ಬಿಗ್ ಬಾಸ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಬಳಿಕ ಉಗ್ರಂ ಮಂಜು ಅದೃಷ್ಟವೇ ಬದಲಾಗುತ್ತಿದೆ. ರಿಯಾಲಿಟಿ ಶೋದಿಂದ ಹೊರ ಬರುತ್ತಿದ್ದಂತೆ ಉಗ್ರಂ ಮಂಜು ಲೈಫ್ ಪಾರ್ಟ್ನರ್ ಸಿಕ್ಕಿದ್ದರು. ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಲ್ಲಿವರೆಗೂ ಸ್ಯಾಂಡಲ್‌ವುಡ್‌ನಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದ ಉಗ್ರಂ ಮಂಜು ಈಗ ಉದ್ಯಮಕ್ಕೂ ಕಾಲಿಟ್ಟಿದ್ದಾರೆ.

Advertisement

ಸಿನಿಮಾ, ರಿಯಾಲಿಟಿ ಶೋ ಅಂತ ಉಗ್ರಂ ಮಂಜು ಬ್ಯುಸಿಯಾಗಿದ್ದರು. ಬಿಗ್ ಬಾಸ್ ಮುಗಿಸಿ ಹೊರ ಬಂದ ಬಳಿಕವೂ ಉಗ್ರಂ ಮಂಜು ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಇನ್ನು ಸಂಧ್ಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಉಗ್ರಂ ಮಂಜು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಹೋಟೆಲ್ ಉದ್ಯಮಕ್ಕೆ ತಮ್ಮದೇ ಸ್ಟೈಲ್‌ನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

Advertisement

ಕನ್ನಡ ಹಲವು ಸೆಲೆಬ್ರೆಟಿಗಳು ಹೋಟೆಲ್ ಉದ್ಯಮಕ್ಕೆ ಈಗಾಗಲೇ ಕಾಲಿಟ್ಟಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಶೈಲಿಯ ಹೋಟೆಲ್ ಬಾಕಿಯಿದೆ. ಚಂದನ್ ಕುಮಾರ್, ಚೇತನ್, ಸೃಜನ್ ಲೋಕೇಶ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಈಗಾಗಲೇ ತಮ್ಮದೇ ಸ್ವಂತ ಹೋಟೆಲ್ ಹೊಂದಿದ್ದಾರೆ. ಈಗ ಆ ಸಾಲಿಗೆ ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು ಕೂಡ ಸೇರಿಕೊಂಡಿದ್ದಾರೆ. ಹಾಗಿದ್ದರೆ, ಯಾರೆಲ್ಲ ತಮ್ಮದೇ ಸ್ವಂತ ಹೋಟೆಲ್ ಹೊಂದಿದ್ದಾರೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಉಗ್ರಂ ಮಂಜು-'ಮಂಡಿಪೇಟೆ ಮೈಸೂರು ಪಲಾವ್'

ಬಿಗ್ ಬಾಸ್ ಬಳಿಕ ಉಗ್ರಂ ಮಂಜು ಸಿನಿಮಾಗಳಲ್ಲಿ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಉದ್ಯಮಿಯಾಗಿಯೂ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ. 'ಮಂಡಿಪೇಟೆ ಮೈಸೂರು ಪಲಾವ್' ಎನ್ನುವ ನಾಟಿ ಶೈಲಿಯ ರುಚಿಕರವಾದ ಪಲಾವ್ ಸೇರಿದಂತೆ ಇನ್ನಿತರ ಖಾದ್ಯಗಳನ್ನು ಇಲ್ಲಿ ಬಡಿಸಲಾಗುತ್ತೆ. ಇತ್ತೀಚೆಗಷ್ಟೇ ಶುಭಾರಂಭಗೊಂಡಿರುವ ಈ ಹೋಟೆಲ್ ಬೆಂಗಳೂರಿನ ಕನಕಪುರ ರಸ್ತೆಯ ತಲಘಟ್ಟಪುರ ಸಮೀಪ ಆರಂಭಗೊಂಡಿದೆ. ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅವರೇ ಪಲಾವ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Advertisement

ಸೃಜನ್ ಲೋಕೇಶ್

ಸ್ಯಾಂಡಲ್‌ವುಡ್ ಮಾತಿನ ಮಲ್ಲ ಸೃಜನ್ ಲೋಕೇಶ್ ಕೂಡ ರೆಸ್ಟೋರೆಂಟ್ ಆರಂಭಿಸಿ ಕೆಲವು ವರ್ಷಗಳಾಗಿವೆ. ಸೃಜನ್ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ 'ಕೋಕು ಕಿಚನ್' ಅನ್ನೂ‌ ಆರಂಭಿಸಿ ಹಲವು ತಿಂಗಳುಗಳೇ ಆಗಿವೆ. ಜೊತೆಗೆ ಬೆಳ್ಳಂದೂರಿನಲ್ಲಿ 'ಸೋಚಿ' ಎಂಬ ರೆಸ್ಟೋರೆಂಟ್ ಕೂಡ‌ ಹೊಂದಿದ್ದಾರೆಂದು ವರದಿ ಮಾಡಲಾಗಿದೆ.

ಅಮೂಲ್ಯ-ಜೀರೋ ಡಿಗ್ರಿ

ಇತ್ತೀಚೆಗೆ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಕೆಲವು ದಿನಗಳ ಹಿಂದಷ್ಟೇ ಐಷಾರಾಮಿ ಪಬ್ ಅನ್ನು ಆರಂಭಿಸಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಆರಂಭಿಸಿರುವ 'ಜೀರೋ ಡಿಗ್ರಿ ಆನ್‌ ದಿ ಹಿಲ್‌ʼ ಎಂಬ ಪಬ್ ಅನ್ನು ಶುರು ಮಾಡಿದ್ದಾರೆ. ಈ ರೆಸ್ಟೋರೆಂಟ್‌ನ ಉದ್ಘಾಟನೆಗೆ ಕನ್ನಡ ಸ್ಟಾರ್‌ಗಳು ಆಗಮಿಸಿದ್ದರು. ಬಹುಶ: ಇದು ಕನ್ನಡ ಸೆಲೆಬ್ರೆಟಿಗಳಲ್ಲಿ ಇರುವ ಅತ್ಯಂತ ದುಬಾರಿ ರೆಸ್ಟೋರೆಂಟ್ ಎನ್ನಲಾಗಿದೆ.

Advertisement

ಚಂದನ್ ಕುಮಾರ್

ಕಿರುತೆರೆ ಹಾಗೂ ಸಿನಿಮಾ ನಟ ಚಂದನ್ ಕುಮಾರ್ ಕೂಡ 'ಮಂಡಿಪೇಟೆ ಪುಲಾವ್' ಎನ್ನುವ ಹೋಟೆಲ್ ಅನ್ನು ಆರಂಭಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಆರಂಭಿಸಿರುವ ಈ ಹೋಟೆಲ್ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈಗಾಗಲೇ ಹಲವು ಬ್ರ್ಯಾಂಚ್‌ಗಳನ್ನು ಕೂಡ ಓಪನ್ ಮಾಡಿದ್ದಾರೆ. ಸೌದೆ ಒಲೆಯಲ್ಲಿ ಬಿರಿಯಾನಿ ತಯಾರಿಸುವುದು ಇವರ ಹೋಟೆಲ್‌ನ ಸ್ಪೆಷಲ್ ಆಗಿತ್ತು. ಹಾಗಂತ ಇಷ್ಟೇ ಅಲ್ಲ, ಇನ್ನೂ ಹಲವು ಕಿರುತೆರೆ ಹಾಗೂ ಸಿನಿಮಾ ತಾರೆಯರು ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.