ರಾಕಿಂಗ್ ಸ್ಟಾರ್ ಯಶ್ ಈಗ ಕೇವಲ ಕನ್ನಡ ಚಿತ್ರರಂಗಕ್ಕಷ್ಟೇ ಸೀಮಿತಾಗಿಲ್ಲ. 'ಕೆಜಿಎಫ್' ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ಮೇಲೆ ಈ ಗ್ಲೋಬಲ್ ಸ್ಟಾರ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ. 'ಟಾಕ್ಸಿಕ್' ಸಿನಿಮಾದ ಮೂಲಕ ಗ್ಲೋಬಲ್ ಆಡಿಯನ್ ಅನ್ನು ಟಚ್ ಮಾಡೋದು ಯಶ್ ಮುಂದಿನ ಗುರಿ. ಅದಕ್ಕೆ ಬೇಕಿರೋ ತಯಾರಿಗಳು ಈಗಾಗಲೇ ಶುರುವಾಗಿವೆ.
ಭಾರತದ ಬಹು ನಿರೀಕ್ಷೆಯ ಸಿನಿಮಾ 'ಟಾಕ್ಸಿಕ್' ಪ್ರಚಾರದಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಇಲ್ಲಿವರೆಗೂ ಸಿನಿಮಾದ ಒಂದೇ ಒಂದು ಗುಟ್ಟನ್ನೂ ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ ಒಂದೊಂದಾಗಿಯೇ ಕಂಟೆಂಟ್ ಅನ್ನು ಪ್ರೇಕ್ಷಕರ ಮುಂದೆ ಇಡುತ್ತಿದ್ದಾರೆ. ಸದ್ಯ 'ಟಾಕ್ಸಿಕ್' ಸಿನಿಮಾದ "ತಬಾಹಿ" ಸಾಂಗ್ ರಿಲೀಸ್ ಆಗಿದೆ. ಇಷ್ಟು ದಿನ ಕಾದು ಕೂತಿದ್ದವರಿಗೆ "ತಬಾಹಿ" ಬೇರೆನೇ ಕಿಕ್ ಕೊಟ್ಟಿದೆ.
ಕೆಲವರು ಈ ಹಾಡನ್ನು ತುಂಬಾನೇ ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು ಟೀಕೆಗಳ ಸುರಿಮಳೆಯನ್ನು ಸುರಿಸಿದ್ದಾರೆ. ಏನೇ ಇದ್ದರೂ ಯಶ್ ಇದೆಲ್ಲವನ್ನು ಅರಿವಿಟ್ಟುಕೊಂಡೇ ಮಾಡಿರುತ್ತಾರೆ ಅನ್ನೋ ನಂಬಿಕೆ ಅಭಿಮಾನಿಗಳಲ್ಲಿದೆ. ಇದೇ ಮಾತನ್ನು ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಕೂಡ ಸುಮನ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಇದೇ ಸಂದರ್ಶನದಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಷಯವನ್ನು ರಿವೀಲ್ ಮಾಡಿದ್ದಾರೆ. ಯಶ್ ಇನ್ನೊಂದು ಹೆಸರಿದೆ. ಅವರು ಮನೆಯಲ್ಲಿ ಯಶ್ ಅನ್ನು ಯಶ್ ಅಂತ ಕರೆಯೋದಿಲ್ಲ. ಮನೆಯಲ್ಲಿ ಅವರನ್ನು ಕರೆಯೋದೇ ಬೇರೆ. ಅದೇನು ಅಂತ ತಿಳಿಯುವುದಕ್ಕೆ ಈ ವಿಡಿಯೋ ನೋಡಿ. ಮನೆಯಲ್ಲಿ ಯಶ್ ಅಂತ ಕರೆಯೋಲ್ಲ ಜಗತ್ತಿಗೆ ರಾಕಿಂಗ್ ಸ್ಟಾರ್ ಯಶ್. ಅಭಿಮಾನಿಗಳಿಗೂ ಕೂಡ ಯಶ್. ಇನ್ನು ಯಶ್ ಅಸಲಿ ಹೆಸರು ನವೀನ್ ಕುಮಾರ್ ಗೌಡ ಅನ್ನೋದು ಈಗಾಗಲೇ ಗೊತ್ತಿದೆ. ಆದರೆ, ಈ ಎರಡು ಹೆಸರನ್ನು ಬಿಟ್ಟು ಇನ್ನೊಂದು ಹೆಸರು ಕೂಡ ಇದೆ. ಮನೆಯಲ್ಲಿ ಅವರ ಅಮ್ಮ ಹಾಗೂ ಸಂಬಂಧಿಕರು ಪ್ರೀತಿಯಿಂದ ಕರೆಯೋ ಹೆಸರದು. ಈ ಸಂದರ್ಶನದಲ್ಲಿ ಆ ಹೆಸರನ್ನು ರಿವೀಲ್ ಮಾಡಿದ್ದಾರೆ. "ಮನೆಯಲ್ಲಿ ಯಶ್ ಅನ್ನು ಸರ್ ಅಂತೆಲ್ಲ ಹೇಳಲ್ಲ. ಕೆಂಚ ಅಂತ ಕರೀತಿವಿ. ಹಾಸನದಲ್ಲಿ ಇದ್ದಾಗ ನಮ್ಮ ಮನೆಯವರೆಲ್ಲ ಅವನು ತುಂಬಾನೇ ಕೆಂಪಗೆ ಇದ್ದಿದ್ದರಿಂದ ಕೆಂಪು ಜನ ಅಂತ ಕರೆಯೋರು. ಒಳ್ಳೆಯ ಫಾರಿನ್‌ನವರು ಇದ್ದಂಗೆ ಇದ್ದ. ನಮ್ಮ ಹಳ್ಳಿ ಕಡೆ ಜನರಿಗೆ ಫಾರಿನರ್ಸ್ ಅಂತ ಕರೆಯೋಕೆ ಬರೋದಿಲ್ವಲ್ಲ. ಫಾರಿನ್‌ನವರು ಅಂದರೆ, ಕೆಂಪು ಜನ ಅಂತ. ನಮ್ಮ ಸಂಬಂಧಿಕರೆಲ್ಲರೂ ಕೆಂಚ ಅನ್ನೋರು. ನಾವು ಅದಕ್ಕೆ ಕೆಂಚ ಅಂತಲೇ ಕರೆಯುತ್ತೇವೆ." ಎಂದು ಪುಷ್ಪ ಅರುಣ್ ಕುಮಾರ್ ಹೇಳಿದ್ದಾರೆ. "ಅಣ್ಣಾವ್ರಿಗೂ ಟೆನ್ಷನ್ ಆಗ್ತಿತ್ತಂತೆ" ಇದೇ ಸಂದರ್ಶನದಲ್ಲಿ 'ಟಾಕ್ಸಿಕ್' ಸಿನಿಮಾ ಬಗ್ಗೆನೂ ಮಾತಾಡಿದ್ದಾರೆ. 'ಟಾಕ್ಸಿಕ್' ಸಿನಿಮಾವನ್ನು ಜನರು ಹೇಗೆ ತೆಗೆದುಕೊಳ್ಳುತ್ತಾರೋ ಅನ್ನೋ ಭಯವಿದೆ ಎಂದು ಅಣ್ಣಾವ್ರ ಉದಾಹರಣೆ ಕೊಟ್ಟು ಹೇಳಿದ್ದಾರೆ. "ಪ್ರತಿ ಸಿನಿಮಾಗೂ ಅಣ್ಣಾವ್ರಿಗೆ ಟೆನ್ಷನ್ ಆಗುತ್ತಿತ್ತಂತೆ. ನಮಗೂ ಪ್ರತಿ ಶೋ ಬಂದು ಜನರು ತೆಗೆದುಕೊಳ್ಳುವವರೆಗೂ ಟೆನ್ಷನ್ ಇರುತ್ತೆ. ಅವನಿಗೂ ಇದ್ದೇ ಇರುತ್ತೆ. ನನಗೆ ಅವನು ಏನೋ ಮಾಡಿರುತ್ತಾನೆ ಅನ್ನೋ ನಂಬಿಕೆಯಿದೆ. ಆದರೆ, ಸಿನಿಮಾವನ್ನು ಜನರು ಹೇಗೆ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಹೇಳುವುದಕ್ಕೆ ಆಗುವುದಿಲ್ಲ. ನಾವು ನಮ್ಮದೇ ಮಗು, ಚೆನ್ನಾಗಿದೆ ಅಂತ ಹೇಳಬಹುದು. ಆದರೆ, ಜನಕ್ಕೆ ಇಷ್ಟ ಆದರಷ್ಟೇ ಗೆದ್ದಂಗೆ" ಎಂದು ಪುಷ್ಪ ಅರುಣ್ ಕುಮಾರ್ ಹೇಳಿದ್ದಾರೆ. ಅರ್ಥಪೂರ್ಣ ಸಿನಿಮಾ ಮಾಡಿರುತ್ತಾನೆ ಹಾಗೇ 'ಟಾಕ್ಸಿಕ್' ಹಾಡಿನ ಟೀಕೆಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. "ಅವನು ಸುಮ್ಸುಮ್ನೆ ಮಾಡೋದಿಲ್ಲ. ಏನೇ ಮಾಡಿದರೂ ಅರ್ಥಪೂರ್ಣವಾಗಿ ಮಾಡಿರುತ್ತಾನೆಂಬ ನಂಬಿಕೆಯಿದೆ. ಇವತ್ತಿನವರೆಗೂ ಅವನನ್ನು ನೋಡಿಕೊಂಡು ಬಂದಿದ್ದೇನೆ. ನಮಗೆಲ್ಲ ಸಿನಿಮಾ ಬಗ್ಗೆ ಅಷ್ಟು ಐಡಿಯಾ ಇಲ್ಲ. ಆದರೆ, ಏನೋ ಮಾಡುತ್ತಾನೆಂಬ ನಂಬಿಕೆಯಿದೆ. ಟಾಕ್ಸಿಕ್ ಅನ್ನೂ ಹಾಗೇ ಏನೋ ಮಾಡಿರುತ್ತಾನೆಂಬ ನಂಬಿಕೆಯಿದೆ" ಎಂದು ಪುಷ್ಪ ಅರುಣ್ ಕುಮಾರ್ ಹೇಳಿದ್ದಾರೆ. "ಅಡ್ಡಾದಿಡ್ಡಿ ಸಿನಿಮಾ ಮಾಡೋದಿಲ್ಲ" "ನಾನೇನು ಎಕ್ಸ್‌ಪೆಕ್ಟೆಷನ್ ಇಟ್ಟುಕೊಂಡಿಲ್ಲ. ನಾವು ಏನೇ ಇಟ್ಟುಕೊಂಡರೂ ಜನರು ತೆಗೆದುಕೊಳ್ಳಬೇಕಲ್ಲ. ಇಷ್ಟು ವರ್ಷ ಸಮಯ ತೆಗೆದುಕೊಂಡು ಮಾಡಿದ್ದಾನೆ ಅಂದರೆ, ಸುಮ್ಮನೆ ಅಂತೂ ಮಾಡಿರಲ್ಲ. ಏನೂ ಗೊತ್ತಿಲ್ಲದೆ, ಅಡ್ಡಾದಿಡ್ಡಿ ಸಿನಿಮಾ ಮಾಡುವಂತಹ ವ್ಯಕ್ತಿನೂ ಅಲ್ಲ ಅವನು. ನಾನು ನಿಮ್ಮಂತೆ ಕಾಯುತ್ತಿದ್ದೇನೆ. ಅವತ್ತು ನಾನು ಸಿನಿಮಾ ನೋಡಿ ರಿಸಲ್ಟ್ ಹೇಳುತ್ತೇನೆ." ಎಂದು 'ಟಾಕ್ಸಿಕ್' ಬಗ್ಗೆ ಪುಷ್ಪ ಅರುಣ್ ಕುಮಾರ್ ಕಾನ್ಫಿಡೆಂಟ್ ಆಗಿ ಮಾತಾಡಿದ್ದಾರೆ.More Articles