ಓಟಿಟಿಯಲ್ಲಿ ಅತೀ ಹೆಚ್ಚು ಕುತೂಹಲದಿಂದ ಎದುರು ನೋಡುತ್ತಿದ್ದ ವೆಬ್ ಸೀರಿಸ್ ಕೊನೆಗೂ ಬಂದೇ ಬಿಟ್ಟಿದೆ. 'ಹೌಸ್ ಆಫ್ ದಿ ಡ್ರ್ಯಾಗನ್' ಸೀಸನ್ 3ರ 4ನೇ ಎಪಿಸೋಡ್ ಸ್ಟ್ರೀಮಿಂಗ್ ಆಗುತ್ತಿದೆ. 4ನೇ ಎಪಿಸೋಡ್‌ನಲ್ಲಿ ಯುದ್ಧಭೂಮಿಯ ಅಬ್ಬರದಿಂದ ಹೊರಬಂದ ಮೇಲೆ ಗ್ರೀನ್ಸ್ ಮತ್ತು ಬ್ಲಾಕ್ಸ್ ತಂಡಗಳ ಮೇಲಿನ ವೈಯಕ್ತಿಕ ಹಾಗೂ ರಾಜಕೀಯ ಪರಿಣಾಮಗಳನ್ನು ಇಲ್ಲಿ ತೋರಿಸಲಾಗಿದೆ.

Advertisement

ಜಿಯೋ ಹಾಟ್‌ಸ್ಟಾರ್‌ನಲ್ಲಿ 'ಹೌಸ್ ಆಫ್ ದಿ ಡ್ರ್ಯಾಗನ್' 3ನೇ ಸೀಸನ್‌ನ 4ನೇ ಎಪಿಸೋಡ್ ಪ್ರಸಾರ ಆಗುತ್ತಿದೆ. ಇದರಲ್ಲಿ ದುಃಖ, ಅಪರಾಧ ಪ್ರಜ್ಞೆಗಳು ಒಟ್ಟಿಗೆ ಮುಖಾಮುಖಿಯಾಗುತ್ತವೆ. ಹೀಗಾಗಿ ಕಥೆಯು ಇಡೀ ವೆಸ್ಟೆರೋಸ್ ಸಾಮ್ರಾಜ್ಯಕ್ಕೆ ಸಾಗುತ್ತದೆ. ಈ ಎಪಿಸೋಡ್ 3ನೇ ಸೀಸನ್‌ನ ದ್ವಿತೀಯಾರ್ಧಕ್ಕೆ ಭರ್ಜರಿ ಮುನ್ನುಡಿ ಬರೆಯುತ್ತಿದೆ. ಹೀಗಾಗಿ 4ನೇ ಎಪಿಸೋಡ್ ತುಂಬಾನೇ ಸ್ಪೆಷಲ್ ಎನ್ನಬಹುದು.

Advertisement

ಇನ್ನು 'ಹೌಸ್ ಆಫ್ ದಿ ಡ್ರ್ಯಾಗನ್'ನ ಕಥೆಯ ಕಡೆಗೆ ಗಮನ ಹರಿಸುವುದಾರೇ, ರಹೇನ್ಯರಾ ತಾರ್ಗೇರಿಯನ್ ತನ್ನ ವೈಯಕ್ತಿಕ ಜೀವನದ ದೊಡ್ಡ ದುರಂತದಿಂದ ನೊಂದಿದ್ದು, ಇಷ್ಟೆಲ್ಲ ದುಃಖದ ನಡುವೆಯೂ ರಾಣಿಯಾಗಿ ಆಡಳಿತ ನಡೆಸಬೇಕಾಗಿದೆ. ಟಂಬಲ್ಟನ್ ಮೇಲೆ ಆಕ್ರಮಣದ ಪ್ರಶ್ನೆಗಳಿಂದ ಹಿಡಿದು, ಹೊಸ 'ಮಾಸ್ಟರ್ ಆಫ್ ಕಾಯಿನ್' ನೇಮಕ ಮಾಡುವವರೆಗೆ ಪ್ರತಿಯೊಂದು ನಿರ್ಧಾರವೂ ಆಕೆಯ ನಾಯಕತ್ವವನ್ನು ಪರೀಕ್ಷೆಗೆ ಒಳಪಡುವಂತೆ ಮಾಡಿದೆ. ಇತ್ತ ರಾಣಿಗೆ ಆಪ್ತರಾಗಿದ್ದವರೇ ರಹಸ್ಯಗಳನ್ನು ಮುಚ್ಚಿಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ, ಆಕೆಯ ಆಡಳಿತಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ.