For Quick Alerts
  ALLOW NOTIFICATIONS  
  For Daily Alerts

  ಪೊಲೀಸ್ ಅಧಿಕಾರಿಯಾಗಿ ಮುನ್ನಾಬಾಯ್ ಸಂಜು

  By Rajendra
  |

  ಅನಿಲ್ ಕಪೂರ್ ಪೋಷಿಸಬೇಕಾಗಿದ್ದ ಪೊಲೀಸ್ ಅಧಿಕಾರಿ ಪಾತ್ರ ಸಂಜಯ್ ದತ್ ಪಾಲಾಗಿದೆ. ಬಾಲಿವುಡ್ ನಿರ್ದೇಶಕ ರೆನ್ಸಿಲ್ ಡಿಸಿಲ್ವ ಆಕ್ಷನ್ ಕಟ್‌ನಲ್ಲಿ ಚಿತ್ರವೊಂದು ಸಿದ್ಧವಾಗುತ್ತಿದೆ. ಧರ್ಮ ಪ್ರೊಡಕ್ಷನ್ ಲಾಂಛನದಲ್ಲಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ನಿರ್ಣಾಯಕ ಪಾತ್ರವಿದೆಯಂತೆ.

  ಇದಕ್ಕಾಗಿ ಅನಿಲ್ ಕಪೂರ್ ಅವರನ್ನು ನಿರ್ದೇಶಕರು ಸಂಪರ್ಕಿಸಿದ್ದಾರೆ. ಆದರೆ ಅನಿಲ್ ಕಪೂರ್ ಪೊಲೀಸ್ ಅಧಿಕಾರಿ ಪಾತ್ರ ಒಲ್ಲೆ ಎಂದಿದ್ದಾರೆ. ಇದಕ್ಕೆ ಕಾರಣ, ಈಗಾಗಲೆ ಅವರು 'ಶೂಟೌಟ್ ಅಟ್ ವಾದಾಲಾ' ಎಂಬ ಚಿತ್ರದಲ್ಲಿ ಇದೇ ರೀತಿಯ ಪಾತ್ರವನ್ನು ಪೋಷಿಸುತ್ತಿದ್ದಾರಂತೆ.

  ಈ ಎರಡೂ ಚಿತ್ರಗಳನ್ನು ಒಪ್ಪಿಕೊಂಡರೆ ತಮ್ಮ ಪಾತ್ರದಲ್ಲಿ ವೈವಿಧ್ಯತೆ ಇರುವುದಿಲ್ಲ ಎಂದು ಅನಿಲ್ ನಯವಾಗಿ ತಿರಸ್ಕರಿಸಿದ್ದಾರೆ. ಬಳಿಕ ನಿರ್ದೇಶಕರು ಸಂಜಯ್ ದತ್ ಅವರನ್ನು ಸಂಪರ್ಕಿಸಿದರಂತೆ. ಕರಣ್ ಜೋಹರ್ ಮೇಲಿನ ಅಭಿಮಾನ ಹಾಗೂ ಪೊಲೀಸ್ ಅಧಿಕಾರಿ ಪಾತ್ರ ಇಷ್ಟವಾದ ಕಾರಣ ಓಕೆ ಎಂದಿದ್ದಾರೆ. (ಏಜೆನ್ಸೀಸ್)

  English summary
  Munna Bhai Sanjay Dutt plays a investigative cop role in Dharma Production's next to be directed by Rensil D'Silva. Dutt not only because he liked his role of a cop but also because he can't say no to Karan Johar.
  Tuesday, April 3, 2012, 17:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X