ಕನ್ನಡ ಚಿತ್ರರಂಗದಲ್ಲಿ ಸೂಪರ್‌ಸ್ಟಾರ್‌ಗಳ ಸಿನಿಮಾಗಳು ಮರೀಚಿಕೆಯಾಗಿ ಬಿಟ್ಟಿದೆ. ಹಿಂದೆಲ್ಲ ವರ್ಷಕ್ಕೆ ಒಂದು ಸಿನಿಮಾವನ್ನಾದರೂ ನಿರೀಕ್ಷೆ ಮಾಡಬಹುದಿತ್ತು. ಆದ್ರೀಗ ಎರಡು ವರ್ಷಕ್ಕೆ ಒಂದು ಸಿನಿಮಾ ಬಂದರೆ ಅದೇ ಹೆಚ್ಚು ಅನ್ನುವಂತಾಗಿದೆ. ಅಳೆದು ತೂಗಿ ಸಿನಿಮಾ ಮಾಡುತ್ತಿರುವ ಸ್ಟಾರ್‌ಗಳ ತಡವಾಗುತ್ತಿರುವುದರಿಂದ ಹೊಸಬರು ಕನ್ನಡ ಚಿತ್ರರಂಗಕ್ಕೆ ಆಸರೆಯಾಗಿದ್ದಾರೆ. ಅವರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲಿ ಒಂದು 'ಲೈಫ್ ಟುಡೇ'.

Advertisement

ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ಲವ್ ಸ್ಟೋರಿಗಳಷ್ಟೇ ಅಲ್ಲ, ಕೌಟುಂಬಿಕ ಬಾಂಧವ್ಯವನ್ನು ತೆರೆಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ. 'ಲೈಫ್ ಟುಡೇ' ಸಿನಿಮಾದಲ್ಲೂ ಕೂಡ ಹೀಗೆ ಲವ್ ಸ್ಟೋರಿ ಜೊತೆಗೆ ಕೌಟುಂಬಿಕ ಮೌಲ್ಯಗಳನ್ನು ಅಳವಡಿಸಲಾಗಿದೆ. ಜೊತೆಗೆ ಶ್ರೀಧರ್ ವಿ ಸಂಭ್ರಮ್ ಅವರ ಮ್ಯೂಸಿಕ್ ಕಿಕ್ ಕೊಟ್ಟಿದೆ.

Advertisement

'ಲೈಫ್ ಟುಡೇ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಿರಣ್ ಆದಿತ್ಯ ಮತ್ತು ಲೇಖ ಚಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಾಂತ ಕನ್ನಲ್ಲಿ ನಿರ್ದೇಶಿಸಿರುವ ಈ ಸಿನಿಮಾವನ್ನು ಮೇಘನಾ ಪ್ರದೀಪ್ ಅವರು ನಿರ್ಮಾಣ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ ಕೂಡ ಹೌದು. 'ಲೈಫ್ ಟುಡೇ' ಸಿನಿಮಾದ ದೊಡ್ಡ ಬಲ ಅಂದರೆ, ಅದು ಶ್ರೀಧರ್ ವಿ ಸಂಭ್ರಮ್. ಈ ಸಿನಿಮಾಗಾಗಿ ಸುಮಧುರ ಹಾಡುಗಳನ್ನು ಕಂಪೋಸ್ ಮಾಡುತ್ತಿದ್ದಾರೆ.

ಶ್ರೀಧರ್ ವಿ ಸಂಭ್ರಮ್ ಕಂಪೋಸ್ ಮಾಡಿರುವ ಹಾಡುಗಳು ಈಗಾಗ್ಲೇ ಜನಮನ ಸೆಳೆದಿವೆ. ಇದರ ಜೊತೆ ಜೊತೆಗೆ ಸಿನಿಮಾ ತಂಡ ಅಧಿಕೃತವಾಗಿ ಟ್ರೈಲರ್ ರಿಲೀಸ್ ಮಾಡಿದೆ. ಜೊತೆಗೆ ಸಿನಿಮಾ ಬಿಡುಗಡೆಯ ದಿನಾಂಕವನ್ನೂ ಅನೌನ್ಸ್ ಮಾಡಿದೆ. ಹೊಸ ಪ್ರಯತ್ನದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋ ಬಾಕ್ಸಾಫೀಸ್‌ನಲ್ಲಿ ಗೆಲುವಿನ ನಿರೀಕ್ಷೆಯಲ್ಲಿ ಇದೆ.

Advertisement

'ಲೈಫ್‌ಟುಡೇ' ಟ್ರೈಲರ್ ಭರವಸೆ ಮೂಡಿಸಿದೆ. ಇಂದಿನ ಹರೆದ ಮನಗಳ‌ ಪ್ರೀತಿ ನೀತಿ ನಿಷ್ಠೆಯ ಕದನ ಕಲಹಗಳ ಹೂರಣದಂತಿದೆ. ಯುವ ನಟ ಕಿರಣ್ ಆದಿತ್ಯ, ನಟಿ ಲೇಖ ಚಂದ್ರ ಕೆಮಿಸ್ಟ್ರಿ ಟ್ರೈಲರ್‌ನಲ್ಲಿ ಎದ್ದು ಕಾಣುತ್ತಿದೆ. ಮೇಲ್ನೋಟಕ್ಕೆ ಇವತ್ತಿನ ಲವ್ ಸ್ಟೋರಿ ತರಹ ಕಾಣ್ತಿರೋ 'ಲೈಫ್ ಟುಡೇ' ಸಿನಿಮಾದಲ್ಲಿ ಕೇವಲ ಲವ್ ಸ್ಟೋರಿ ಅಷ್ಟೇ ಅಲ್ಲ, ಸಿಕ್ಕಾಪಟ್ಟೆ ಟ್ವಿಸ್ಟ್ ಅಂಡ್ ಟರ್ನ್ ಇದೆ. ನಾಯಕ ಕನ್ನಡ ಚಿತ್ರರಂಗಕ್ಕೆ ಹೊಸಬರಾಗಿದ್ದರೂ, ಅನುಭವಸ್ಥರ ತಂಡ ಜೊತೆಯಲ್ಲಿ ನಿಂತಿದೆ. ಹಿರಿಯ ಹಾಸ್ಯ ನಟ ತಬಲನಾಣಿ, ಕಾಕ್ರೋಚ್ ಸುಧಿ, ಜಗ್ಗಪ್ಪ, ಯುಕ್ತ, ರತರ್ವ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Advertisement

'ದಿಯಾ' ಸಿನಿಮಾದ ನಿರ್ಮಾಪಕ ಕೃಷ್ಣ ಚೈತನ್ಯ, 'ವಾಮನ' ಸಿನಿಮಾದ ನಿರ್ಮಾಪಕ ಚೇತನ್ ಗೌಡ 'ಲೈಫ್ ಟುಡೇ' ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಕಂಟೆಂಟ್ ಗೆಲ್ಲೋ ಕಂಟೆಂಟ್ ಎಂದು ಶುಭ ಹಾರೈಸಿದ್ದಾರೆ.

ನಾಯಕ ಕಿರಣ್ ಆದಿತ್ಯ "ಇದು ಈ ಜನರೇಷನ್ ವಿಷ್ಯ ನಿಮಗಿಷ್ಟ ಆಗಲಿದೆ" ಎಂದರು... ನಿರ್ದೇಶಕ ಕಾಂತ ಕನ್ನಲ್ಲಿ ಇದು ಇಂದಿನ ಹದಿಹರೆಯದ ಬದುಕುಗಳಿಗೆ ತೀರ ಹತ್ತಿರವಿರೋ ವಿಚಾರ ಸಿನಿಮ್ಯಾಟಿಕ್ ಆಗಿ ಪ್ರೇಕ್ಷಕರ ಮನಮುಟ್ಟುವ ಪ್ರಯತ್ನ ಮಾಡಿದ್ದೀವಿ ಎಂದರು, ಕಾಕ್ರೋಚ್ ಸುಧಿ ಈ ಚಿತ್ರದ ಪಾತ್ರಧಾರಿಯಾಗಿ ಮತ್ತು ಈ ಚಿತ್ರತಂಡದ ಪ್ರಯತ್ನಕ್ಕೆ ಯಶಸ್ಸು ಧಕ್ಕಲಿದೆ ಅನ್ನೋ ಭರವಸೆಯ ಮಾತನ್ನಾಡುದ್ರು.. ಹಿರಿಯ ನಟ ತಬಲನಾಣಿ ಮಾತನಾಡುತ್ತಾ ಚಿತ್ರದಲ್ಲಿ ಲೇಖಚಂದ್ರರಿಗೆ ತಂದೆಯಾಗಿ ನಟಿಸಿದ್ದು,ಮಗಳಾಗಿ ಲೇಖ ಚಂದ್ರ ಈ ಚಿತ್ರದ ಕೇಂದ್ರ ಬಿಂದು, ರಾಷ್ಟ್ರಪ್ರಶಸ್ತಿ ಬರುವಂತಹ ನಟನೆ ಈ ಚಿತ್ರದಲ್ಲಿ ಅವ್ರದ್ದು ಎಂದರು.. ಇದೇ ವೇಳೆ ಮಾತನಾಡಿದ ಲೇಖ ಈ ಚಿತ್ರದ ಸಂದರ್ಭದಲ್ಲಿ ತಮ್ಮ ತಂದೆಯನ್ನ ಕಳೆದುಕೊಂಡದ್ದನ್ನ ನೆನೆದು ಭಾವುಕರಾದ್ರು. ಅಂದ್ಹಾಗೆ ಲೈಫ್ ಡುಡೇ ಚಿತ್ರದ ಟ್ರೈಲರ್ ಬಿಡುಗಡೆಯಾಗೋ ಮೂಲಕ ಅಧಿಕೃತ ಪ್ರಚಾರ ಕಾರ್ಯ ಶುರುವಾಗಿದೆ. ಆಗಸ್ಟ್ 6ಕ್ಕೆ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗ್ತಿದೆ.