ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಮತ್ತೆ ಪ್ರತ್ಯಕ್ಷ ಆಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಿನಿಮಾ ನಿರ್ದೇಶನದ ಕಡೆಗೆ ಮುಖ ಹಾಕಿರಲಿಲ್ಲ. ಯಾಕೋ ಸ್ವಲ್ಪ ದೂರವೇ ಉಳಿದು ಬಿಟ್ಟರಲ್ಲ ಎನ್ನುವಾಗಲೇ 'ಅಮೆರಿಕಾ ಅಮೆರಿಕಾ' ಸೀಕ್ವೆಲ್‌ಗೆ ಕೈ ಹಾಕಿದ್ದರು. ಈ ವಿಷಯವನ್ನು ಮೊದಲು ಫಿಲ್ಮಿಬೀಟ್ ಕನ್ನಡದಲ್ಲಿ ವರದಿ ಕೂಡ ಮಾಡಲಾಗಿತ್ತು. ಆದರೆ, ಆಗಿನ್ನೂ ತೆರೆಮರೆಯಲ್ಲಿ ಸದ್ದಿಲ್ಲದೆ ಶೂಟಿಂಗ್ ಮಾಡುತ್ತಿದ್ದರು. ಇನ್ನೂ ಸಿನಿಮಾಗೂ ಟೈಟಲ್ ಅಧಿಕೃತಗೊಳಿಸಿರಲಿಲ್ಲ.

Advertisement

ಈ ನಾಗತಿಹಳ್ಳಿ ಚಂದ್ರಶೇಖರ್ ನಿರೀಕ್ಷೆ ಮಾಡಿದಂತೆ ತಮ್ಮ ಹೊಚ್ಚ ಹೊಸ ಸಿನಿಮಾಗೆ 'ಅಮೆರಿಕಾ ಅಮೆರಿಕಾ 2' ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಈ ಸೀಕ್ವೆಲ್‌ನಲ್ಲಿ ಕನ್ನಡ ಚಿತ್ರರಂಗದ ಯುವ ನಟರಾದ ನಿರೂಪ್ ಭಂಡಾರಿ, ಸಾನ್ವಿ ಶ್ರೀವತ್ಸವ ಹಾಗೂ ಪೃಥ್ವಿ ಅಂಬಾರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಕಾರಣಕ್ಕೆ ಮತ್ತೊಮ್ಮೆ ಕುತೂಹಲ ಕೆರಳಿಸುವಲ್ಲಿ ನಾಗತಿಹಳ್ಳಿ ಯಶಸ್ವಿಯಾಗಿದ್ದಾರೆ.

Advertisement

ಆದರೆ, 1997ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ' ಸಿನಿಮಾದ ಸೂರ್ಯ, ಶಶಾಂಕ್ ಮತ್ತು ಭೂಮಿಕಾ ಪಾತ್ರಗಳು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹಚ್ಚ ಹಸಿರಾಗಿವೆ. ಹೆಚ್ಚು ಕಡಿಮೆ ಮೂರು ದಶಕಗಳ ನಂತರ ಮತ್ತೆ ಈ ಸಿನಿಮಾದ ಸೀಕ್ವೆಲ್ ರೆಡಿಯಾಗಿದೆ. ಇಲ್ಲೂ ಮೂರು ಪ್ರಮುಖ ಪಾತ್ರಗಳಿವೆ. ಹಾಗಿದ್ದರೆ, 97ರಲ್ಲಿ ತೆರೆಕಂಡಿದ್ದ 'ಅಮೆರಿಕಾ ಅಮೆರಿಕಾ'ಗೂ ಇಂದಿನ 'ಅಮೆರಿಕಾ ಅಮೆರಿಕಾ 2'ದ ಪಾತ್ರಗಳಿಗೂ ಹೋಲಿಕೆ ಮಾಡಬಹುದೇ?

ಕಳೆದ 30 ವರ್ಷಗಳಲ್ಲಿ ಸಿನಿಮಾ ಜಗತ್ತು ಬದಲಾಗಿದೆ. ಪ್ರೇಕ್ಷಕರ ಅಭಿರುಚಿಗಳೂ ಬದಲಾಗಿದೆ. ತಂತ್ರಜ್ಞಾನ, ಸಿನಿಮಾ ಮೇಕಿಂಗ್ ಸ್ಟೈಲ್ ಬದಲಾಗಿದೆ. ಈಗ ನಾಗತಿಹಳ್ಳಿ ಚಂದ್ರಶೇಖರ್ 30 ವರ್ಷಗಳ ಬಳಿಕ ಸೀಕ್ವೆಲ್ ಅನ್ನು ಹೇಗೆ ಸೃಷ್ಟಿಸಿದ್ದಾರೆ? ಪಾತ್ರಗಳ ವಿನ್ಯಾಸ ಹೇಗಾಗಿದೆ? ಕಥೆಯೇನು? ಅನ್ನೋ ಕುತೂಹಲವಿದೆ. ಸದ್ಯಕ್ಕೆ ಸಾಮ್ಯತೆ ಅಂತ ಕಾಣಿಸುತ್ತಿರೋದು ಪಾತ್ರಗಳಷ್ಟೇ. ಹೀಗಾಗಿ ಇಲ್ಲಿದೆ ಒಂದು ಸ್ವಾರಸ್ಯಕರ ಹೋಲಿಕೆಯ ಪ್ರಯತ್ನ ಮಾಡಲಿದೆ.

Advertisement

ರಮೇಶ್ ಅರವಿಂದ್-ಸೂರ್ಯ

ಅಮೆರಿಕಾ ಅಮೆರಿಕಾ: ಈ ಸಿನಿಮಾದ ಪ್ರಮುಖ ಪಾತ್ರದ ಸೂರ್ಯ. ಪಕ್ಕಾ ದೇಸಿ ಹುಡುಗ, ಹಳ್ಳಿಯ ಮಣ್ಣಿನ ಮಗ. ಡಾಲರ್ ಆಸೆಗಾಗಿ ಹೆತ್ತ ತಾಯ್ನಾಡನ್ನು ಬಿಟ್ಟು ವಿದೇಶಕ್ಕೆ ಹೋಗುವುದನ್ನು ವಿರೋಧಿಸುವ ಸ್ವಭಾವ ಉಳ್ಳವನು. ತಾಯ್ನಾಡು, ಪ್ರೀತಿಯ ಹುಡುಗಿ.. ಇದು ಅವನ ಬದುಕು. ಇಡೀ ಸಿನಿಮಾ ಪ್ರಮುಖವಾಗಿ ಮೂರು ಪಾತ್ರಗಳಲ್ಲಿ ಮುಂದೆ ಸಾಗುತ್ತೆ. ಅದರಲ್ಲಿ ಸೂರ್ಯ ಪಾತ್ರ ಪ್ರಮುಖವಾದದ್ದು. ಈ ಪಾತ್ರದಲ್ಲಿ ರಮೇಶ್ ಅರವಿಂದ್ ನಟಿಸಿದ್ದಾರೆ.

ಅಮೆರಿಕಾ ಅಮೆರಿಕಾ 2: ಅಂದ್ಹಾಗೆ, ಸೀಕ್ವೆಲ್ ಅಂದ ಕೂಡಲೇ 'ಅಮೆರಿಕಾ ಅಮೆರಿಕಾ' ಸಿನಿಮಾದ ಮುಂದುವರೆದ ಭಾಗ ಆಗಬೇಕಿಲ್ಲ. ಏಷ್ಯಾನೆಟ್‌ ನ್ಯೂಸ್ ವರದಿ ಮಾಡಿರುವಂತೆ ಸಹನಾ ವಿಜಯಕುಮಾರ್ ಅವರ ಜನಪ್ರಿಯ ಕಾದಂಬರಿ 'ಕ್ಷಮೆ'ಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಇದು ಮುಂದುವರೆದ ಭಾಗ ಅಲ್ಲ. ಆದರೆ, ಇಲ್ಲೂ ಮೂರು ಪಾತ್ರಗಳಿವೆ. ಅದರಲ್ಲಿ ರಮೇಶ್ ಅರವಿಂದ್ ನಟಿಸಿದ ಸೂರ್ಯನಂತಹದ್ದೇ ಸ್ವಭಾವದ ಪಾತ್ರ ಇರಬಹುದೇ? ಅನ್ನೋ ಕುತೂಹಲವಂತೂ ಇದೆ. ಅದರಲ್ಲಿ ನಿರೂಪ್ ಭಂಡಾರಿ ಅಥವಾ ಪೃಥ್ವಿ ಯಾರೇ ನಟಿಸಿದರೂ ಬೆಸ್ಟ್ ಆಗಿರುತ್ತೆ.

Advertisement

ಅಕ್ಷಯ್ ಆನಂದ್- ಶಶಾಂಕ್

ಅಮೆರಿಕಾ ಅಮೆರಿಕಾ: ಈ ಸಿನಿಮಾದಲ್ಲಿ ಬರುವ ಮತ್ತೊಂದು ಪ್ರಮುಖ ಪಾತ್ರ ಶಶಾಂಕ್. 90ರ ದಶಕದಲ್ಲಿ ಯುವಕರಲ್ಲಿದ್ದ 'ಅಮೆರಿಕದ ಕನಸು' ಅನ್ನು ಪ್ರತಿನಿಧಿಸಿತ್ತು. ಹೇಗಾದರೂ ಮಾಡಿ ಅಮೆರಿಕಾಗೆ ಹೋಗಿ ಕೈತುಂಬಾ ಸಂಪಾದಿಸಿ ಐಷಾರಾಮಿ ಜೀವನ ನಡೆಸಬೇಕು ಅನ್ನೋ ಅಂದಿನ ಯುವಕರ ಮನಸ್ಥಿತಿಯನ್ನು ಬಿಂಬಿಸಿತ್ತು.

ಅಮೆರಿಕಾ ಅಮೆರಿಕಾ 2: ಒಂದು ವೇಳೆ ಈ ಸಿನಿಮಾದಲ್ಲಿ ಶಶಾಂಕ್ ಅಂತಹ ಸ್ವಭಾವದ ಪಾತ್ರ ಇದ್ದರೆ, ಆ ಪಾತ್ರವನ್ನು ನಿರೂಪ್ ಭಂಡಾರಿಗೆ ಸಖತ್ ಆಗಿ ಸೂಟ್ ಆಗುತ್ತೆ. ಒಂದೊಳ್ಳೆ ಹೋಲಿಕೆ ಆಗಬಹುದು.

ಹೇಮಾ ಪಂಚಮುಖಿ-ಭೂಮಿಕಾ

ಅಮೆರಿಕಾ ಅಮೆರಿಕಾ: ಭೂಮಿಕಾ ಹಳ್ಳಿಯಿಂದ ಮದುವೆಯಾಗಿ ನೇರವಾಗಿ ಅಮೆರಿಕಾಗೆ ಹೋದಾಗ ಅಲ್ಲಿಯ ಯಾಂತ್ರಿಕ ಜೀವನಕ್ಕೆ ಹೊಂದಿಕೊಳ್ಳಲಾಗದೆ 'ಸಾಂಸ್ಕೃತಿಕ ಆಘಾತ'ಕ್ಕೆ ಒಳಗಾಗುತ್ತಾಳೆ. ಪತಿಯ ಹಣದ ವ್ಯಾಮೋಹದ ಮಧ್ಯೆ ಒಂಟಿತನ ಕಾಡುತ್ತದೆ. ಅಂದಿನ ಕಾಲದಲ್ಲಿ ಮದುವೆಯಾಗಿ ತೆರಳುವ ಬಹುತೇಕ ಹೆಣ್ಣಿನ ಕಥೆ ಇದೇ ಆಗಿತ್ತು. ಆದ್ರೀಗ ಕಾಲ ಬದಲಾಗಿದೆ.

Advertisement

ಅಮೆರಿಕಾ ಅಮೆರಿಕಾ 2: ಈ ಸಿನಿಮಾದಲ್ಲಿ ಫೀಮೇಲ್ ಲೀಡ್ ಆಗಿ ಸಾನ್ವಿ ಶ್ರೀವತ್ಸವ ನಟಿಸಿದ್ದಾರೆ. ಇದರಲ್ಲಿ ಇವರ ಪಾತ್ರ ಎಂತಹದ್ದು ಅನ್ನೋದು ಇನ್ನಷ್ಟೇ ಹೊರಬೀಳಬೇಕಿದೆ. ಆದರೆ, ಪೋಸ್ಟರ್‌ ಅನ್ನು ನೋಡಿದರೆ, ಮಾರ್ಡನ್ ಯುವತಿಯಾಗಿ ಕಾಣಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ.