For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ಶಾರುಖ್ ಖಾನ್ ಕಾಲಿಗೆ ಡ್ಯಾಮೇಜ್

  By Rajendra
  |

  ಅದೊಂದು ಸಾಹಸ ಸನ್ನಿವೇಶದ ಚಿತ್ರೀಕರಣ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಚೇಸಿಂಗ್ ಸನ್ನಿವೇಶಗಳನ್ನು ಸೆರೆಹಿಡಿಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಕೊಚ್ಚೆ ಗುಂಡಿಯಲ್ಲಿ ಅವರ ಕಾಲು ಸಿಲುಕಿ ಕಾಲು ಉಳಿಕಿಸಿಕೊಂಡಿದ್ದಾರೆ. 'ರಾ.ಒನ್' ಚಿತ್ರೀಕರಣದಲ್ಲಿ ಈ ಘಟನೆ ನಡೆದಿದೆ.

  ಇತ್ತೀಚೆಗೆ ಶಾರುಖ್ ತಮ್ಮ ಸ್ವಂತ ನಿರ್ಮಾಣದ 'ಕಭಿ ಕಭಿ' ಚಿತ್ರದ ಧ್ವನಿಸುರುಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಗ ಅವರು ಸ್ವಲ್ಪ ನಿಧಾನಕ್ಕೆ ನಡೆಯುತ್ತಾ ಬಂದರಾದರೂ ಅವರ ಮುಖ ಮಾತ್ರ ಕಾಲಿನ ನೋವನ್ನು ಪ್ರತಿಬಿಂಬಿಸುತ್ತಿತ್ತು. ಹೇಗೋ ಮ್ಯಾನೇಜ್ ಮಾಡ್ದೆ ಅಂದುಕೊಂಡ ಅವರಿಗೆ, ಪತ್ರಕರ್ತನೊಬ್ಬ ಏನಾಯ್ತು ಸಾರ್ ಎಂದ. ಆಗ ಅವರ ಕಾಲು ಉಳುಕಿಸಿಕೊಂಡದ್ದು ಬಯಲಾಗಿದೆ.

  "ರಾ.ಒನ್ ಚಿತ್ರೀಕರಣದಲ್ಲಿ ಹೀಗಾಯಿತು. ಕೊಚ್ಚೆಗುಂಡಿಯಲ್ಲಿ ಸಿಲುಕಿಕೊಂಡ ಕಾಲನ್ನು ತೆಗೆಯಬೇಕಾದರೆ ಉಳುಕಿತು. " ಎಂದಿದ್ದಾರೆ. ಈ ಹಿಂದೊಮ್ಮೆ ಶಾರುಖ್ 'ಕೋಯ್ಲಾ' ಚಿತ್ರೀಕರಣದ ವೇಳೆಯೂ ಗಂಭೀರವಾಗಿ ಗಾಯಗೊಂಡಿದ್ದರು. ಕಳೆದ ಐದು ವರ್ಷಗಳಲ್ಲಿ ಶಾರುಖ್ ಚಿತ್ರೀಕರಣದಲ್ಲಿ ಸಾಕಷ್ಟು ಪೆಟ್ಟುಗಳನ್ನು ತಿಂದಿದ್ದಾರೆ. (ಏಜೆನ್ಸೀಸ್)

  English summary
  Bollywood star Shah Rukh Khan, who has been busy with the shooting of his super hero film Ra.One and action thriller Don. The Chase Continues, hurt his leg after it got stuck in a puddle recently. He is also busy with his Indian Premier League (IPL) team Kolkata Knight Riders.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X