ಶ್ರೀದೇವಿ ಮೇಡಂಗೆ ಸೋನಮ್ ಕಪೂರ್ ನಮಸ್ಕಾರ

ಸೋನಮ್ ಕಪೂರ್ ಗೆ ಅಷ್ಟಾಗಿ ಡ್ರೆಸ್ಸಿಂಗ್ ಇರಲಿಲ್ಲವಂತೆ. ಆಕೆ ಚಿಕ್ಕಮ್ಮ ಶ್ರೀದೇವಿಯಿಂದ ಕಲಿತುಕೊಂಡರಂತೆ. ಡ್ರೆಸ್ ಕೇವಲ ಫ್ಯಾಷನ್ ಗಲ್ಲ, ಅದು ನಮ್ಮ ಆಟಿಟ್ಯೂಡ್ ಕೂಡ ತೋರಿಸುತ್ತೆ. ಹಾಗಾಗಿ ಎಲ್ಲಿ ಹೇಗೆ ಡ್ರೆಸ್ ಮಾಡಿಕೊಂಡು ಹೋಗಬೇಕೆಂದು ಮಗಳಿಗೆ ಚಿಕ್ಕಮ್ಮ ಶ್ರೀದೇವಿ ಪಾಠ ಮಾಡುತ್ತಾರಂತೆ.
ಪಾಠ ಕೇಳಿ ಜಾಣೆಯಂತೆ ಡ್ರೆಸ್ ಮಾಡಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾಳೆ ಸೋನಮ್. ಸದ್ಯಕ್ಕೆ ಅಭಿಷೇಕ್ ಬಚ್ಚನ್ ಜೊತೆ ಅಭಿನಯಿಸುತ್ತಿರುವ ಸೋನಮ್ ನಟನೆ ಎಲ್ಲರ ಗಮನ ಸೆಳೆದಿದೆ. ಮುಂದೊಂದು ದಿನ ಸೋನಮ್ ಶ್ರೀದೇವಿಯಂತೆ ಮಿಂಚುವುದಕ್ಕೆ ಇದು ಸಹಾಯವಾದರೂ ಆಗಬಹುದು. ಸಿಕ್ಕರೆ ಶ್ರೀದೇವಿಯಂತ ಮೇಡಮ್ ಸಿಗಬೇಕು. (ಏಜೆನ್ಸೀಸ್)
English summary
Stylish Sonam Kapoor attributes her fashion and dressing sense to her chachi and veteran actress Sridevi.


Click it and Unblock the Notifications