» 

ಲಾಠಿ ಚಾರ್ಚ್ ನಡುವೆ ಡಾ.ವಿಷ್ಣು ಪುತ್ಥಳಿ ಅನಾವರಣ

Posted by:
 
Share this on your social network:
   Facebook Twitter Google+    Comments Mail

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 7 ಅಡಿಗಳ ಕಂಚಿನ ಪುತ್ಥಳಿ ಮಾರ್ಚ್ 1ರಂದು ಬೆಂಗಳೂರಿನ ಗೌರಿಪಾಳ್ಯದಲ್ಲಿ ಅನಾವರಣ ಮಾಡಲಾಯಿತು. ಇದಕ್ಕೆ ಅಪಾರ ಅಭಿಮಾನಿಗಳು ಸಾಕ್ಷಿಯಾದರು. ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸೇವಾ ಸಮಿತಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಭಾರತಿ ವಿಷ್ಣುವರ್ಧನ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾರ್ಚ್ 1ರ ಸಂಜೆ 7.30ಕ್ಕೆ ಪುತ್ಥಳಿಯನ್ನು ಅನಾವರಣ ಮಾಡಲಾಯಿತು.

ಈ ಸಂದರ್ಭದಲ್ಲಿ ಅಭಿಮಾನಿಗಳ ನಡುವೆ ನೂಕುನುಗ್ಗಲು ಉಂಟಾಯಿತು. ಇದನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನು ಮಾಡಬೇಕಾಯಿತು. ಸಮಾರಂಭದಲ್ಲಿ ಅನ್ನದಾನ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡಿದವು. (ಒನ್‌ಇಂಡಿಯಾ ಕನ್ನಡ)

Topics: ವಿಷ್ಣುವರ್ಧನ್, ಪುತ್ಥಳಿ, ಬೆಂಗಳೂರು, ಸಾಹಸ ಸಿಂಹ, vishnuvardhan, statue, bangalore, sahasa simha
English summary
Sahasa Simha Dr.Vishnuvardhan's 7 feet tall statue inauguration in Gowri Palya, Bangalore on 1st March. It was an memorable event for Dr.Vishnu fans. Crow was uncontrollable and police has used lathi charge.

Kannada Photos

Go to : More Photos