ಕಿರುತೆರೆ ನಟಿ ಭವ್ಯಾ ಗೌಡ ಬಿಗ್ ಬಾಸ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಬಳಿಕ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಧಾರಾವಾಹಿ ಹಾಗೂ ಸಿನಿಮಾದ ಆಫರ್‌ಗಳು ಅವರನ್ನು ಹುಡುಕಿಕೊಂಡು ಬರುತ್ತಿದೆ. ಸದ್ಯ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಕರ್ಣ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಭವ್ಯಾ ಗೌಡ ನಟಿಸುತ್ತಿದ್ದಾರೆ. ಈ ಧಾರಾವಾಹಿಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ.

Advertisement

'ಕರ್ಣ' ಧಾರಾವಾಹಿಯಲ್ಲಿ ಡಾಕ್ಟರ್ ಪಾತ್ರದಲ್ಲಿ ಭವ್ಯಾ ಗೌಡ ನಟಿಸುತ್ತಿದ್ದಾರೆ. ಇವರ ಕ್ಯೂಟ್ ಹಾಗೂ ಮುಗ್ಧ ಮನಸ್ಸಿನ ಪಾತ್ರಕ್ಕೆ ಕಿರುತೆರೆ ವೀಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಕಿರಣ್ ರಾಜ್ ಹಾಗೂ ಭವ್ಯಾ ಗೌಡ ಜೋಡಿ ವೀಕ್ಷಕರ ಮನ ಸೆಳೆಯುತ್ತಿದೆ. ಒಂದ್ಕಡೆ ಕಿರುತೆರೆಯಲ್ಲಿ ಬ್ಯುಸಿಯಾಗಿರುವಾಗಲೇ ಸಿನಿಮಾಗಳಿಗೂ ಅವಕಾಶಗಳು ಇವರನ್ನು ಹುಡುಕಿಕೊಂಡು ಬಂದಿವೆ. ಈ ಗ್ಯಾಪ್‌ನಲ್ಲೇ ಭವ್ಯಾ ಗೌಡ ಕ್ಷಮೆ ಕೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Advertisement

ಅಷ್ಟಕ್ಕೂ ಭವ್ಯಾ ಗೌಡ ಏನಾದರೂ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡ್ರಾ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ, ವಿವಾದ ಅಂತೇನೂ ಇಲ್ಲ. ಭವ್ಯಾ ಗೌಡ ತಮ್ಮ ಚೊಚ್ಚಲ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದು, ಅದರ ಮುಹೂರ್ತ ಇತ್ತೀಚೆಗೆ ನೆರವೇರಿದೆ. ಆದರೆ, ಆ ಮುಹೂರ್ತ ಸಮಾರಂಭಕ್ಕೆ ಹೋಗುವುದಕ್ಕೆ ಸಾಧ್ಯವಾಗದೇ ಇದ್ದಿದ್ದರಿಂದ ಚಿತ್ರತಂಡಕ್ಕೆ ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಆ ಸಿನಿಮಾ ಯಾವುದು? ವಿಡಿಯೋದಲ್ಲಿ ಏನು ಹೇಳಿದ್ದಾರೆ? ತಿಳಿಯಲು ಮುಂದೆ ಓದಿ.

ಸೆಟ್ಟೇರಿದ ಭವ್ಯಾ ಗೌಡ ಚೊಚ್ಚಲ ಸಿನಿಮಾ

ಬಿಗ್ ಬಾಸ್‌ ರಿಯಾಲಿಟಿ ಶೋನಲ್ಲಿ ಭವ್ಯಾ ಗೌಡಗೆ ಒಳ್ಳೆಯ ಹೈಪ್ ಸಿಕ್ಕಿತ್ತು. ಸಾಮಾನ್ಯವಾಗಿ ರಿಯಾಲಿಟಿ ಶೋನಿಂದ ಹೊರ ಬರುತ್ತಿದ್ದಂತೆ ಸಿನಿಮಾಗಳಿಗೆ ಆಫರ್ ಬರೋದು ಸಹಜ. ಆದರೆ, ಭವ್ಯಾ ಗೌಡಗೆ ಆಫರ್ ತಡವಾಗಿ ಬಂತೋ? ಇಲ್ಲ ಒಳ್ಳೆಯ ಸಿನಿಮಾಗಾಗಿ ಕಾಯುತ್ತಿದ್ದರೋ ಗೊತ್ತಿಲ್ಲ. ಆದರೆ, ಬಿಗ್ ಬಾಸ್ ಸೀಸನ್ ಮುಗಿದು ಹೆಚ್ಚು ಕಡಿಮೆ ಒಂದೂವರೆ ವರ್ಷದ ಬಳಿಕ 'ದೇವಿ' ಎನ್ನುವ ಸಿನಿಮಾ ಸೆಟ್ಟೇರಿದೆ. ಆ ಸಿನಿಮಾದ ಮುಹುರ್ತಕ್ಕೆ ಭವ್ಯಾ ಗೌಡ ಭಾಗವಹಿಸಲು ಆಗಿರಲಿಲ್ಲ. ಅದಕ್ಕಾಗಿ ಕ್ಷಮೆ ಕೇಳಿದ್ದಾರೆ.

Advertisement

"ಎಲ್ಲರಿಗೂ ಕ್ಷಮೆ ಕೇಳುತ್ತೇನೆ"

ಭವ್ಯಾ ಗೌಡ 'ದೇವಿ' ಸಿನಿಮಾದ ಮುಹೂರ್ತಕ್ಕೆ ಬರುವುದಕ್ಕೆ ಆಗದೇ ಇದ್ದಿದ್ದಕ್ಕೆ ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ. "ಹಾಯ್ ಎಲ್ಲರಿಗೂ ನಮಸ್ಕಾರ. ಮೊದಲನೆಯದಾಗಿ ನಿಮ್ಮೆಲ್ಲರಿಗೂ ನಾನು ಕ್ಷಮೆ ಕೇಳುತ್ತೇನೆ. ಯಾಕಂದ್ರೆ, ಇವತ್ತು ನಮ್ಮ ದೇವಿ ಸಿನಿಮಾದ ಮುಹೂರ್ತ ಹಾಗೂ ಪ್ರೆಸ್‌ ಮೀಟ್ ಇತ್ತು. ನಾನು ಎರಡಕ್ಕೂ ಬರುವುದಕ್ಕೆ ಆಗಲಿಲ್ಲ." ಎಂದು ಭವ್ಯಾ ಬೇಸರ ಹೊರ ಹಾಕಿದ್ದಾರೆ.

ಕಾರಣ 'ಕರ್ಣ'

"ಕಾರಣ ಏನು ಅಂದರೆ, ನಮ್ಮ ಕರ್ಣ ಸೀರಿಯಲ್ ನೆಕ್ ಟು ನೆಕ್ ಎಪಿಸೋಡ್ ಇದೆ. ಈಗ ನಾವು ಶೂಟ್ ಮಾಡುತ್ತಿರೋದು ಸಂಜೆ ಟೆಲಿಕಾಸ್ಟ್ ಆಗುತ್ತಿದೆ. ಹಾಗಾಗಿ ನಾನು ಬರುವುದಕ್ಕೆ ಆಗಲಿಲ್ಲ. ಆದಷ್ಟು ಬೇಗ ನಾನು ಭೇಟಿ ಮಾಡುತ್ತೇನೆ. ಇಲ್ಲಿವರೆಗೂ ನನಗೆ ಹೇಗೆ ಬೆಂಬಲ ನೀಡುತ್ತಾ ಬಂದಿದ್ದೀರೋ ಹಾಗೇ ನಿಮ್ಮೆಲ್ಲರ ಆಶೀರ್ವಾದ ಹಾಗೂ ಬೆಂಬಲ ಬೇಕು." ಎಂದು ಭವ್ಯಾ ಗೌಡ ಮನವಿ ಮಾಡಿಕೊಂಡಿದ್ದಾರೆ.

Advertisement

ಹೀರೋಯಿನ್ ಆಗಿ ಮೊದಲ ಸಿನಿಮಾ

"ಹೀರೋಯಿನ್ ಆಗಿ ಇದು ನನ್ನ ಮೊದಲ ಸಿನಿಮಾ. ತುಂಬಾ ಖುಷಿಯಿದೆ. ಸಿಆರ್ ಪ್ರೊಡಕ್ಷನ್‌ಗೆ ಧನ್ಯವಾದಗಳನ್ನು ಹೇಳುತ್ತೇನೆ. ಇಡೀ ತಂಡ ತುಂಬಾನೇ ಚೆನ್ನಾಗಿದೆ. ಒಬ್ಬೊಬ್ಬರ ಪಾತ್ರ ಕೂಡ ತುಂಬಾನೇ ಚೆನ್ನಾಗಿ ಬಂದಿದೆ. ತುಂಬಾನೇ ಖುಷಿಯಾಗುತ್ತಿದೆ. ಬರುವುದಕ್ಕೆ ಆಗಲಿಲ್ಲ ಅಂತ ಅಷ್ಟೇ ಬೇಜಾರಾಗುತ್ತಿದೆ." ಎಂದು ನಟಿ ಭವ್ಯಾ ಗೌಡ ವಿಡಿಯೋ ಮೂಲಕ ಸಂದೇಶ ರವಾನೆ ಮಾಡಿದ್ದಾರೆ.