ಕರಿಷ್ಮಾ ಕಪೂರ್ ಲಿಪ್ ಟು ಲಿಪ್ 'ಲಾಕ್' ರೀ ಎಂಟ್ರಿ
ಹತ್ತು ವರ್ಷಗಳ ಬಳಿಕ ಬಾಲಿವುಡ್ ಬಣ್ಣದ ಬದುಕಿಗೆ ಮತ್ತೆ ಎಂಟ್ರಿ ಕೊಟ್ಟಿರುವ ಕರಿಷ್ಮಾ ಕಪೂರ್ ಪಡ್ಡೆ ಹುಡುಗರು ಮೈ ಬಿಸಿ ಮಾಡಿಕೊಳ್ಳುವಂತೆ ಮಾಡಿದ್ದಾರೆ. ರಜನೀಶ್ ದುಗ್ಗಲ್ ಎನ್ನುವ ಯುವ ನಟನ ಜೊತೆ ಬಿಸಿಬಿಸಿ ದೃಶ್ಯಗಳಲ್ಲಿ ಕಾಣಿಸಿ ಕೊಂಡಿದ್ದಲ್ಲದೇ ಧೀರ್ಘ ಚುಂಬನ ದೃಶ್ಯದಲ್ಲೂ ಕಾಣಿಸಿ ಕೊಳ್ಳಲಿದ್ದಾರೆ. ಅಂತೂ ಎರಡನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ ಕಪೂರ್ ಮನೆತನದ ಕುಡಿ.
ಚಿತ್ರದ ಹೆಸರೇ 'ಡೇಂಜರಸ್ ಇಷ್ಕ್'. ಈಗ ಇಬ್ಬರು ಮಕ್ಕಳ ತಾಯಿಯಾಗಿರುವ ಕರಿಷ್ಮಾ, ಈ ಚಿತ್ರದಲ್ಲೂ ವಿವಾಹಿತೆ ಮಹಿಳೆಯ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ವಿವಾಹಿತೆ ಮಹಿಳೆ ಅವಿವಾಹಿತ ಯುವಕನನ್ನು ಮೋಹಿಸುವ ಪಾತ್ರ. ಸೋ.. ಬಿಸಿಬಿಸಿ ದೃಶ್ಯ ಇರಲೇ ಬೇಕಲ್ಲವೇ? ಚಿತ್ರ ಕಥೆಗೆ ಲಿಪ್ ಲಾಕ್ ಮತ್ತು ಬೆಡ್ ರೂಮಿನ ಜರೂರತ್ ಇದ್ದಿದ್ದರಿಂದ ಈ ದೃಶ್ಯಕ್ಕೆ ಒಪ್ಪಿಕೊಳ್ಳಲೇ ಬೇಕಾಯಿತು ಎಂದು ಸಮಜಾಯಿಷಿ ನೀಡಿದ್ದಾರೆ.
ಇಂತಹ ದೃಶ್ಯಗಳಲ್ಲಿ ನಟಿಸಲು ಕರಿಷ್ಮಾ ಕಪೂರ್ ಗೆ ಅನುಭವದ ಕೊರತೆಯೇನೂ ಇಲ್ಲ ಬಿಡಿ. ಅವರ ಬಯೋ-ಡೇಟಾ ದಲ್ಲಿ ಈ ಹಿಂದೆ ಅಮೀರ್ ಖಾನ್ ಮತ್ತು ಗೋವಿಂದ ಜೊತೆ ಚುಂಬಿಸಿದ ಅನುಭವವಿದೆ. "ಪರ್ದೇಶಿ ಪರ್ದೇಶಿ ಜಾನಾನಹಿ ಮೇರೆ ಜೋಡುಕೆ" ಎಂದು 'ರಾಜಾ ಹಿಂದೂಸ್ತಾನಿ' ಚಿತ್ರದಲ್ಲಿ ಹಾಡಿ ಅಮೀರ್ ಖಾನ್ ತುಟಿಗೆ ಚುಂಬಿಸಿ ಪ್ರಣಯ ದೃಶ್ಯದಲ್ಲಿ ಬಿಂದಾಸ್ ಆಗಿ ನಟಿಸಿದ್ದರು. (ಏಜೆನ್ಸೀಸ್)


Click it and Unblock the Notifications











