ಬೆಳ್ಳಿತೆರೆಗೆ ಮತ್ತೆ ಶ್ರೀದೇವಿ ಅನಿಲ್ ಕಪೂರ್ ಜೋಡಿ

By Rajendra

ಅನಿಲ್ ಕಪೂರ್ ಹಾಗೂ ಮೋಹಕ ತಾರೆ ಶ್ರೀದೇವಿ ಅಭಿನಯದ ಸೂಪರ್ ಹಿಟ್ ಚಿತ್ರ 'ಮಿಸ್ಟರ್ ಇಂಡಿಯಾ'. ಈಗ ಇದೇ ಚಿತ್ರದ ಭಾಗ 2ರನ್ನು ನಿರ್ಮಿಸಲು ಬೋನಿ ಕಪೂರ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ 'ಮಿಸ್ಟರ್ ಇಂಡಿಯಾ 2' ಎಂದು ಹೆಸರಿಡಲಾಗಿದ್ದು ತ್ರಿಡಿಯಲ್ಲಿ ಮೂಡಿಬರುತ್ತಿರುವುದು ವಿಶೇಷ.

1987ರಲ್ಲಿ ತೆರೆಕಂಡಿದ್ದ 'ಮಿಸ್ಟರ್ ಇಂಡಿಯಾ' ಚಿತ್ರ ಅಪಾರ ಜನಮನ್ನಣೆಗೆ ಪಾತ್ರವಾಗಿತ್ತು. ಈಗ ಈ ಚಿತ್ರದ ಮುಂದುವರಿದ ಭಾಗದಲ್ಲೂ ಶ್ರೀದೇವಿ ಹಾಗೂ ಅನಿಲ್ ಕಪೂರ್ ಅಭಿನಯಿಸಲಿದ್ದಾರೆ. ಈ ಚಿತ್ರಕ್ಕೆ ಈಗ ವಿದೇಶಿ ತಂತ್ರಜ್ಞರನ್ನು ಬಳಸಿಕೊಳ್ಳಲಾಗುತ್ತಿದ್ದು ಸಂಗೀತ ಸಂಯೋಜನೆ ಎ ಆರ್ ರೆಹಮಾನ್ ಮಾಡಲಿದ್ದಾರೆ.

'ನೋ ಎಂಟ್ರಿ 2' ಚಿತ್ರದ ಬಳಿಕ 2012ಕ್ಕೆ 'ಮಿಸ್ಟರ್ ಇಂಡಿಯಾ 2' ಚಿತ್ರ ಸೆಟ್ಟೇರಲಿದ್ದು, 2014ಕ್ಕೆ ತೆರೆ ಕಾಣುವ ಸಾಧ್ಯತೆಗಳಿವೆ. 'ಮಿ.ಇಂಡಿಯಾ 2' ಚಿತ್ರಕತೆ ಹಾಗೂ ನಿರ್ದೇಶಕರು ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. 'ಮಿಸ್ಟರ್ ಇಂಡಿಯಾ' ಚಿತ್ರಕ್ಕೆ ಶೇಖರ್ ಕಪೂರ್ ಆಕ್ಷನ್ ಕಟ್ ಹೇಳಿದ್ದರು.

ಮಿ.ಇಂಡಿಯಾ 2ರಲ್ಲಿ ಸಲ್ಮಾನ್ ಖಾನ್‌ರನ್ನು ಖಳನಟನಾಗಿ ಪರಿಚಯಿಸಲು ಬೋನಿ ಕಪೂರ್ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಭಾಗ ಒಂದರಲ್ಲಿ ಅಮರೀಷ್ ಪುರಿ 'ಮೊಗಾಂಬೋ' ಪಾತ್ರದಲ್ಲಿ ಗಮನಸೆಳೆದಿದ್ದರು. ಈಗ ಅದೇ ಪಾತ್ರವನ್ನು ಸಲ್ಮಾನ್ ಖಾನ್ ಪೋಷಿಸಲಿದ್ದಾರೆ. ಸಹಾರ ಮೋಷನ್ ಪಿಕ್ಚರ್ಸ್ ಸಹಯೋಗದಲ್ಲಿ ಬೋನಿ ಕಪೂರ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. (ಏಜೆನ್ಸೀಸ್)

More from Filmibeat

English summary
The sequel to Boney Kapoors 1987s super hit film Mr. India will be made in 3D. The film will star Anil Kapoor, Sridevi, and Arjun Kapoor in the lead roles. The film however, will go on floors in 2012 after the release of No Entry 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X