»   » ಉಪ್ಪಿ2 ಗಳಿಕೆ: ಮೂರೇ ದಿನಕ್ಕೆ ಸಿಲ್ವರ್ ಜ್ಯುಬಿಲಿ ಪ್ಲಸ್

ಉಪ್ಪಿ2 ಗಳಿಕೆ: ಮೂರೇ ದಿನಕ್ಕೆ ಸಿಲ್ವರ್ ಜ್ಯುಬಿಲಿ ಪ್ಲಸ್

Posted by:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ ಡಿಫರೆಂಟ್ ಪ್ರಯತ್ನಕ್ಕೆ ಎಲ್ಲಾ ಪ್ರೇಕ್ಷಕರು ಉಘೇ ಎಂದಿದ್ದಾರೆ ಅನ್ನೋದಕ್ಕೆ ಉತ್ತಮ ನಿದರ್ಶನ ಅಂದ್ರೆ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ ಉಪ್ಪಿ ಅವರ 'ಉಪ್ಪಿ 2' ಚಿತ್ರ.

ಅಂದಹಾಗೆ ಉಪೇಂದ್ರ ಅವರ ಸೈಕಾಲಜಿಕಲ್ ಥ್ರಿಲ್ಲರ್ 'ಉಪ್ಪಿ 2' ಕೇವಲ ಮೂರು ದಿನಗಳಲ್ಲಿ ಮಾಡಿದ ಕಲೆಕ್ಷನ್ ಕೇಳಿದ್ರೆ ನೀವು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದು ಗ್ಯಾರಂಟಿ. ಅಂತೂ ಗಾಂಧಿನಗರದಲ್ಲಿ 'ಉಪ್ಪಿ-ಟ್ಟು' ಬಿಸಿ ಇನ್ನೂ ಆರಿದಂತಿಲ್ಲ.[ಉಪ್ಪಿ 2 Unknown ನೋಡಿ, ಯೋಚ್ನೆ ಮಾಡ್ಬೇಡಿ]

ಉಪೇಂದ್ರ ಅವರ 'ಉಪ್ಪಿ 2' ಚಿತ್ರ ಬಿಡುಗಡೆಯಾದ ಒಂದು ದಿನದಲ್ಲಿ ಭಾರತದಾದ್ಯಂತ ಸುಮಾರು 9 ರಿಂದ 10 ಕೋಟಿ ಗಳಿಕೆ ಮಾಡಿದ್ದು, ವೀಕೆಂಡ್ ಗೆ ಸುಮಾರು 20 ಕೋಟಿ ಗಳಿಕೆ ಮಾಡಿ ಇಡೀ ಕನ್ನಡ ಚಿತ್ರರಂಗ ಇವರತ್ತ ಕಣ್ಣು ಹಾಯಿಸುವಂತೆ ಮಾಡಿದರು.

ಈ ಮೊದಲು 'ಉಪ್ಪಿ 2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮಿ' ಹಾಡಿನ ಮೂಲಕ ಇಡೀ ಗಾಂದಿನಗರವನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ ಉಪೇಂದ್ರ ಅವರು ಗಾಸಿಪ್ ಗಳ ಮೂಲಕ ಬಿಟ್ಟ ಪ್ರಚಾರ ಗಿಟ್ಟಿಸಿಕೊಂಡು ಪ್ರೇಕ್ಷಕರಿಗೆ ಮಾತ್ರ ಗಡದ್ದಾಗಿ ಅರಗಿಸಿಕೊಳ್ಳಲಾಗದಂತೆ 'ಉಪ್ಪಿ-ಟ್ಟು' ತಿನ್ನಿಸಿದ್ದಾರೆ.[ವಿಮರ್ಶಕರ ಪ್ರಕಾರ ಉಪ್ಪಿಟ್ಟು ರುಚಿ ಹೇಗಿದೆ?]

ಇನ್ನೂ ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ-ಟ್ಟು' ಬಿಸಿ ಬಿಸಿಯಾಗಿರುವಾಗಲೇ ಭರ್ಜರಿಯಾಗಿ ಸೇಲ್ ಆಗುತ್ತಿದೆ. ನಮ್ಮ ರಾಜಧಾನಿ ಬೆಂಗಳೂರು ಹಾಗೂ ಕರ್ನಾಟಕದಾದ್ಯಂತ 3 ದಿನಗಳ ಗಳಿಕೆ ಸುಮಾರು 25 ಕೋಟಿ ಆದರೆ ಮೂರು ದಿನಗಳಲ್ಲಿ ಓವರ್ ಆಲ್ 'ಉಪ್ಪಿ 2' ಮಾಡಿದ ಕಲೆಕ್ಷನ್ ಎಷ್ಟಿರಬಹುದು ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ...

(ಐ.ಎಮ್.ಡಿ) ಇಂಟರ್ ನೆಟ್ ಮೂವಿ ಡಾಟಬೇಸ್ ರೇಟಿಂಗ್ 9.7

(ಐ.ಎಮ್.ಡಿ) ಇಂಟರ್ ನೆಟ್ ಮೂವಿ ಡಾಟಬೇಸ್ ರೇಟಿಂಗ್ 9.7

ಇಡೀ ಪ್ರಪಂಚದಾದ್ಯಂತ ನಮ್ಮ ರಿಯಲ್ ಸ್ಟಾರ್ 'ಉಪ್ಪಿ 2' ಅದ್ಭುತ ರೇಟ್ ಗಳಿಸಿಕೊಂಡಿದೆ. ಒಟ್ಟಾರೆ 10ರಲ್ಲಿ 9.7 ಐ.ಎಮ್.ಡಿ ರೇಟ್ ಗಳಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಅತ್ಯಂತ ಎತ್ತರದ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. [ರಿಯಲ್ ಸ್ಟಾರ್ ಉಪ್ಪಿಟ್ಟು ತಿಂದೋರು ಕೊಟ್ಟ ಕಾಸೆಷ್ಟು?]

ಆಂಧ್ರಪ್ರದೇಶದಲ್ಲಿ 'ಉಪ್ಪಿ-ಟ್ಟು' ಬಾಕ್ಸಾಫೀಸ್ ಕಮಾಲ್

ಆಂಧ್ರಪ್ರದೇಶದಲ್ಲಿ 'ಉಪ್ಪಿ-ಟ್ಟು' ಬಾಕ್ಸಾಫೀಸ್ ಕಮಾಲ್

ತೆಲುಗು ವರ್ಷನ್ ಗೆ ಡಬ್ ಆದ ಉಪೇಂದ್ರ ಅವರ 'ಉಪ್ಪಿ 2' ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದ್ದು, ಜೊತೆಗೆ ಒಳ್ಳೆ ಕಲೆಕ್ಷನ್ ಕೂಡ ಮಾಡುತ್ತಿದೆ. [ಬಾಕ್ಸ್ ಆಫೀಸ್ ನಲ್ಲಿ 'Volcano' ಆಗಿ ಸಿಡಿದ ಉಪ್ಪಿ]

ನಾನು-ನೀನು ಅಂತ ತಲೆಯಲ್ಲಿ ಹುಳ ಬಿಟ್ಟ ಉಪೇಂದ್ರ

ನಾನು-ನೀನು ಅಂತ ತಲೆಯಲ್ಲಿ ಹುಳ ಬಿಟ್ಟ ಉಪೇಂದ್ರ

ಪ್ರೇಕ್ಷಕ ವರ್ಗದಿಂದ ಭಾರಿ ಚರ್ಚೆಗೆ ಗ್ರಾಸವಾಗಿರುವ 'ಉಪ್ಪಿ 2' ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ನಾನು-ನೀನು ಅಂತ ಹೇಳಿ ಹೇಳಿ ವೀಕ್ಷಕರ ತಲೆಯಲ್ಲಿ ಹುಳ ಬಿಟ್ಟು ಮತ್ತೊಮ್ಮೆ ತಾನೊಬ್ಬ ವೆರಿ ವೆರಿ ಡಿಫರೆಂಟ್ ಅನ್ನೋದನ್ನ ತೋರಿಸಿದ್ದಾರೆ.

ಎಲ್ಲರಿಗೂ ಇಷ್ಟವಾಗುವ 'ಉಪ್ಪಿ-ಟ್ಟು' ಡಿಫರೆಂಟ್ ಹಾಡುಗಳು

ಎಲ್ಲರಿಗೂ ಇಷ್ಟವಾಗುವ 'ಉಪ್ಪಿ-ಟ್ಟು' ಡಿಫರೆಂಟ್ ಹಾಡುಗಳು

ಆಸಕ್ತಿದಾಯಕ ಹಾಗು ಕನ್ ಫ್ಯೂಶನ್ ಸ್ಕ್ರಿಪ್ಟ್ ಗಳ ಮೂಲಕ ಅಭಿಮಾನಿಗಳು ತಲೆ ಚಚ್ಚಿಕೊಳ್ಳುವಂತೆ ಮಾಡಿರುವ ಉಪೇಂದ್ರ ಅವರು ಎಲ್ಲೆಲ್ಲೂ ಡಿಫರೆಂಟ್ ತೋರಿಸಲು ಸಾಧ್ಯವೋ ಅಲ್ಲೆಲ್ಲಾ ತೋರಿಸಿದ್ದಾರೆ.

 'ಉಪ್ಪಿ 2' ಬಿಡುಗಡೆಯಾದ ಮೂರೇ ದಿನಕ್ಕೆ 45 ಕೋಟಿ ಗಳಿಕೆ

'ಉಪ್ಪಿ 2' ಬಿಡುಗಡೆಯಾದ ಮೂರೇ ದಿನಕ್ಕೆ 45 ಕೋಟಿ ಗಳಿಕೆ

ಬಿಡುಗಡೆಯಾದ ಮೂರೇ ದಿನಕ್ಕೆ 45 ಕೋಟಿ ದುಡ್ಡು ಬಾಚಿಕೊಂಡಿರುವ 'ಉಪ್ಪಿ-ಟ್ಟು' ಇನ್ನೆರಡು ವಾರಗಳಲ್ಲಿ ಎಷ್ಟು ಗಳಿಸಬಹುದು ಅಂತ ನೀವೇ ಊಹಿಸಿ.

ಇವನ್ಯಾರೋ ಡಿಫರೆಂಟು ವೆರಿ ವೆರಿ ಡಿಫರೆಂಟು

ಇವನ್ಯಾರೋ ಡಿಫರೆಂಟು ವೆರಿ ವೆರಿ ಡಿಫರೆಂಟು

ಯಾವಾಗ್ಲೂ ಡಿಫರೆಂಟ್ ಯೋಚನೆಗಳನ್ನು ಮಾಡುವ ಉಪೇಂದ್ರ ಅವರು 'ಉಪ್ಪಿ 2' ಚಿತ್ರದ ಮೂಲಕ ತಮ್ಮ ಕೈ ಚಳಕ ತೋರಿಸಿ ಕೆಲವರಿಗೆ ಏಕೈಕ ಉಪೇಂದ್ರ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ 'ಉಪ್ಪಿ 2' ಬಿಗ್ಗೆಸ್ಟ್ ಓಪನ್ನಿಂಗ್

ಸ್ಯಾಂಡಲ್ ವುಡ್ ನಲ್ಲಿ 'ಉಪ್ಪಿ 2' ಬಿಗ್ಗೆಸ್ಟ್ ಓಪನ್ನಿಂಗ್

ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದಲ್ಲಿ ಡಿಫರೆಂಟಾಗಿ ಮೂಡಿ ಬಂದ 'ಉಪ್ಪಿ 2' ಇಡೀ ಕನ್ನಡ ಚಿತ್ರರಂಗದಲ್ಲಿ ಬಿಗ್ಗೆಸ್ಟ್ ಓಪನ್ನಿಂಗ್ ಪಡೆದುಕೊಂಡ ಚಿತ್ರ. ಇದೀಗ ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 45 ಕೋಟಿ ಗಳಿಸುವ ಮೂಲಕ ಉಪ್ಪಿ ಅವರು ಪ್ರೇಕ್ಷಕ ವರ್ಗಕ್ಕೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

English summary
Kannada movie 'Uppi 2' Three days Box office collection, Overall collection of the movie is in 45 crore. 'Uppi 2' movie feature Kannada actor Upendra, Actress Kristina Akheeva, Actress Parul Yadav in the lead role. The movie is directed by Upendra.
Please Wait while comments are loading...

Kannada Photos

Go to : More Photos