ಕನ್ನಡದ ಖ್ಯಾತ ಲೇಖಕ ಪಿ.ಲಂಕೇಶ್ ಅವರ ಮಕ್ಕಳು ಸಿನಿಮಾ ರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ಇಂದ್ರಜಿತ್ ಲಂಕೇಶ್, ಕವಿತಾ ಲಂಕೇಶ್ ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಕೂಡ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಈಗ ಕವಿತಾ ಲಂಕೇಶ್ ಅವರ ಪುತ್ರಿ ಇಶಾ ಲಂಕೇಶ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

Advertisement

ಪಿ.ಲಂಕೇಶ್ ಅವರಾಗಲಿ, ಅವರ ಮಕ್ಕಳಾದ ಕವಿತಾ ಲಂಕೇಶ್, ಇಂದ್ರಜಿತ್ ಲಂಕೇಶ್ ಅವರಾಗಲಿ ಸಿನಿಮಾವನ್ನು ಅವರದ್ದೇ ಶೈಲಿಯಲ್ಲಿ ನೋಡಿದ್ದಾರೆ. ಅವರ ಮುಂದಿನ ಪೀಳಿಗೆ ಕೂಡ ಸ್ವತಂತ್ರವಾಗಿಯೇ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಮನೆಯಲ್ಲಿಯೇ ಇಬ್ಬರು ನಿರ್ದೇಶಕರು ಇದ್ದರೂ, ತಮ್ಮ ಮಗಳ ಚೊಚ್ಚಲ ಸಿನಿಮಾವನ್ನು ಬೇರೊಂದು ನಿರ್ಮಾಣ ಸಂಸ್ಥೆ ಮಾಡಬೇಕು ಅನ್ನೋ ಆಸೆ ಕವಿತಾ ಲಂಕೇಶ್ ಅವರದ್ದಾಗಿತ್ತು. ತಮ್ಮ ಪುತ್ರಿ ಇಶಾ ಲಂಕೇಶ್ ಮೊದಲ ಸಿನಿಮಾ ಪ್ರಾಜೆಕ್ಟ್‌ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆಗಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

Advertisement

ಪ್ರಶ್ನೆ: ನಿಮ್ಮ ಮಗಳ ಚೊಚ್ಚಲ ಸಿನಿಮಾ ಅನೌನ್ಸ್ ಆಗಿದೆ. ನೀವೇ ಯಾಕೆ ಡೆರೆಕ್ಟ್ ಮಾಡಲಿಲ್ಲ?

ಕವಿತಾ ಲಂಕೇಶ್: ನಾನೇ ಮಾಡಬಹುದಿತ್ತು. ಆದರೆ, ನನ್ನ ಪ್ರಕಾರ ಒಂದು ಆರ್ಟಿಸ್ಟ್ ಆಗಿ ಸ್ವಂತ ಪ್ರೊಡಕ್ಷನ್‌ಗಿಂತ ಬೇರೊಂದು ಸಂಸ್ಥೆಯಲ್ಲಿ ಸಿನಿಮಾ ಮಾಡಿದಾಗ ಅದರ ಕಷ್ಟ ಸುಖಗಳಾಗಲಿ, ಹ್ಯಾಂಡಲ್ ಮಾಡೋದಾಗಲಿ, ಸ್ವಾತಂತ್ರ್ಯವಾಗಿ ಯೋಚನೆ ಮಾಡೋದಾಗಲಿ ಗೊತ್ತಾಗುತ್ತೆ. ನನ್ನ ಪ್ರಕಾರ ಅವರು ಬೇರೆ ಪ್ರೊಡಕ್ಷನ್ ಹೌಸ್‌ನಲ್ಲಿಯೇ ಕೆಲಸ ಮಾಡಬೇಕು. ಆಗ ಯಾವುದೇ ಯಶಸ್ಸು ಅಥವಾ ಸೋಲು ಅದು ಅವರದ್ದೇ ಇರುತ್ತೆ. ಸೋ ನಾವು ಪ್ಲಾಟ್‌ಫಾರ್ಮ್ ಮಾಡೋದಲ್ಲ. ಕ್ರಿಯೇಟಿವಿಟಿ ಆಗಲಿ, ರಂಗಶಂಕರದಲ್ಲಿ ಅಭ್ಯಾಸಗಳು ಮಾಡೋದಾಗಲಿ, ಇಲ್ಲವೇ ಅಶೋಕ ಯೂನಿವರ್ಸಿಟಿ ಪರ್ಫಾರ್ಮಿಂಗ್ ಆರ್ಟ್ಸ್ ಕಲಿಯೋದಾಗಲಿ.. ಅವಳು ಪೇಂಟಿಂಗ್ ತುಂಬಾ ಚೆನ್ನಾಗಿ ಮಾಡ್ತಾಳೆ. ಇದಕ್ಕೆಲ್ಲ ಪ್ರೋತ್ಸಾಹ ನೀಡುವುದು ಪೋಷಕರಾಗಿ ನನ್ನ ಕರ್ತವ್ಯ ಅನ್ಸುತ್ತೆ. ನಾವು ರೆಕ್ಕೆ ಕೊಡಬಹುದು, ಅವರು ಹಾರಬೇಕು. ನಾವು ಹಾರ್ಸಿ ತೋರಿಸೋಕೆ ಆಗಲ್ಲ.

Advertisement

ಪ್ರಶ್ನೆ:ಮನೆಯಲ್ಲಿ ಇಬ್ಬಿಬ್ಬರು ಡೈರೆಕ್ಟರ್ ಇದ್ದೀರಿ.. ಆದರೂ ಬೇರೆ ಪ್ರೊಡಕ್ಷನ್ ಯಾಕೆ?

ಕವಿತಾ ಲಂಕೇಶ್: ಇಲ್ಲ, ಇಂದ್ರಜಿತ್ ಕೇಳಿದ್ದ.. ಆದರೆ, ಆಗ ಇಶಾ ಇನ್ನು ಕಾಲೇಜಿನಲ್ಲಿ ಓದುತ್ತಿದ್ದಳು. ಅದು ಇಲ್ಲಲ್ಲ, ದೆಹಲಿ ಕಾಲೇಜ್‌ನಲ್ಲಿ ಓದ್ತಾ ಇದ್ದಳು. ಹೀಗಾಗಿ ನಮಗೆ ಅವರು ಶಿಕ್ಷಣ ಮುಗಿಸಲಿ ಅಂತ ಇತ್ತು. ಪ್ರೀತಮ್ ಗುಬ್ಬಿ ಅವರ ಸಬ್ಜೆಕ್ಟ್ ಹೇಳಿದಾಗ ಮಗಳಿಗೆ ಇಷ್ಟ ಆಯ್ತು. ಅವಳಿಗೆ ಇಷ್ಟ ಆಯ್ತು. ಈ ಸಿನಿಮಾವನ್ನು ಒಪ್ಕೊಂಡಿದ್ದಾಳೆ. ಇದು ರೆಗ್ಯುಲರ್ ಸಿನಿಮಾ ಅಲ್ಲ. ಎಲ್ಲರೂ ಹೇಳೋ ಹಾಗೇ ತುಂಬಾ ಬಬ್ಲಿ ಗರ್ಲ್‌ಗಷ್ಟೇ ಸೀಮಿತವಾಗಿರದೆ. ಸ್ವತಂತ್ರವಾಗಿರುವ ಹುಡುಗಿ ಬಗ್ಗೆ ಮಾಡಿದ್ದಾರೆ. ಕಥೆ ಚೆನ್ನಾಗಿದೆ ಅಂತ ನನಗೂ ಅನಿಸಿತು.

Advertisement

ಪ್ರಶ್ನೆ: ಇದು ಜೆನ್-ಝಿ (Gen-Z) ಮೂವಿ ಅಂತ ಗೆಸ್ ಮಾಡಬಹುದಾ?

ಕವಿತಾ ಲಂಕೇಶ್: ಖಂಡಿತವಾಗ್ಲೂ.. ನನಗೂ ಹಾಗೇ ಅನಿಸಿದೆ. ನನ್ನ ಮಗಳಿನ ವಯಸ್ಸಿಗೆ ತಕ್ಕಂಗೆ ಕಥೆ ಇದೆ. ಹಾಗೇ ಪ್ರೀತಂ ಗುಬ್ಬಿ ಚೆನ್ನಾಗಿ ಸಿನಿಮಾ ಮಾಡ್ತಾರೆ ಅಂದ್ಕೊಂಡಿದ್ದೀನಿ.

ಪ್ರಶ್ನೆ: ನಿಮ್ಮ ಮಗಳಿಗೆ ನಟನೆ ಬಗ್ಗೆ ಆಸಕ್ತಿಯಿದೆ ಅಂತ ಗೊತ್ತಾಗಿದ್ದು ಯಾವಾಗ?

ಕವಿತಾ ಲಂಕೇಶ್: ಆಕ್ಚುಲಿ, ನಾನು ಪ್ರೆಗ್ನೆಂಟ್ ಇದ್ದಾಗಿನಿಂದ ಅವಳು ಸಿನಿಮಾ ಜೊತೆಗೆ ಇದ್ದಳು. ನಾನು 'ಮಾಲ್ಗುಡಿ ಡೇಸ್' ಮಾಡಿದಾಗ ಐದು ತಿಂಗಳು ಪ್ರೆಗ್ನೆಂಟ್. ಅದಾದ ಮೇಲೂ ನಾನು ಮೈಸೂರಲ್ಲಿ 'ಅವ್ವ' ಮಾಡಿದಾಗ ನಮ್ಮ ಅಮ್ಮ ಸೆಟ್ಟಿಗೆ ಇಶಾಳನ್ನು ಕರ್ಕೊಂಡು ಬರೋರು. ವೀಕೆಂಡ್‌ನಲ್ಲಿ ಜೊತೆಗಿರೋಕೆ ಅಂತ. ಅದಾದ ಮೇಲೆ 'ಕರಿಯ ಕಣ್ಬಿಟ್ಟ' ಸಿನಿಮಾದಲ್ಲಂತೂ ಫುಲ್ ಟೈಮ್ ನಮ್ಮ ಜೊತೆಗೆ ಇದ್ದಳು. ಆರ್ಟ್ ಡಿಪಾರ್ಟ್ಮೆಂಟ್‌ಗೆ ಸಹಾಯ ಮಾಡುತ್ತಿದ್ದಳು. ಸಿನಿಮಾ ಹಾಗೂ ನಾಟಕದ ವಾತಾವರಣದಲ್ಲೇ ಬೆಳೆದಿದ್ದಾಳೆ.ಮೊನ್ನೆ ಪ್ರಕಾಶ್ ರೈ 'ನಿರ್ದಿಗಂತ'ಗೆ ಕರೆದು ಬಂದು ಕೋರ್ಸ್ ಮಾಡು ಅಂದರು. ಬಾಡಿ ಲ್ಯಾಂಗ್ವೇಜ್ ಬಗ್ಗೆ ಕೋರ್ಸ್ ಅದು. ಫ್ರೆಂಚ್ ಡೈರೆಕ್ಟರ್ ಬಂದಿದ್ರು. 15 ದಿನ ಹೋಗಿ ಆ ಕೋರ್ಸ್ ಮಾಡಿ ಬಂದಿದ್ದಾಳೆ. ಆ ತರ ಬೇರೆ ಬೇರೆ ಮಾಡ್ತಾ ಇರ್ತಾಳೆ.

Advertisement

ಪ್ರಶ್ನೆ: ಇಶಾ ಅವರಿಗೆ ನಟನೆ ಇದೇ ಮೊದಲಾ?

ಕವಿತಾ ಲಂಕೇಶ್: ದೆಹಲಿಯಲ್ಲಿ ನಾಟಕ ಡೈರೆಕ್ಟ್ ಮಾಡಿದ್ದಾಳೆ. ಕಮ್ಯುನಲ್ ಹಾರ್ಮೋನಿ ತರ ಒಂದು ಫೋರ್ ಸ್ಟೋರೀಸ್ ಇಟ್ಕೊಂಡು 'ಬಾಂಬೆ ಡೈಯಿಂಗ್' ಅಂದರೆ D-Y-I-N-G ಅಂತ. ಈ ನಾಟಕವನ್ನು ಡೈರೆಕ್ಟ್ ಮಾಡಿದ್ದಾಳೆ. 'ಹೋಲ್ಡ್ ದ ಮಶ್ರೂಮ್' ಅಂತ ಒಂದು ಇಂಗ್ಲಿಷ್ ನಾಟಕದಲ್ಲಿ ಆಕ್ಟ್ ಮಾಡಿದ್ದಾಳೆ. ಇಬ್ಬರೇ ಇರುವ ನಾಟಕ ಅದು. ಹೀಗೆ ನಟನೆ ಮಾಡ್ಕೊಂಡು ಬಂದಿದ್ದಾಳೆ. ಅಶೋಕ ಯೂನಿವರ್ಸಿಟಿಯಲ್ಲಿ ಪರ್ಫಾರ್ಮಿಂಗ್ ಆರ್ಟ್ಸ್ ಮಾಡಿದ್ದಾಳೆ. ಅಲ್ಲಿ ಆಕ್ಟಿಂಗ್ ಅನ್ನೇ ಪ್ರಮುಖ ವಿಷಯವಾಗಿ ತೆಗೆದುಕೊಂಡಿದ್ದಳು. ಅದಾದ ಮೇಲೆ ಬರ್ಮಿಂಗ್ಹ್ಯಾಮ್ ಯುಕೆನಲ್ಲಿ ಕೋರ್ಸ್‌ ಮಾಡಿದ್ದಾಳೆ.

Advertisement

ಪ್ರಶ್ನೆ: ಪಾತ್ರಕ್ಕೆ ಪ್ರಾಮುಖ್ಯತೆ ಸಿಕ್ಕಿದ ಸಿನಿಮಾದಲ್ಲಿ ಮಾತ್ರ ನಟಿಸ್ತಾರಾ?

ಕವಿತಾ ಲಂಕೇಶ್: ಯಾವುದೇ ಸಿನಿಮಾ ಆಗ್ಲಿ, ಕಮರ್ಷಿಯಲ್-ಆರ್ಟ್ ಅಂತ ಅಲ್ಲ, ಒಳ್ಳೆ ಸಿನಿಮಾ ಆಗಲಿ. ಬರೀ ಒಂದು ಎರಡು ಸೀನು ಲವ್ ಸೀನ್‌ಗೆ ಸೀಮಿತ ಆಗಬಾರದು. ನನ್ನ ಮಗಳು ಅಂತ ಅಲ್ಲ, ಯಾವುದೇ ಮಹಿಳೆ ಆಗಿದ್ದರೂ ಸಿನಿಮಾದಲ್ಲಿ ಅವರಿಗೊಂದು ಕ್ಯಾರೆಕ್ಟರೈಸೇಶನ್ ಇರಬೇಕು. ಈಗ ಭಾರತಿ ವಿಷ್ಣುವರ್ಧನ್ ಅವರನ್ನ ನಾನು ಪ್ರೀತಿ ಪ್ರೇಮ ಪ್ರಣಯದಲ್ಲಿ ಹಾಡುಗಾರ್ತಿ ಮಾಡಿದ್ದೆ. ಬರೀ ಒಂದು ರಿಟೈರ್ಡ್ ಮುದುಕಿಯ ಪಾತ್ರ ಅಲ್ಲ ಅದು. ಅವರಿಗೂ ಒಂದು ಬ್ಯಾಕ್‌ಗ್ರೌಂಡ್ ಇತ್ತು. ಅವರಿಗೂ ಒಂದು ಹವ್ಯಾಸ ಇತ್ತು. ಹಾಗೇ ಮಹಿಳೆಯ ಪಾತ್ರವನ್ನು ಒಂದು ಚೌಕಟ್ಟಿನಲ್ಲಿ ಹಾಕಬಾರದು ಅಷ್ಟೇ.

ಪ್ರಶ್ನೆ: ನಿಮ್ಮ ಮಗಳಿಗೆ ನೀವು ಡೈರೆಕ್ಟ್ ಮಾಡೋದ್ಯಾವಾಗ?

ಕವಿತಾ ಲಂಕೇಶ್: ಒಳ್ಳೆಯ ಸಬ್ಜೆಕ್ಟ್ ಇದ್ದರೆ ಖಂಡಿತ ಮಾಡೇ ಮಾಡ್ತೀನಿ. ಅದು ಅವಳಿಗೆ ಸೂಟ್ ಆಗುತ್ತೆ ಅಂದ್ರೆ ಮಾತ್ರ, ಇಲ್ಲದಿದ್ರೆ ಬೇಡ.

ಪ್ರಶ್ನೆ: ಪ್ರೀತಮ್ ಗುಬ್ಬಿ ನಿಮ್ಮ ಮಗಳನ್ನು ಆಯ್ಕೆ ಮಾಡಿದ್ದೇಗೆ?

ಕವಿತಾ ಲಂಕೇಶ್: ಸುನೈನಾ ಅಂತ ಕನ್ನಡ ಸಿನಿಮಾಗಳಿಗೆ ಕಾಸ್ಟಿಂಗ್ ಮಾಡ್ತಾ ಇದ್ದಾರೆ. ಅವರಿಗೆ ನಾನು ಒಂದು ಇಂಟ್ರುಡಕ್ಷನ್ ವಿಡಿಯೋ ಕಳಿಸಿದ್ದೆ. ಒಂದು ಐದಾರು ತಿಂಗಳು ಆಗಿತ್ತೇನೋ. ಇದಕ್ಕಿದ್ದಂಗೆ ಅವರು ಇಶಾಗೆ ರೀಚ್ ಔಟ್ ಆಗಿ, ಆಡಿಶನ್‌ಗೆ ನಾಲ್ಕು ಪೇಜ್ ಸೀನ್ ಕಳಿಸಿದ್ರು. ಒಂದೇ ಟೇಕ್ ಅಲ್ಲಿ ಎರಡು ಆಡಿಷನ್ ಮಾಡಿ ಕಳಿಸಿದ್ದಳು. ಅದು ಇಷ್ಟ ಆದ್ಮೇಲೆ ಆಯ್ಕೆ ಮಾಡಿದ್ದಾರೆ. ಆಡಿಶನ್ ಇಲ್ದೆ ಸುಮ್ನೆ ಮುಖ ನೋಡಿ ತಗೊಂಡಿಲ್ಲ. ಇಲ್ಲಾಂದ್ರೆ ಫೋಟೋ ಕಳಿಸಿದ್ದಾರೆ, ಚೆನ್ನಾಗಿರೆಂದು ಎಂದು ತಗೊಂಡಿಲ್ಲ. ಅವಳ ಟ್ಯಾಲೆಂಟ್‌ ಅನ್ನು ಗುರುತಿಸಿ ಆಯ್ಕೆ ಮಾಡಿದ್ದಾರೆ.