»   » ಬಿಗ್ ಬ್ರೇಕಿಂಗ್: 'ಮೆಜೆಸ್ಟಿಕ್'ಗೂ ಸುದೀಪ್ ಗೂ ಸಂಬಂಧವೇ ಇಲ್ಲ!

ಬಿಗ್ ಬ್ರೇಕಿಂಗ್: 'ಮೆಜೆಸ್ಟಿಕ್'ಗೂ ಸುದೀಪ್ ಗೂ ಸಂಬಂಧವೇ ಇಲ್ಲ!

Written by: BK
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ನಡುವೆ ಬಿರುಕು ಉಂಟಾಗಿರುವುದಕ್ಕೆ 'ಮೆಜೆಸ್ಟಿಕ್' ಚಿತ್ರವೇ ಕಾರಣವೆಂಬುದು ಸದ್ಯ ಚಿತ್ರಲೋಕದಲ್ಲಿ ಸಖತ್ ಹಾಟ್ ಟಾಪಿಕ್ ಆಗಿದೆ.[ದರ್ಶನ್ 'ಮೆಜೆಸ್ಟಿಕ್' ಬಗ್ಗೆ ಸಂದರ್ಶನದಲ್ಲಿ ಸುದೀಪ್ ಹೇಳಿದ್ದೇನು? ಇಲ್ಲಿದೆ ನೋಡಿ]

'ಮೆಜೆಸ್ಟಿಕ್' ಚಿತ್ರಕ್ಕೆ ದರ್ಶನ್ ರನ್ನ ಸುದೀಪ್ ಅವರು ಸೂಚಿಸಿದರೋ ಅಥವಾ ಬೇರೆ ಯಾರಾದ್ರೂ ಸೂಚಿಸಿದ್ರೂ ಎಂಬುದು ಬಿಸಿಬಿಸಿ ಚರ್ಚೆಯಾಗುತ್ತಿದೆ. ಇದೀಗ, ಈ ಸಮಸ್ಯೆಯನ್ನ ಬಗೆಹರಿಸುವುದಕ್ಕೆ ಸ್ವತಃ 'ಮೆಜೆಸ್ಟಿಕ್' ಚಿತ್ರತಂಡವೇ ಅಖಾಡಕ್ಕೆ ಇಳಿದಿದ್ದು, ನಿರ್ಮಾಪಕ ಎಂ.ಜೆ.ರಾಮಮೂರ್ತಿ ಅವರು ಸತ್ಯ ಬಿಚ್ಚಿಟ್ಟಿದ್ದಾರೆ.

ಮೆಜೆಸ್ಟಿಕ್ ಗೂ ಸುದೀಪ್ ಗೂ ಸಂಬಂಧವಿಲ್ಲ!

ಮೆಜೆಸ್ಟಿಕ್ ಗೂ ಸುದೀಪ್ ಗೂ ಸಂಬಂಧವಿಲ್ಲ!

''ಮೆಜೆಸ್ಟಿಕ್' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಎಂ.ಜೆ.ರಾಮಮೂರ್ತಿ ಅವರು ಹೇಳುವ ಪ್ರಕಾರ, 'ಮೆಜೆಸ್ಟಿಕ್' ಚಿತ್ರಕ್ಕೂ ಸುದೀಪ್ ಅವರಿಗೂ ಯಾವುದೇ ಸಂಬಂಧವಿಲ್ಲವಂತೆ. ದರ್ಶನ್ ರನ್ನ ಸುದೀಪ್ ಸೂಚಿಸಿದ್ದು ಎಂಬ ಹೇಳಿಕೆ ಸುಳ್ಳು'' ಎಂದು ನೇರವಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸುದೀಪ್ 'ಮೆಜೆಸ್ಟಿಕ್' ಚಿತ್ರವನ್ನ ರಿಜೆಕ್ಟ್ ಮಾಡಿದ್ರು!

ಸುದೀಪ್ 'ಮೆಜೆಸ್ಟಿಕ್' ಚಿತ್ರವನ್ನ ರಿಜೆಕ್ಟ್ ಮಾಡಿದ್ರು!

''ಮೆಜೆಸ್ಟಿಕ್' ಚಿತ್ರವನ್ನ ಮೊದಲು ಸುದೀಪ್ ಅವರು ಮಾಡಬೇಕಿತ್ತು. ಆದ್ರೆ, ಸುದೀಪ್ ಅವರು ಕಥೆಯನ್ನ ಒಪ್ಪಿಕೊಳ್ಳಲಿಲ್ಲ. ಹಾಗಾಗಿ, ಅಲ್ಲಿಗೆ ಅದು ಮುಗಿಯಿತು. ಮತ್ತೆ 'ಮೆಜೆಸ್ಟಿಕ್' ಚಿತ್ರಕ್ಕೆ ಸಂಬಂಧಪಟ್ಟಂತೆ ಸುದೀಪ್ ಅವರ ಬಳಿ ಮಾತನಾಡಿಲ್ಲ''.[ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?]

ದರ್ಶನ್ ರನ್ನ ಕರೆತಂದಿದ್ದು ಅಣಜಿ ನಾಗರಾಜ್!

ದರ್ಶನ್ ರನ್ನ ಕರೆತಂದಿದ್ದು ಅಣಜಿ ನಾಗರಾಜ್!

''ಸುದೀಪ್ ರಿಜೆಕ್ಟ್ ಮಾಡಿದ ಮೇಲೆ, ಚಿತ್ರದ ನಾಯಕನಿಗಾಗಿ ಹುಡುಕುತ್ತಿರುವಾಗ, ಅಣಜಿ ನಾಗರಾಜ್, ಅವರು ದರ್ಶನ್ ತೂಗುದೀಪ ಅವರನ್ನ ಭೇಟಿ ಮಾಡಿಸಿದರು. ನಮಗೆ ಒಕೆ ಆಯ್ತು ಸಿನಿಮಾ ಮಾಡಿದ್ವಿ'' ಎಂದು ರಾಮಮೂರ್ತಿ ಹೇಳಿದ್ದಾರೆ.['ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!]

ಬಾ.ಮಾ ಹರೀಶ್ ಹೇಳಿಕೆಯೇ ಬೇರೆ!

ಬಾ.ಮಾ ಹರೀಶ್ ಹೇಳಿಕೆಯೇ ಬೇರೆ!

'ಮೆಜೆಸ್ಟಿಕ್' ಚಿತ್ರದ ಮತ್ತೊಬ್ಬ ನಿರ್ಮಾಪಕ ಬಾ.ಮಾ ಹರೀಶ್ ಅವರು ಹೇಳುವ ಪ್ರಕಾರ, 'ಮೆಜೆಸ್ಟಿಕ್' ಚಿತ್ರಕ್ಕಾಗಿ ನಟ ದರ್ಶನ್ ಅವರನ್ನ ಸೂಚಿಸಿದ್ದು ಸುದೀಪ್ ಅಂತೆ. ಈ ಚಿತ್ರದ ಬಗ್ಗೆ ಸುದೀಪ್ ಅವರ ಬಳಿ ಮಾತನಾಡುವಾಗ, ದರ್ಶನ್ ಒಳ್ಳೆ ಹೈಟ್ ಇದ್ದಾನೆ, ಪರ್ಸನಾಲಿಟಿ ಎಲ್ಲ ಚೆನ್ನಾಗಿದೆ, ನೀನಾಸಂನಲ್ಲಿ ಆಕ್ಟಿಂಗ್ ಕಲಿತಿದ್ದಾನೆ ಮಾಡಿ ಎಂದು'' ಹರೀಶ್ ಅವರಿಗೆ ಹೇಳಿದ್ದರಂತೆ.['ದರ್ಶನ್-ಸುದೀಪ್' ಬಿರುಕು: 'ಮೆಜೆಸ್ಟಿಕ್' ನಿರ್ಮಾಪಕ ಬಾ.ಮಾ ಹರೀಶ್ ಸ್ಪಷ್ಟನೆ!]

'ಮೆಜೆಸ್ಟಿಕ್' ಚಿತ್ರದ ನಿಜ ಏನು?

'ಮೆಜೆಸ್ಟಿಕ್' ಚಿತ್ರದ ನಿಜ ಏನು?

ಹೀಗೆ, ದರ್ಶನ್ ಮತ್ತು ಸುದೀಪ್ ಅವರ ನಡುವಿನ ಸ್ನೇಹ ಸಮರಕ್ಕೆ ಕಾರಣವಾಗಿರುವ 'ಮೆಜೆಸ್ಟಿಕ್' ಚಿನಿಮಾದ ವಿವಾದ, ಬಗೆಹರಿಯದ ಗೊಂದಲವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇದರಲ್ಲಿ ಯಾವುದು ನಂಬುವುದು? ಯಾವುದನ್ನ ಬಿಡುವುದು ಎಂಬುದು ಉತ್ತರ ಸಿಗದ ಪ್ರೆಶ್ನೆಯಾಗಿದೆ.

English summary
Majestic Producer MG Ramamurthy Has Clarifid About Majestic Movie Controversy Between Darshan and Sudeep.
Please Wait while comments are loading...

Kannada Photos

Go to : More Photos