»   » 'ಬಿಗ್ ಬಾಸ್' ಸೀಸನ್ 3 - ಸುದೀಪ್ 20 ಕೋಟಿ ಡೀಲ್.!?

'ಬಿಗ್ ಬಾಸ್' ಸೀಸನ್ 3 - ಸುದೀಪ್ 20 ಕೋಟಿ ಡೀಲ್.!?

Posted by:
Subscribe to Filmibeat Kannada

ಕಿರುತೆರೆಯಲ್ಲಿ ಮತ್ತೆ 'ಬಿಗ್ ಬಾಸ್' ಹವಾ ಶುರುವಾಗಲಿದೆ. ಸದ್ಯದಲ್ಲೇ 'ಬಿಗ್ ಬಾಸ್ ಸೀಸನ್ -3' ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

'ಬಿಗ್ ಬಾಸ್-3' ಈ ಬಾರಿ ಕಲರ್ಸ್ ಕನ್ನಡ ವಾಹಿನಿ ಪಾಲಾಗಿರುವ ಸುದ್ದಿ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ವರದಿಯಾಗಿತ್ತು. ಹಾಗೇ, ಇಲ್ಲೂ ಹೋಸ್ಟ್ ಆಗಿ ಕಿಚ್ಚ ಸುದೀಪ್ ಮುಂದುವರಿಯಲಿದ್ದಾರೆ ಅಂತ ನಾವೇ ನಿಮಗೆ ಹೇಳಿದ್ವಿ. [ಬಿಗ್ ಬಾಸ್-3ಗೆ ಸುದೀಪ್ ಪಕ್ಕಾ, ಇನ್ನುಳಿದವರ ಲೆಕ್ಕ?]

ಈಗ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೇಳ್ತೀವಿ ಕೇಳಿ. ಕಿಚ್ಚ ಸುದೀಪ್ ಬರೀ 'ಬಿಗ್ ಬಾಸ್-3' ನಲ್ಲಿ ಮಾತ್ರ ಅಲ್ಲ. ಮುಂಬರುವ ಐದು 'ಬಿಗ್ ಬಾಸ್' ಸೀಸನ್ ಗಳಿಗೂ ಕಿಚ್ಚ ಸುದೀಪ್ ನಿರೂಪಣೆ ಮಾಡುವುದು ಪಕ್ಕಾ ಆಗಿದೆ. ಅದಕ್ಕಾಗಿ ನಿಮ್ಮೆಲ್ಲರ ಪ್ರೀತಿಯ 'ನಲ್ಲ' ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 20 ಕೋಟಿಗೂ ಹೆಚ್ಚು.! ಮುಂದೆ ಓದಿ....

ಮುಂದಿನ ಐದು 'ಬಿಗ್ ಬಾಸ್' ಸೀಸನ್ ಕಲರ್ಸ್ ನಲ್ಲಿ!

ಮುಂದಿನ ಐದು 'ಬಿಗ್ ಬಾಸ್' ಸೀಸನ್ ಕಲರ್ಸ್ ನಲ್ಲಿ!

'ಬಿಗ್ ಬಾಸ್' ಕಾರ್ಯಕ್ರಮದ ಮುಂದಿನ ಐದು ವರ್ಷಗಳ ಪ್ರಸಾರ ಹಕ್ಕುಗಳನ್ನ ಅತಿ ಹೆಚ್ಚು ಮೊತ್ತಕ್ಕೆ ಕಲರ್ಸ್ ಕನ್ನಡ ವಾಹಿನಿ ಪಡೆದುಕೊಂಡಿದೆ. [ಶುರುವಾಗಲಿದೆ 'ಬಿಗ್ ಬಾಸ್' ಕನ್ನಡ ಸೀಸನ್ 3]

ಇನ್ನೈದು ವರ್ಷ ಸುದೀಪ್ 'ಬಿಗ್ ಬಾಸ್'

ಇನ್ನೈದು ವರ್ಷ ಸುದೀಪ್ 'ಬಿಗ್ ಬಾಸ್'

ಕಿಚ್ಚ ಸುದೀಪ್ ಅಂದ್ರೆ 'ಬಿಗ್ ಬಾಸ್'. 'ಬಿಗ್ ಬಾಸ್' ಅಂದ್ರೆ ಕಿಚ್ಚ ಸುದೀಪ್ ಅನ್ನುವ ಸಕ್ಸಸ್ ಫಾರ್ಮುಲಾ ಕಲರ್ಸ್ ಕನ್ನಡ ವಾಹಿನಿಗೆ ಮನದಟ್ಟಾಗಿದೆ. ಬಿಗ್ ಬಾಸ್ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೆ ಏರಿರುವ ಸುದೀಪ್ ರನ್ನೇ ಮತ್ತೆ ನಿರೂಪಣೆ ಮಾಡುವಂತೆ ಒಪ್ಪಿಸುವಲ್ಲಿ ಕಲರ್ಸ್ ಕನ್ನಡ ವಾಹಿನಿ ಯಶಸ್ವಿಯಾಗಿದೆ. [ಈಬಾರಿ ಬಿಗ್ಬಾಸ್ ಮಾಡೋದು ಕೂಡ ತಮಾಷೇನೆ ಅಲ್ಲ!]

ಕಿಚ್ಚ ಸುದೀಪ್ ಗೆ 20+ ಕೋಟಿ ಡೀಲ್.!

ಕಿಚ್ಚ ಸುದೀಪ್ ಗೆ 20+ ಕೋಟಿ ಡೀಲ್.!

ಮೂಲಗಳ ಪ್ರಕಾರ, ಕಲರ್ಸ್ ಕನ್ನಡ ವಾಹಿನಿ ಕಿಚ್ಚ ಸುದೀಪ್ ಜೊತೆಗೆ 20+ ಕೋಟಿ ಡೀಲ್ ಮಾಡಿಕೊಂಡಿದೆ. ಮುಂದಿನ 5 'ಬಿಗ್ ಬಾಸ್' ಸೀಸನ್ ಗಳಿಗೆ ಸುದೀಪ್ ರನ್ನ ಈಗಲೇ ಬುಕ್ ಮಾಡಿಕೊಂಡಿದೆ. ಅದಕ್ಕೆ ಬರೋಬ್ಬರಿ 20 ಕೋಟಿಗೂ ಹೆಚ್ಚು ಹಣವನ್ನ ಕಲರ್ಸ್ ಕನ್ನಡ ವಾಹಿನಿ ಸುದೀಪ್ ಗೆ ನೀಡಿದೆ.

 ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ 'ಬಿಗ್ ಬಾಸ್' ಮನೆ

ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ 'ಬಿಗ್ ಬಾಸ್' ಮನೆ

ಕಳೆದ ಎರಡು ಕನ್ನಡ 'ಬಿಗ್ ಬಾಸ್' ಸೀಸನ್ ಗಳು ಲೋನಾವಾಲದಲ್ಲಿ ನಡೆದಿತ್ತು. ಆದ್ರೆ ಈ ಬಾರಿ ಬೆಂಗಳೂರು ಸಮೀಪದ ಬಿಡದಿಯಲ್ಲಿ ನಡೆಯಲಿದೆ. 'ಬಿಗ್ ಬಾಸ್' ಸೀಸನ್ 3 ಗಾಗಿ ಬಿಡದಿಯಲ್ಲಿರುವ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ 'ಬಿಗ್ ಬಾಸ್' ಮನೆಯ ಸ್ಪೆಷಲ್ ಸೆಟ್ ಮತ್ತು ಸ್ಟೇಜ್ ನಿರ್ಮಾಣವಾಗುತ್ತಿದೆ.

 'ಬಿಗ್ ಬಾಸ್'ನಲ್ಲಿ ಯಾರ್ಯಾರು ಇರಲಿದ್ದಾರೆ?

'ಬಿಗ್ ಬಾಸ್'ನಲ್ಲಿ ಯಾರ್ಯಾರು ಇರಲಿದ್ದಾರೆ?

'ಬಿಗ್ ಬಾಸ್' ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಕಲರ್ಸ್ ಕನ್ನಡ ವಾಹಿನಿ ಮೂಲಗಳ ಪ್ರಕಾರ ಹುಚ್ಚ ವೆಂಕಟ್, ಮೈತ್ರಿಯಾ ಗೌಡ, 'ವಜ್ರಕಾಯ' ನಟಿ ಶುಭ್ರ ಐಯ್ಯಪ್ಪ, ಕಾರುಣ್ಯ ರಾಮ್ ಹೆಸರು ಆಯ್ಕೆ ಪಟ್ಟಿಯಲ್ಲಿವೆ. ಇವರುಗಳಲ್ಲಿ ಯಾರು ಅಂತಿಮ ಅಂತ ಇನ್ನೂ ನಿರ್ಧಾರವಾಗಿಲ್ಲ. ['ಬಿಗ್ ಬಾಸ್' ಸ್ಪರ್ಧಿಯಾಗಲಿದ್ದಾರೆ 'ಹುಚ್ಚ ವೆಂಕಟ್'] (ಮಾಹಿತಿ ಕೃಪೆ-ಚಿತ್ರಲೋಕ)

English summary
According to the sources, Kannada Actor 'Kiccha' Sudeep has signed Rs 20 plus crore deal to host next five seasons of 'Bigg Boss' which will be aired in 'Colours Kannada Channel'.
Please Wait while comments are loading...

Kannada Photos

Go to : More Photos