ಕನ್ನಡ ಕಿರುತೆರೆಯ ಸೆನ್ಸೆಷನಲ್ ಹೀರೋ ಪವನ್ ರವೀಂದ್ರ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ. ಇಲ್ಲಿವರೆಗೂ ತಮ್ಮ ನಟನೆಯ ಮೂಲಕ ಸದ್ದು ಮಾಡುತ್ತಿದ್ದ ನಟ ಈಗ ವೈವಾಹಿಕ ಜೀವನಕ್ಕೆ ಅಣಿಯಾಗುತ್ತಿದೆ. ಇತ್ತೀಚೆಗೆ ತನ್ನ ಗೆಳತಿಯೊಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಫೋಟೊಗಳು ಶೇರ್ ಆಗುತ್ತಿದ್ದಂತೆ ಕಿರುತೆರೆ ವೀಕ್ಷಕರು ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

Advertisement

ಸದ್ಯ ಕನ್ನಡದ 'ನೀ ಇರಲು ಜೊತೆಯಲ್ಲಿ' ಧಾರಾವಾಹಿಯಲ್ಲಿ ಪವನ್ ರವೀಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ಈ ಧಾರಾವಾಹಿಯ ಮೂಲಕ ಪವನ್ ರವೀಂದ್ರ ವೀಕ್ಷಕರಿಗೆ ಇಷ್ಟ ಆಗಿಬಿಟ್ಟಿದ್ದಾರೆ. 'ಜಾನಕಿ ರಾಘವ', 'ಏಟು ಏದಿರೇಟು', 'ರಂಗನಾಯಕಿ' ಯಂತಹ ಸೂಪರ್ ಹಿಟ್ ಕನ್ನಡ ಧಾರಾವಾಹಿಗಳಲ್ಲಿ ರಂಜಿಸಿರೋ ಪವನ್ ರವೀಂದ್ರ ಈಗ ಬ್ಯಾಚುಲರ್ ಲೈಫ್‌ಗೆ ಗುಡ್‌ಬೈ ಹೇಳಲು ತುದಿಗಾಲಲ್ಲಿ ನಿಂತಿದ್ದಾರೆ.

Advertisement

ಇತ್ತೀಚೆಗೆ ಪವನ್ ರವೀಂದ್ರ ತಮಿಳುನಾಡಿನ ಜನಪ್ರಿಯ ನಟಿ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರೋ ಆರತಿ ಸುಭಾಷ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಚೆನ್ನೈನಲ್ಲಿ ನಡೆದ ಈ ಸರಳ ಸಮಾರಂಭದಲ್ಲಿ ನವ ಜೋಡಿ ಫುಲ್ ಹ್ಯಾಪಿ ಮೂಡ್‌ನಲ್ಲಿದೆ. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಆರವಿ ಸುಭಾಷ್ ಯಾರು ಅಂತ ಹುಡುಕೋಕು ಶುರು ಮಾಡಿದ್ದಾರೆ.

ಚೆನ್ನೈನ ದೇವಸ್ಥಾನದಲ್ಲಿ ನಿಶ್ವಿತಾರ್ಥ

ಪವನ್ ರವೀಂದ್ರ ಹಾಗೂ ಆರವಿ ಸುಭಾಷ್ ಇಬ್ಬರೂ ಟ್ರೆಡಿಷನಲ್ ಲುಕ್‌ನಲ್ಲಿ ಮಿಂಚಿದ್ದಾರೆ. ಚೆನ್ನೈನ ದೇವಸ್ಥಾನದಲ್ಲಿ ಸರಳವಾಗಿ ಕೇವಲ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಇಬ್ಬರೂ ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದಾರೆ. ಇವರಿಬ್ಬರೂ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ಕಿರುತೆರೆ ವೀಕ್ಷಕರಿಗೆ ಹಲವು ಪ್ರಶ್ನೆಗಳು ಮೂಡಿವೆ. ಇಬ್ಬರಿಗೂ ಪ್ರೀತಿ ಹುಟ್ಟಿದ್ದೇಗೆ? ಆರತಿ ಸುಭಾಷ್ ಹಿನ್ನೆಲೆ ಏನು? ಅಂತ ತಿಳಿದುಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

Advertisement

ಇಬ್ಬರಲ್ಲೂ ಪ್ರೀತಿ ಮೂಡಿದ್ದು ಹೇಗೆ?

ಪವನ್ ರವೀಂದ್ರ ಕನ್ನಡ ಮಾತ್ರ ತೆಲುಗು ಹಾಗೂ ತಮಿಳು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ತಮಿಳು ಸೀರಿಯಲ್‌ನಲ್ಲಿ ಕೆಲಸ ಮಾಡುವಾಗ ನಟಿ ಆರತಿ ಸಭಾಷ್ ಪರಿಚಯವಾಗಿತ್ತು. ಅಲ್ಲಿಂದ ಸ್ನೇಹಿತರಾಗಿದ್ದವರಲ್ಲಿ ಪ್ರೀತಿ ಚಿಗುರಿತ್ತು. ಕೆಲವು ವರ್ಷಗಳಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು. ಕೊನೆಗೂ ಎರಡೂ ಕುಟುಂಬದ ಸಮ್ಮತಿ ಪಡೆದು ಅವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಆರತಿ ಸುಭಾಷ್ ಯಾರು?

ಚೆನ್ನೈ ಮೂಲದ ಆರತಿ ಸುಭಾಷ್ ಬಾಲ ನಟಿಯಾಗಿ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸನ್‌ ಟಿವಿಯಲ್ಲಿ ಪ್ರಸಾರ ಆಗಿದ್ದ 'ಪಾಂಡವರ್ ಇಲ್ಲಂ' ಸೀರಿಯಲ್‌ನಲ್ಲಿ ನಟಿಸಿದ್ದರು. ಅದು ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಅಲ್ಲಿಂದ ನಟಿಯಾಗಿ ಜನಪ್ರಿಯರಾಗಿದ್ದಾರೆ. ಹಾಗಂತ ಕೇವಲ ಸೀರಿಯಲ್ ಅಷ್ಟೇ ಅಲ್ಲ. ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್ ಕೂಡ ಹೌದು. ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

Advertisement

ಕನ್ನಡದ ಸೊಸೆ ಆರತಿ

ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಆರತಿ ಸುಭಾಷ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಪವನ್‌ ಬಗ್ಗೆ ಮನಮೆಚ್ಚುವ ಸಾಲುಗಳನ್ನು ಶೇರ್ ಮಾಡಿದ್ದಾರೆ. ಕನ್ನಡದ ಹುಡುಗ ಹಾಗೂ ತಮಿಳುನಾಡಿನ ಹುಡುಗಿಯ ಈ ಕ್ಯೂಟ್ ಲವ್ ಸ್ಟೋರಿ ಇನ್ನೊಂದು ಹಂತಕ್ಕೆ ಹೋಗಿದೆ. ಸದ್ಯ ನಿಶ್ವಿತಾರ್ಥ ಆಗಿದ್ದು, ಇನ್ನೂ ಮದುವೆ ಡೇಟ್ ಸೇರಿದಂತೆ ಇನ್ನಿತರ ಮಾಹಿತಿಗಳು ಅಧಿಕೃತವಾಗಿ ಪವನ್ ರವೀಂದ್ರ ಹಾಗೂ ಆರತಿ ಸುಭಾಷ್ ಮುಂದಿನ ದಿನಗಳಲ್ಲಿ ರಿವೀಲ್ ಮಾಡಬಹುದು.