವರ್ಷ ಪ್ರೀತಿಸಿ ಕೊನೆಗೂ ದಂಪತಿಗಳಾದ ಸೆಲೆಬ್ರಿಟಿ ಲವರ್ಸ್

Written by: ಸೋನು ಗೌಡ
Subscribe to Filmibeat Kannada

2006 ರಲ್ಲಿ ತೆರೆಕಂಡ 'ವಿವಾಹ್' ಎಂಬ ರೋಮ್ಯಾಂಟಿಕ್ ಚಿತ್ರದಲ್ಲಿ ನಟ ಶಾಹೀದ್ ಕಪೂರ್ ಜೊತೆ ಮುಗ್ದವಾದ ನಟನೆಯ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದ ಬಾಲಿವುಡ್ ನಟಿ ಅಮ್ರಿತಾ ರಾವ್ ಅವರು ಇದೀಗ ತಮ್ಮ ದೀರ್ಘಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಿನ್ನೆ (ಮೇ 15) ನಟಿ ಅಮ್ರಿತಾ ರಾವ್ ಅವರು ತಮ್ಮ ಗೆಳೆಯ ಆರ್.ಜೆ ಅನ್ಮೋಲ್ ಜೊತೆ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಇವರಿಬ್ಬರು ಬರೋಬ್ಬರಿ 7 ವರ್ಷಗಳಿಂದ ಪ್ರೇಮಿಸುತ್ತಿದ್ದು, ಇದೀಗ ಸತತ 7 ವರ್ಷಗಳ ನಂತರ ತಮ್ಮಿಬ್ಬರ ಪ್ರೇಮವನ್ನು ಮದುವೆಯ ಮೂಲಕ ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದಾರೆ.[ಚಿತ್ರಪಟ: ಪ್ರೀತಿ ಝಿಂಟಾರ ಆರತಕ್ಷತೆ ಸಮಾರಂಭದಲ್ಲಿ ಬಾಲಿವುಡ್ ಗಣ್ಯರು]

'Vivah' Actress Amrita Rao tied the knot with RJ Anmol

ಈ ವಿಷಯವನ್ನು ಖುದ್ದು ಆರ್.ಜೆ ಅನ್ಮೋಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಖಚಿತಪಡಿಸಿದ್ದಾರೆ. "7 ವರ್ಷಗಳ ಹಿಂದೆ ನಮ್ಮಿಬ್ಬರ ಸಂದರ್ಶನ ಶುರು ಆಯಿತು, ಮುಂದುವರಿತಾನೇ ಇತ್ತು, ಇಂದು (ಮೇ 15) ಮತ್ತಷ್ಟು ಗಟ್ಟಿ ಆಗಿದೆ. ನಾವು ಮದುವೆ ಆಗಿದ್ದೇವೆ, ನಿಮ್ಮೆಲ್ಲರ ಶುಭ ಹಾರೈಕೆ ಇರಲಿ" ಅಂತ ಆರ್.ಜೆ ಅನ್ಮೋಲ್ ಟ್ವಿಟ್ಟರ್-ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದಾರೆ.[ಬಿಪಾಶಾ ಬಸು - ಕರಣ್ ಸಿಂಗ್ ಗ್ರೋವರ್ ಮದುವೆ ಫೋಟೋ ಆಲ್ಬಂ]

'Vivah' Actress Amrita Rao tied the knot with RJ Anmol

ನಟಿ ಅಮ್ರಿತಾ ರಾವ್ ಅವರು 'ಇಷ್ಕ್ ವಿಷ್ಕ್', 'ಜಾಲಿ ಎಲ್.ಎಲ್ ಬಿ', 'ದಿವಾರ್', 'ಮೈ ಹೂನಾ ನ' ಮತ್ತು 'ದ ಲೆಜೆಂಡ್ ಆಫ್ ಭಗತ್ ಸಿಂಗ್' ಮುಂತಾದ ಸಿನಿಮಾಗಳಲ್ಲಿ ಮಿಂಚಿದ್ದು, ಇದೀಗ ಸದ್ಯಕ್ಕೆ ಆಂಡ್ ಟಿವಿಯಲ್ಲಿ ಪ್ರಸಾರವಾಗುವ 'ಮೇರಿ ಆವಾಜ್ ಹೈ ಪೆಹಚಾನ್ ಹೈ' ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

English summary
‘Vivah’ actress Amrita Rao May 15th tied the knot with radio jockey Anmol after seven years of dating.
Please Wait while comments are loading...

Kannada Photos

Go to : More Photos