ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಡುತ್ತಿದ್ದಂತೆ ಪಟ ಪಟ ಅಂತ ಡೈಲಾಗ್ ಬಿಟ್ಟು 'ಪಟಾಕಿ' ಅಂತಲೇ ಫೇಮಸ್ ಆಗಿದ್ದ ನಟಿ ನಭಾ ನಟೇಶ್. ಸದ್ಯಕ್ಕೀಗ ತೆಲುಗು ಚಿತ್ರರಂಗದಲ್ಲಿ ಹೆಜ್ಜೆ ಸಿನಿಮಾಗಳನ್ನು ಮಾಡಿದ್ದಾರೆ. ಇವರು ನಟಿಸಿದ ಸಿನಿಮಾ 'ನಾಗಬಂಧಂ' ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಈ ಬಿಗ್ ಬಜೆಟ್ ಸಿನಿಮಾ ಅವರ ವೃತ್ತಿ ಬದುಕಿಗೆ ಮತ್ತೊಂದು ತಿರುವು ಕೊಟ್ಟಿದೆ. ಮತ್ತೆ ಅವರನ್ನು ಯಶಸ್ಸಿನ ಹಾದಿಯಲ್ಲಿ ಕರೆದುಕೊಂಡು ಹೋಗುತ್ತಿದೆ.

Advertisement

'ನಾಗಬಂಧಂ' ಸಿನಿಮಾದಲ್ಲಿ ನಭಾ ನಟೇಶ್ ಅವರ ನಟನೆ ಹಾಗೂ ನೃತ್ಯಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮತ್ತೆ ಭರ್ಜರಿ ಯಶಸ್ಸು ಗಳಿಸಬೇಕು ಅಂತಿದ್ದ ನಭಾ ನಟೇಶ್‌ಗೆ 'ನಾಗಬಂಧಂ' ಪಾಸಿಟಿವ್ ರಿಸಲ್ಟ್ ಕೊಟ್ಟಿದೆ. ಮೇಲ್ನೋಟಕ್ಕೆ ಇದೊಂದು ಸಂಪೂರ್ಣ ಆಧ್ಯಾತ್ಮಿಕ ಹಿನ್ನೆಲೆಯ ಸಿನಿಮಾ ಎಂದು ಅನಿಸಿದರೂ, ಕಮರ್ಷಿಯಲ್ ಎಲಿಮೆಂಟ್ಸ್ ಜೊತೆಗೆ ಪಕ್ಕಾ ಮನರಂಜನಾತ್ಮಕ ಸಿನಿಮಾ ಎನಿಸಿಕೊಂಡಿದೆ. 'ನಾಗಬಂಧಂ' ಬಳಿಕ ಮತ್ತೊಂದು ಇವರ ಸಿನಿಮಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Advertisement