ಡೈನಾಮಿಕ್ ಪ್ರಿನ್ಸ್ ನಟನೆಯ 'ಕರಾವಳಿ' ಸಿನಿಮಾ ಇತ್ತೀಚೆಗೆ ವಿವಾದಕ್ಕೆ ಸಿಲುಕಿತ್ತು. ನಿರ್ದೇಶಕ ಗುರುದತ್ ಗಾಣಿಗ ಹಾಗೂ ನಾಯಕ ನಟ ಪ್ರಜ್ವಲ್ ದೇವರಾಜ್ ನಡುವಿನ ವೈಮನಸ್ಸು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ವಿವಾದಲ್ಲಿ ನೂರೆಂಟು ಆಯಾಮಗಳು ಇದ್ದರೂ, ಇದ್ರಲ್ಲಿ ಪ್ರಜ್ವಲ್ ದೇವರಾಜ್ ಡಬ್ಬಿಂಗ್ ವಿಷಯ ಕೂಡ ಪ್ರಮುಖವಾಗಿದೆ. ಪ್ರಜ್ವಲ್ ದೇವರಾಜ್ ಡಬ್ ಮಾಡದೇ ಈ ಸಿನಿಮಾ ಬಿಡುಗಡೆಯಾಗುತ್ತಿರೋದು ಹೈಲೈಟ್.
'ಕರಾವಳಿ' ಸಿನಿಮಾ ಟ್ರೈಲರ್‌ನಲ್ಲಿ ಪ್ರಜ್ವಲ್ ದೇವರಾಜ್ ವಾಯ್ಸ್ ಇರಲಿಲ್ಲ. ಇಲ್ಲಿಂದ 'ಕರಾವಳಿ' ಸಿನಿಮಾದ ವಿವಾದ ಗರಿಗೆದರಿತ್ತು. ಇಲ್ಲಿಂದ ಶುರುವಾಗಿದ್ದ ವಿವಾದ ಕೊನೆಯಲ್ಲಿ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಾ ಹೋಯ್ತು. ಸದ್ಯಕ್ಕೀಗ ಮ್ಯಾಟರ್ ಸೆಟಲ್ ಆಗಿದ್ದರೂ, ಪ್ರಜ್ವಲ್ ದೇವರಾಜ್ ಧ್ವನಿಯೇ ಇಲ್ಲದೇ ಸಿನಿಮಾ ರಿಲೀಸ್ ಆಗುತ್ತೆ ಅನ್ನೋ ವಿಷಯ ಹೊರಬಿದ್ದಿದೆ.
ಹಾಗಿದ್ದರೆ, ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಸಮಸ್ಯೆ ಆಗಿದ್ದು ಇದೇ ಮೊದಲಾ? ಖಂಡಿತಾ ಇಲ್ಲ. ಈ ಹಿಂದೆ ಕೂಡ ಕೆಲ ಸಿನಿಮಾಗಳು ಡಬ್ಬಿಂಗ್ ಸಮಸ್ಯೆಗಳನ್ನು ಎದುರಿಸಿವೆ. ಇದರಲ್ಲಿ ಕೆಲವು ವಿವಾದ ಆಗಿದ್ದರೆ, ಇನ್ನು ಕೆಲವು ಸಮಸ್ಯೆಯಾಗಿ ಚಿತ್ರತಂಡವನ್ನು ಸಂಕಷ್ಟಕ್ಕೆ ಸಿಲುಕಿತ್ತು. ಇಂತಹ ಕೆಲವು ಘಟನೆಗಳ ಪಟ್ಟಿ ಇಲ್ಲಿದೆ ನೋಡಿ. 'ಕರಾವಳಿ' ನಿರ್ಮಾಪಕ-ನಿರ್ದೇಶಕ ಗರುದತ್ ಗಾಣಿಕ ಈ ಸಿನಿಮಾಗಾಗಿ ಪ್ರಜ್ವಲ್ ದೇವರಾಜ್‌ಗೆ ಕೊಡಬೇಕಿದ್ದ ಸಂಭಾವನೆಯನ್ನು ಉಳಿಸಿಕೊಂಡಿದ್ದರು. ಅದನ್ನು ಕೊಡುವವರೆಗೂ ಡಬ್ಬಿಂಗ್ ಮಾಡುವುದಿಲ್ಲ ಎಂದಿದ್ದರು. ಹೀಗಾಗಿ ಬೇರೆಯವರಿಂದ ಡಬ್ ಮಾಡಿಸಿ ಟ್ರೈಲರ್ ರಿಲೀಸ್ ಮಾಡಲಾಗಿತ್ತು. ಇದಕ್ಕೆ ಪ್ರಜ್ವಲ್ ಫ್ಯಾನ್ಸ್ ಖ್ಯಾತೆ ತೆಗೆದಿದ್ದರು. ಬಳಿಕ ನಿರ್ದೇಶಕರಿಗೇ ಪ್ರಜ್ವಲ್ ದೇವರಾಜ್ ಡಬ್ ಮಾಡುವುದು ಇಷ್ಟವಿರಲಿಲ್ಲ ಅನ್ನೋದು ಹೊರಬಿತ್ತು. ಕೊನೆಗೆ ಈ ವಿವಾದ ಬೇರೆ ಬೇರೆ ಆಯಾಮವನ್ನು ಪಡೆದುಕೊಂಡು ಈಗ ಪ್ರಜ್ವಲ್ ದೇವರಾಜ್ ಡಬ್ಬಿಂಗ್ ಮಾಡಲ್ಲ ಅನ್ನೋ ಗೊತ್ತಾಗಿದೆ. ಆದರೆ, ಈಗಾಗಲೇ ಅವರ ಧ್ವನಿ ಪರಿಚಯವಿರುವ ಜನರು ಬೇರೆ ಧ್ವನಿಯನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಎಸ್.ನಾರಾಯಣ್ ನಿರ್ದೇಶನದ 'ಚಂಡ' ಸಿನಿಮಾ ವೇಳೆನೂ ಇಂತಹದ್ದೇ ಒಂದು ಘಟನೆ ನಡೆದಿತ್ತು. 'ಯುಗ' ಹಾಗೂ 'ಚಂಡ' ಸಿನಿಮಾಗಳ ವಿಚಾರವಾಗಿ ಎಸ್.ನಾರಾಯಣ್ ಹಾಗೂ ದುನಿಯಾ ವಿಜಯ್ ನಡುವೆ ವಿವಾದ ಏರ್ಪಟ್ಟಿತ್ತು. ಆಗ ವಿಜಯ್ ಪಾತ್ರಕ್ಕೆ ಎಸ್.ನಾರಾಯಣ್ ಡಬ್ಬಿಂಗ್ ಆರ್ಟಿಸ್ಟ್ ಸುದರ್ಶನ್ ಅವರ ಬಳಿ ಡಬ್ ಮಾಡಿಸಿದ್ದರು. ಸಿನಿಮಾ ಕೂಡ ಅವರ ಧ್ವನಿಯಲ್ಲಿಯೇ ರಿಲೀಸ್ ಆಗಿತ್ತು. ಸುಮಾರು 10 ದಿನಗಳ ಬಳಿಕ ವಿಜಯ್ ಡಬ್ ಮಾಡಿದ್ದರು. ಚಿರಂಜೀವಿ ಸರ್ಜಾ ನಟನೆಯ 'ರಾಜಮಾರ್ತಾಂಡ' ಸಿನಿಮಾ ಬಿಡುಗಡೆಗೂ ಮುನ್ನವೇ ಅವರ ಅಗಲಿದ್ದರು. ಈ ಸಿನಿಮಾಗೆ ಡಬ್ಬಿಂಗ್ ಆಗಿರಲಿಲ್ಲ. ಇದು ಸಿನಿಮಾ ತಂಡಕ್ಕ ದೊಡ್ಡ ತಲೆ ನೋವಾಗಿತ್ತು. ಚಿರಂಜೀವಿ ಸರ್ಜಾ ಅವರ ಧ್ವನಿಯನ್ನು ಮ್ಯಾಚ್ ಮಾಡುವುದು ಹೇಗೆಂದು ತಲೆ ಕೆಡಿಸಿಕೊಂಡು ಕೂತಿದ್ದಾಗ, ಧ್ರುವ ಸರ್ಜಾ ಅಣ್ಣನಿಗೆ ಧ್ವನಿಯನ್ನು ನೀಡಿ ಸಮಸ್ಯೆಯನ್ನು ಸರಿದೂಗಿಸಿದ್ದರು. ಇನ್ನೊಂದು ಕಡೆ 'ಜೇಮ್ಸ್' ಕೂಡ ಇಂತಹದ್ದೇ ಸಮಸ್ಯೆಯಲ್ಲಿ ಸಿಕ್ಕಿಕೊಂಡಿತ್ತು. ಪುನೀತ್ ರಾಜ್‌ಕುಮಾರ್ ಅಗಲಿದ ಬಳಿಕ 'ಜೇಮ್ಸ್'ಗೆ ಡಬ್ ಮಾಡುವ ಬಗ್ಗೆ ಸಮಸ್ಯೆ ಎದುರಾಗಿತ್ತು. ಪುನೀತ್ ಅವರಂತೆ ಮಿಮಿಕ್ರಿ ಮಾಡುವವರನ್ನು ಕರೆಸಿ ಪ್ರಯತ್ನ ಮಾಡಲಾಗಿತ್ತು. ಅದು ಸರಿ ಹೋಗಲಿಲ್ಲ. ಹೀಗಾಗಿ ಶಿವಣ್ಣ ಡಬ್ ಮಾಡಿದ್ದರು. ಬಳಿಕ ವಿಶೇಷ ತಂತ್ರಜ್ಞಾನವನ್ನು ಬಳಿಸಿ ಅಪ್ಪು ಅಂತೆಯೇ ಧ್ವನಿಯನ್ನು ಸೃಷ್ಟಿಸಲಾಯಿತು. ಹೀಗೆ ಡಬ್ಬಿಂಗ್ ಸಮಸ್ಯೆ ಒಂದೊಂದು ರೀತಿ ನಿರ್ಮಾಣ ಸಂಸ್ಥೆಗೆ ಕಷ್ಟ ತಂದೊಡ್ಡಿದೆ.'ಕರಾವಳಿ' ಡಬ್ಬಿಂಗ್ ವಿವಾದ
'ಚಂಡ' ಡಬ್ಬಿಂಗ್ ವಿವಾದ
'ರಾಜಮಾರ್ತಾಂಡ' ಸಮಸ್ಯೆ
'ಜೇಮ್ಸ್' ಸಮಸ್ಯೆ
More Articles