'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ವೇದಿಕೆ ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಯಶ್ ನಾಲ್ಕು ವರ್ಷಗಳ ಬಳಿಕ ತೆರೆಮೇಲೆ ಅಬ್ಬರಿಸುವುದಕ್ಕೆ ಸಿದ್ದರಾಗಿ ನಿಂತಿದ್ದಾರೆ. ಇನ್ನೇನು ಸಿನಿಮಾ ಹತ್ತಿರ ಬರುತ್ತಿದ್ದಂತೆ 'ಟಾಕ್ಸಿಕ್' ಕೂಡ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಕನ್ನಡದ ಸಿನಿಮಾವೊಂದು ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದೆ. ಈ ಸಿನಿಮಾ ಇಲ್ಲಿವರೆಗೂ ಸೈಲೆಂಟ್ ಆಗಿದ್ದ ನಟಿಯರು ಒಬ್ಬೊಬ್ಬರೇ 'ಟಾಕ್ಸಿಕ್' ಬಗ್ಗೆ ರಹಸ್ಯಗಳನ್ನು ಬಿಚ್ಚಿಡುವುದಕ್ಕೆ ಶುರು ಮಾಡಿದ್ದಾರೆ.

Advertisement

'ಟಾಕ್ಸಿಕ್' ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮತ್ತೊಂದು ದುಬಾರಿ ಸಿನಿಮಾ. ಸಿನಿಮಾ ಬಜೆಟ್ ಒಂದೇ ಅಲ್ಲ, ಈ ಸಿನಿಮಾದ ಸ್ಟಾರ್ ಕಾಸ್ಟ್ ಕೂಡ ಅಷ್ಟೇ ಗಮನ ಸೆಳೆದಿದೆ. ಅದರಲ್ಲೂ ಐದು ಮಂದಿ ನಾಯಕಿಯರು ಒಂದೇ ಸಿನಿಮಾದಲ್ಲಿ ಇರೋದು ಸಿನಿ ಪ್ರಿಯರ ಹುಬ್ಬೇರಿಸಿದೆ. ಇಲ್ಲಿವರೆಗೂ ಸೈಲೆಂಟ್ ಆಗಿದ್ದ ಈ ಸಿನಿಮಾ ನಾಯಕಿಯರಲ್ಲಿ ಒಬ್ಬರಾದ ತಾರಾ ಸುತಾರಿಯಾ ಸಿನಿಮಾ ಹಾಗೂ ಯಶ್ ಬಗ್ಗೆ ಗುಣಗಾನ ಮಾಡಿದ್ದಾರೆ.

Advertisement