ಶಾರುಖ್ ಮನೆಯ ಕಾಂಪೌಂಡ್ ಹಾರಿ 8 ಗಂಟೆ ಅಡಗಿ ಕೂತಿದ್ದ ಫ್ಯಾನ್ಸ್: ಕಿಂಗ್ ಖಾನ್‌ಗೆ ಶಾಕ್

ಬಾಲಿವುಡ್‌ ಸೂಪರ್‌ಸ್ಟಾರ್ ಶಾರುಖ್ ಖಾನ್ ಮನೆಯಲ್ಲಿ ಇಬ್ಬರು ಅಭಿಮಾನಿಗಳು ಅಡಗಿ ಕೂತಿದ್ದರು. ಕಿಂಗ್ ಖಾನ್ ಅನ್ನು ಕಣ್ತುಂಬಿಕೊಳ್ಳಬೇಕು ಅಂತಲೇ ಮುಂಬೈನಲ್ಲಿರುವ ಶಾರುಖ್ ಬಂಗಲೆ ಮನ್ನಥ್ ಕಾಂಪೌಂಡ್ ಹಾರಿದ್ದರು. ಸುಮಾರು 8 ಗಂಟೆಗಳ ಕಾಲ ಅಡಗಿ ಕೂತಿದ್ದರು. ಕಳೆದ ವಾರ ನಡೆದ ಈ ಘಟನೆಯ ಸಂಬಂಧ ಮುಂಬೈ ಪೊಲೀಸರು ಇಬ್ಬರು ಅಭಿಮಾನಿಗಳನ್ನು ಬಂಧಿಸಿದ್ದಾರೆ.

ಪೊಲೀಸರ್ ಮೂಲಗಳ ಪ್ರಕಾರ, ಗುಜರಾತಿನಿಂದ ಬಂದಿದ್ದ ಪಠಾಣ್ ಸಾಹಿಲ್ ಖಾನ್ ಹಾಗೂ ರಾಮ್ ಶರಾಫ್ ಕುಶ್‌ವಾಹ ಎಂಬ ಇಬ್ಬರು ಅಭಿಮಾನಿಗಳನ್ನು ಬಂಧಿಸಲಾಗಿದೆ. ಇವರಿಬ್ಬರೂ ಶಾರುಖ್ ಖಾನ್ ಅನ್ನು ಭೇಟಿ ಮಾಡಲೆಂದು ಮುಂಬೈಗೆ ಬಂದಿದ್ದರು. ಈ ವೇಳೆ ಶಾರುಖ್ ಖಾನ್ ಮನೆಯ ಮೇಕಪ್‌ ರೂಮ್‌ನಲ್ಲಿ 8 ಗಂಟೆಗಳ ಕಾಲ ಅಡಗಿ ಕೂತಿದ್ದರು ಎನ್ನಲಾಗಿದೆ.

2 Fans From Gujarat hid in Shah Rukh Khans Mumbai Home Mannat For 8 Hours

ಅಭಿಮಾನಿಗಳನ್ನು ಕಂಡು ಶಾರುಖ್ ಖಾನ್ ಶಾಕ್

ಪಠಾಣ್ ಸಾಹಿಲ್ ಖಾನ್ ಹಾಗೂ ರಾಮ್ ಶರಾಫ್ ಕುಶ್‌ವಾಹ ಎಂಬ ಇಬ್ಬರು ಅಭಿಮಾನಿಗಳ ಮೇಲೆ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. " ಶಾರುಖ್ ಖಾನ್ ಬಂಗಲೆಯಿಂದ ಅವರನ್ನು ಭೇಟಿ ಮಾಡಲೆಂದು ಬಂದಿದ್ದ ಇಬ್ಬರು ಅಭಿಮಾನಿಗಳನ್ನು ಬಂಧಿಸಲಾಗಿದೆ. ಶಾರುಖ್ ಖಾನ್ ಅನ್ನು ಭೇಟಿ ಮಾಡಲೆಂದು ಮೇಕಪ್ ರೂಮ್‌ ಬಳಿ 8 ಗಂಟೆ ಕಾದು ಕೂತಿದ್ದರು. ಅವರು ಬೆಳಗ್ಗೆ 3 ಗಂಟೆಗೆ ಮನೆಯೊಳಗೆ ಪ್ರವೇಶ ಮಾಡಿದ್ರು. ಬೆಳಗ್ಗೆ 10.30ರ ಸುಮಾರಿಗೆ ಬಂಧಿಸಲಾಯಿತು" ಎಂದು ಎಎನ್‌ಐ ವರದಿ ಮಾಡಿದೆ.

ಶಾರುಖ್ ಖಾನ್ ಬಂಗಲೆಯ ಮೂರನೇ ಮಹಡಿಯಲ್ಲಿ ಮೇಕಪ್ ರೂಮ್ ಇದ್ದು,ಅಲ್ಲಿ ಅಭಿಮಾನಿಗಳು ಅಡಗಿ ಕೂತಿದ್ದರು. ಇವರನ್ನು ಕಂಡು ಕಿಂಗ್ ಖಾನ್ ಶಾಕ್ ಆಗಿದ್ದರು ಎಂದು ವರದಿಯಾಗಿದೆ. 11 ಗಂಟೆ ಸುಮಾರಿಗೆ ಸೆಕ್ಯೂರಿಟಿ ಗಾರ್ಡ್ ಫೋನ್ ಮಾಡಿ, ಇಬ್ಬರು ಅಭಿಮಾನಿಗಳು ಮನೆಯೊಳಗೆ ನುಗ್ಗಿದ್ದಾರೆಂದು ಮಾಹಿತಿ ನೀಡಿದ್ದಾಗಿ ಶಾರುಖ್ ಖಾನ್ ಬಂಗ್ಲೆಯ ಮ್ಯಾನೇಜರ್ ಕೊಲೀನ್ ಡಿಸೋಜಾ ಮಾಹಿತಿ ನೀಡಿದ್ದಾರೆ.

2 Fans From Gujarat hid in Shah Rukh Khans Mumbai Home Mannat For 8 Hours

FIRನಲ್ಲಿ ಹೇಳಿದ್ದೇನು?

FIR ಪ್ರಕಾರ, ಶಾರುಖ್ ಖಾನ್ ಮನೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿರುವ ಸತೀಶ್ ಕಣ್ಣಿಗೆ ಇಬ್ಬರು ಅಭಿಮಾನಿಗಳು ಬಿದ್ದಿದ್ದರು. " ಸತೀಶ್ ಅವರಿಬ್ಬರನ್ನೂ ಮೇಕಪ್ ರೂಮ್‌ನಿಂದ ಲಾಬಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಶಾರುಖ್ ಖಾನ್ ಅಪರಿಚಿತರಿಬ್ಬರನ್ನು ನೋಡಿ ಶಾಕ್ ಆಗಿದ್ದರು. ಬಳಿಕ ಬಾಂದ್ರದ ಪೊಲೀಸರಿಗೆ ಒಪ್ಪಿಸಲಾಯ್ತು." ಎಂದು FIRನಲ್ಲಿ ಹೇಳಲಾಗಿದೆ.

ಪೊಲೀಸ್ ತನಿಖೆಯಲ್ಲಿ ಇಬ್ಬರು ಅಭಿಮಾನಿಗಳ ವಯಸ್ಸು 20 ಹಾಗೂ 21 ಎಂದು ಗುರುತಿಸಲಾಗಿದ್ದು, ಗುಜರಾತಿನಿಂದ ಮುಂಬೈಗೆ ಶಾರುಖ್ ಖಾನ್ ನೋಡಲೆಂದೇ ಬಂದಿದ್ದರು ಎಂದು ತಿಳಿದು ಬಂದಿದೆ. ಶಾರುಖ್ 'ಪಠಾಣ್' ಮೂಲಕ ಕಮ್‌ಬ್ಯಾಕ್ ಮಾಡಿದ್ದು, ಬಾಕ್ಸಾಫೀಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಸದ್ಯ 'ಜವಾನ್' ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
2 Fans From Gujarat hid in Shah Rukh Khan's Mumbai Home Mannat For 8 Hours, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X