ಮಳೆನೇ ರೈತ ಮಳೆಗಾಗಿ ಕಾದು ಕೂತಂತೆ, ಸೊರಗಿ ಸುಣ್ಣವಾಗಿರೋ ಸ್ಯಾಂಡಲ್‌ವುಡ್‌ಗೆ ಸೆಕೆಂಡ್‌ ಹಾಫ್‌ನಲ್ಲಾದರೂ ಸಕ್ಸಸ್ ಸಿಗಬಹುದೇ? ಎಂದು ಸಿನಿಮಾ ಮಂದಿ ಎದುರು ನೋಡುತ್ತಿದ್ದಾರೆ. ಮಳೆ ಬಂದು ಮುಖದಲ್ಲಿ ನಗು ತರಿಸಿ, ಮತ್ತೆ ಹಾಗೇ ಮಾಯವಾದಂತೆ ಕನ್ನಡ ಚಿತ್ರರಂಗದ ಪರಿಸ್ಥಿತಿ. ಪ್ರತಿ ಸಿನಿಮಾ ತೆರೆಕಂಡಾಗಲೂ ಹೀಗೆ ಸೋಲಿನ ಭೀತಿಯಿಂದ ಹೊರತರುತ್ತೆ ಅನ್ನೋ ನಂಬಿಕೆ. ಅದೇ ನಂಬಿಕೆ 'ಮದರ್ ಪ್ರಾಮಿಸ್' ಸಿನಿಮಾ ಮೇಲೂ ಇದೆ.

Advertisement

ಡಾಲಿ ಧನಂಜಯ್ ನಿರ್ಮಿಸಿ ನಟಿಸಿರುವ, ಗೆಳೆಯ ಪೂರ್ಣಚಂದ್ರ ಮೈಸೂರು ನಿರ್ದೇಶನ ಮಾಡಿರುವ 'ಮದರ್ ಪ್ರಾಮಿಸ್‌'ಗೆ ಮೊದಲ ದಿನ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಎಲ್ಲಾ ಕಡೆಯಿಂದಲೂ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಇದೇ ಪ್ರತಿಕ್ರಿಯೆ ಬಾಕ್ಸಾಫೀಸ್‌ನಲ್ಲಿ ಕಾಣಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ, ಮೊದಲ ದಿನ ಅಂದುಕೊಂಡಂತೆ ಆಗಿಲ್ಲ.

Advertisement

ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕ ಹಾಕಿರೋ ಪ್ರಕಾರ, 'ಮದರ್ ಪ್ರಾಮಿಸ್' ಕಲೆಕ್ಷನ್ ಮೊದಲ ದಿನ ವೀಕ್ ಇದೆ. ಇನ್ನೇನಿದ್ದರೂ ವೀಕೆಂಡ್‌ನಲ್ಲಿ ಸಿನಿಮಾದ ಕಲೆಕ್ಷನ್ ಏರಿಕೆಯಾದರೆ ಕನ್ನಡ ಚಿತ್ರರಂಗಕ್ಕೊಂದು ಸೂಪರ್‌ ಸಕ್ಸಸ್ ಸಿನಿಮಾ ಸಿಗಬಹುದು. ಅಷ್ಟಕ್ಕೂ ಡಾಲಿಯ 'ಮದರ್ ಪ್ರಾಮಿಸ್' ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ಎಷ್ಟು? ವೀಕೆಂಡ್ ಕಥೆ ಏನಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಮೊದಲ ದಿನ 'ಮದರ್ ಪ್ರಾಮಿಸ್' ಏನಾಯ್ತು?

ಧನಂಜಯ್ ಮತ್ತು ಅವರ ತಂಡ ರಾಜ್ಯದ ಪ್ರಮುಖ ನಗರಗಳಲ್ಲಿ ಪ್ರೀಮಿಯರ್ ಮಾಡಿದ್ದರು. ಎಲ್ಲೆಲ್ಲಿ ಪೇಯ್ಡ್ ಪ್ರೀಮಿಯರ್ ಮಾಡಿದ್ರೋ ಅಲ್ಲೆಲ್ಲ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ನೋಡಿದವರಿಗೆಲ್ಲ ಇಷ್ಟ ಆಗಿತ್ತು. ಹೀಗಾಗಿ ಮೊದಲ ದಿನದ ಕಲೆಕ್ಷನ್ ಮೇಲೆ ಎಲ್ಲರ ಕಣ್ಣಿಟ್ಟಿತ್ತು. ಸುಮಾರು 200ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಮದರ್ ಪ್ರಾಮಿಸ್' ತೆರೆಕಂಡಿದ್ದು, Sacnilk ವರದಿ ಪ್ರಕಾರ ಮೊದಲ ದಿನ ರಾಜ್ಯಾದ್ಯಂತ ಸಿನಿಮಾ 31 ಲಕ್ಷ ರೂಪಾಯಿ (Net) ಕಲೆಕ್ಷನ್ ಮಾಡಿದೆ.

Advertisement

ವಿತರಕರ ವಲಯಕ್ಕೆ ಸಿಕ್ಕಿರೋ ಲೆಕ್ಕವೇನು?

Sacnilk ಹಾಗೂ ಕರ್ನಾಟಕ ಡಿಸ್ಟ್ರಿಬ್ಯೂಟರ್‌ಗಳ ಲೆಕ್ಕದಲ್ಲಿ ಯಾವಾಗೂ ಚಿಕ್ಕದೊಂದು ವ್ಯತ್ಯಾಸ ಇದ್ದೇ ಇರುತ್ತೆ. ಬಾಕ್ಸಾಫೀಸ್ ಅಂಕಿ ಅಂಶಗಳು ಹೆಚ್ಚಿರುತ್ತೆ. ಇಲ್ಲಾ ಕಮ್ಮಿ ಇರುತ್ತೆ. 'ಮದರ್ ಪ್ರಾಮಿಸ್' ಮೊದಲ ದಿನದ ಕಲೆಕ್ಷನ್ ವಿತರಕರ ವಲಯಕ್ಕೆ ಸಿಕ್ಕಿರೋ ಪ್ರಕಾರ 51 ಲಕ್ಷ ರೂಪಾಯಿ. ಹೀಗಾಗಿ ಸುಮಾರು 20 ಲಕ್ಷ ರೂಪಾಯಿ ವ್ಯತ್ಯಾಸವಿದೆ.

ವೀಕೆಂಡ್‌ ಮೇಲೆ ಕಣ್ಣು

'ಮದರ್ ಪ್ರಾಮಿಸ್'ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಮೌತ್ ಪಬ್ಲಿಸಿಟಿಯಿಂದ ವೀಕೆಂಡ್‌ನಲ್ಲಿ ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಾರಾ? ಅನ್ನೋದು ನೋಡಬೇಕಿದೆ. ಶನಿವಾರ ಹಾಗೂ ಭಾನುವಾರ ಈ ಎರಡು ದಿನಗಳಲ್ಲಿ 'ಮದರ್ ಪ್ರಾಮಿಸ್' ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೆ ಅನ್ನೋ ಕುತೂಹಲ ಮೂಡಿಸಿದೆ. ಅದರಲ್ಲೂ ಭಾನುವಾರದ ಕಲೆಕ್ಷನ್ ಮೇಲೆ ಸಿನಿಮಾ ಮಂದಿ ಕಣ್ಣಿಟ್ಟಿದ್ದು, ಇಲ್ಲಿ ಒಂದೊಳ್ಳೆ ಕಲೆಕ್ಷನ್ ಆದರೆ ಮುಂದಿನ ಒಂದು ವಾರ ಕಲೆಕ್ಷನ್ ಪಿಕಪ್ ಆಗುತ್ತೆ.

Advertisement

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.