ಶಾರುಖ್ ಖಾನ್ ಸಂಸಾರದಲ್ಲಿ ಸನಿದಪಮಗರಿಸ

ಬಾಲಿವುಡ್ ಬಾದಶಾ ಶಾರುಖ್ ಖಾನ್ ಮತ್ತು ಆತನ ಪತ್ನಿ ಗೌರಿ ಖಾನ್ ನಡುವಿನ ದಾಂಪತ್ಯ ಜೀವನ ಕವಲೊಡೆಯುವ ಹಾದಿಯಲ್ಲಿದೆಯೇ? ಈ ರೀತಿಯ ಸ್ಫೋಟಕ ಸುದ್ದಿ ಬಾಲಿವುಡ್‌ನಲ್ಲಿ ಗಲ್ಲಿ ಗಾಸಿಪ್ ಆಗಿ ಸುತ್ತುತ್ತಿದೆ. ಇಪ್ಪತ್ತು ವರ್ಷಗಳ ಹಿಂದೆ ಶಾರುಖ್ ಗೌರಿಯನ್ನು ಪ್ರೀತಿಸಿ ಮದುವೆಯಾಗಿದ್ದರು.

ಬಹಳ ಅನ್ಯೋನ್ಯವಾಗಿದ್ದ ಈ ದಂಪತಿಗಳು ಎಲ್ಲರಿಗೂ ಮಾದರಿಯಾಗಿದ್ದರು. ಆದರೆ ಶಾರುಖ್ ಇತ್ತೀಚಿಗೆ ನಡೆದು ಕೊಳ್ಳುತ್ತಿರುವ ರೀತಿ ಗೌರಿ ಮನಸು ಬಹಳ ನೋಯಿಸುವಂತೆ ಮಾಡಿದೆಯಂತೆ. ಏನಾದರೂ ನೆಪವೊಡ್ಡಿ ಕಿಂಗ್ ಖಾನ್ ಬಹಳ ಸಮಯ ಮನೆಯಲ್ಲಿ ಇರುವುದಿಲ್ಲವಂತೆ.

ಚಿತ್ರೀಕರಣ ಹಂತದಲ್ಲಿರುವ 'ಡಾನ್ 2' ಚಿತ್ರದಲ್ಲಿ ಶಾರುಖ್‌ಗೆ ಪ್ರಮುಖ ನಾಯಕಿ ಪ್ರಿಯಾಂಕ ಚೋಪ್ರಾ. ಈ ಚಿತ್ರದ ಚಿತ್ರೀಕರಣ ಶುರುವಾದ ನಂತರ ಸಂಸಾರದಲ್ಲಿ ಸರಿಗಮಪದನಿಸ ಸನಿದಪಮಗರಿಸ ಶುರುವಾಗಿದೆ ಎನ್ನುತ್ತದೆ ಬಾಲಿವುಡ್ ಗಾಸಿಪ್ ಸುದ್ದಿಗಳು.

ಶಾರುಖ್ ಇತ್ತೀಚಿಗೆ ಪ್ರಿಯಾಂಕ ಚೋಪ್ರಾಳನ್ನು ಸಿಕ್ಕಾಪಟ್ಟೆ ಹಚ್ಚಿ ಕೊಂಡಿದ್ದಾರಂತೆ. ಇದೇ ಕಾರಣಕ್ಕಾಗಿ ಪತಿ ಪತ್ನಿಗಳ ನಡುವೆ ಬಿರುಕು ಮೂಡಿದೆಯಂತೆ. ಶೂಟಿಂಗ್ ನೆಪವೊಡ್ಡಿ ಮನೆಯಲ್ಲಿ ಕಿಂಗ್ ಖಾನ್ ಇರದಿರುವುದು ಗೌರಿ ಕೋಪಕ್ಕೆ ಕಾರಣವಂತೆ. ಈ ಅಂತೆ ಕಂತೆಗಳು ಗಾಸಿಪ್ ಸುದ್ದಿಯೋ ನಿಜವಾದ ಸುದ್ದಿಯೋ ಸದ್ಯಕ್ಕೆ ನೋ ಆನ್ಸರ್..

ಅಂದ ಹಾಗೆ ಡಾನ್ 2 ಚಿತ್ರದ ಬಿಡುಗಡೆ ಮಹೂರ್ತ ಡಿಸೆಂಬರ್ 23 ಎಂದು ನಿಗದಿಯಾಗಿದೆ. ಶಾರುಖ್, ಪ್ರಿಯಾಂಕಾ, ಲಾರಾ ದತ್ತಾ, ಬೋಮನ್ ಇರಾನಿ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಸಾಮರಸ್ಯವಾಗಿ ಸಾಗುತ್ತಿದ್ದ ಈ ದಂಪತಿಗಳ ಜೀವನದಲ್ಲಿ ಬಿರುಕು ಮೂಡದೇ ಇರಲಿ ಎನ್ನುವುದು ಸಿನಿಪ್ರಿಯರ ಆಶಯ. ವಿವಾಹ ವಿಚ್ಛೇದನಕ್ಕೆ ಐದು ಕಾರಣಗಳು (ಏಜೆನ್ಸೀಸ್)

More from Filmibeat

English summary
Rumours are afloat in Tinselville that superstar Shahrukh Khan’s marriage is on the rocks as his better half Gauri Khan is miffed with him over his growing intimacy with his 'Don 2' costar Priyanka Chopra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X