'ಟಾಕ್ಸಿಕ್' ಅಡ್ಡದಲ್ಲಿ ಏನಾಗ್ತಿದೆ? ಯಶ್ ಏನು ಮಾಡ್ತಿದ್ದಾರೆ? ಅವರ ಮುಂದಿನ ಪ್ಲಾನ್ ಏನು? ಅಂತ ಗೆಸ್ ಮಾಡಿ ಮಾಡಿ ಫ್ಯಾನ್ಸ್ ಅಂತು ಸುಸ್ತಾಗಿದ್ದರು. ಇನ್ನೇನು ರಿಲೀಸ್ ಆಗಬೇಕು ಅನ್ನೋವಾಗಲೇ ಸಿನಿಮಾ ಪೋಸ್ಟ್‌ಪೋನ್ ಆದ ನಿರಾಸೆಯಲ್ಲಿ ಬೇರೆ ಇದ್ದರು. ಕೊನೆಗೂ 3ನೇ ಬಾರಿ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಸ್ವಲ್ಪ ಸಮಾಧಾನ ಆಗಿದ್ದಾರೆ. ಈ ಬೆನ್ನಲ್ಲೇ ಯಶ್ ಅಂಡ್ ಟೀಮ್ 'ಟಾಕ್ಸಿಕ್' ಸಿನಿಮಾ ನಾಯಕಿಯ ಗ್ಲಿಂಪ್ಸ್ ಅನ್ನು ರಿವೀಲ್ ಮಾಡಿದೆ.

Advertisement

'ಟಾಕ್ಸಿಕ್' ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಭಾರಿ ಹೈಪ್ ಸೃಷ್ಟಿಸಿರುವ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' (Toxic: A Fairytale for Grown-Ups) ಗ್ಲೋಬಲ್ ಲೆವೆಲ್‌ನಲ್ಲಿ ರಿಲೀಸ್ ಆಗುತ್ತಿದೆ. 'ಟಾಕ್ಸಿಕ್' ಜಗತ್ತಿನ ಕರಾಳ ಹಾಗೂ ರೋಮಾಂಚನಕಾರಿ ಕ್ಷಣಗಳು ಕಣ್ತುಂಬಿ ಕೊಳ್ಳುವುದಕ್ಕೆ ಪ್ರೇಕ್ಷಕರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ 'ಲೇಡೀಸ್ & ಲೇಡೀಸ್' ಎಂಬ ನಾಯಕಿಯರ ಸ್ಟೆಷಲ್ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.

Advertisement

'ಟಾಕ್ಸಿಕ್' ಅಡ್ಡದಲ್ಲಿ ಬ್ಯೂಟೀಸ್

ಬಹಳ ದಿನಗಳಿಂದ ಯಶ್ ಅಭಿಮಾನಿಗಳ ಬೇಡಿಕೆ ಈಗ ಈಡೇರಿದೆ. 'ಟಾಕ್ಸಿಕ್' ನಾಯಕಿಯರ ಝಲಕ್ ರಿಲೀಸ್ ಮಾಡಿ ಅಂತ ಒತ್ತಡ ಹಾಕುತ್ತಲೇ ಇದ್ದರು. ಕೊನೆಗೂ ಅವರ ಆಸೆ ಈಡೇರಿದೆ. ಈ ವಿಡಿಯೋದಲ್ಲಿ ಐದು ಮಂದಿ ನಾಯಕಿಯರ ಆಟಿಟ್ಯೂಡ್ ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿದೆ.

ನಯನತಾರಾ: 'ಟಾಕ್ಸಿಕ್‌'ನಲ್ಲಿ ಗಂಭೀರ, ಮೋಸ್ಟ್ ಪವರ್‌ಫುಲ್ ಹಾಗೂ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕಿಯಾರಾ ಅಡ್ವಾಣಿ: ಇಲ್ಲಿ ಕಿಯಾರಾ ಅಡ್ವಾಣಿ ಮನಮೋಹಕ ಅಂತ ಅನಿಸುತ್ತಾರೆ. ಎಷ್ಟೇ ಮೋಹಕ ಅಂತ ಅನಿಸಿದರೂ, ಒಳಗೇ ಏನೋ ವಿಷಾದ, ದುಃಖವನ್ನು ಬಚ್ಚಿಟ್ಟುಕೊಂಡಿದ್ದಾರೆ ಅಂತ ಅನಿಸುತ್ತೆ.

Advertisement

ತಾರಾ ಸುತಾರಿಯಾ: ಯಾವುದೇ ಬಿಗುಮಾನವಿಲ್ಲದೆ, ಲವಲವಿಕೆಯಿಂದ ಬೋಲ್ಡ್ ಲುಕ್ ಕೊಟ್ಟಿದ್ದಾರೆ.

ರುಕ್ಮಿಣಿ ವಸಂತ್: ನಮ್ಮ ಕನ್ನಡದ ಮುದ್ದಾದ ನಟಿ ಗನ್ ಹಿಡಿದು ಆಕ್ರೋಶದಿಂದ ಲುಕ್ ಕೊಟ್ಟಿದ್ದು ಕಿಕ್ ಕೊಟ್ಟಿದೆ.

ಹುಮಾ ಖುರೇಶಿ: ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿ ಉಕ್ಕಿ ಸ್ವಭಾವ ಅಂತ ಅನಿಸುತ್ತೆ. ಕಿಡಿ ನೋಟ ಜೊತೆ ಮಾಡರ್ನ್ ಲುಕ್‌ನಲ್ಲಿ ಮಿಂಚಿದ್ದಾರೆ. 'ಟಾಕ್ಸಿಕ್' ಲೇಡಿಸ್ ಗ್ಲಿಂಪ್ಸ್ ನೋಡಿದ ಬಳಿಕ ಸಿನಿಮಾದಲ್ಲಿ ಮತ್ತಷ್ಟು ರಹಸ್ಯ ಅಡಗಿದೆ ಅನ್ನೋ ಸುಳಿವಂತೂ ಸಿಕ್ಕಿದೆ.

ವಿಡಿಯೋದಲ್ಲೇ ವಾರ್ನಿಂಗ್

'ಟಾಕ್ಸಿಕ್' ಲೇಡಿಸ್ & ಲೇಡಿಸ್ ಸ್ಪೆಷಲ್ ವಿಡಿಯೋ ಆರಂಭಕ್ಕೂ ಮುನ್ನ "ಮಕ್ಕಳೇ..ದೂರವಿರಿ. ಪೋಷಕರೇ.. ನಿಮ್ಮ ಮಕ್ಕಳು ಇದರಿಂದ ದೂರವಿರುವಂತೆ ನೋಡಿಕೊಳ್ಳಿ. ಅಜ್ಜ-ಅಜ್ಜಂದಿರೇ.. ನಿಮ್ಮ ಮಕ್ಕಳ ಇದರಿಂದ ದೂರವಿರುವುದನ್ನು ಖಾತ್ರಿ ಮಾಡಿಕೊಳ್ಳಿ. ಮುತ್ತಜ್ಜ-ಮುತ್ತಜ್ಜಂದಿರೇ.. ನಿಮ್ಮ ಸ್ವಂತ ರಿಸ್ಕ್ ಮೇಲೆ ನೋಡಿ" ಎಂದು ಹೇಳಿದ್ದೇನೋ ಸರಿ. ಆದರೆ, ಅಸಲಿ ಇದು ವಾರ್ನಿಂಗ್ ಅಲ್ವೇ ಅಲ್ಲ. 'ಟಾಕ್ಸಿಕ್' ಜೊತೆ ರಿಲೀಸ್‌ಗೆ ರೆಡಿಯಾಗಿರುವವರಿಗೆ ಪರೋಕ್ಷವಾಗಿ ವಾರ್ನಿಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.

Advertisement

ಈ ಗ್ಲಿಂಪ್ಸ್ ಕೊನೆಯಲ್ಲಿ ಯಶ್ "ಒಬ್ಬೊಬ್ರಾಗಿ ಬರ್ತೀರಾ.. ಇಲ್ಲಾ ಒಟ್ಟಿಗೆ ಬರ್ತೀರಾ?" ಅನ್ನೋ ಡೈಲಾಗ್ ವೈರಲ್ ಆಗಿದೆ. ಯಶ್ ಅಭಿಮಾನಿಗಳು ಇದು ತಮ್ಮ ಬಾಕ್ಸಾಫೀಸ್ ವೈರಿಗಳಿಗೆ ಕೊಟ್ಟಿರೋ ಟಾಂಗ್ ಅಂತ ಕಮೆಂಟ್ ಮಾಡುತ್ತಿದ್ದಾರೆ.