Aamir Khan Marriage:3ನೇ ಮದುವೆಗೆ ಸಜ್ಜಾದ ಆಮಿರ್ ಖಾನ್; ಇಬ್ಬರು ಮಾಜಿ ಹೆಂಡಿರ ಮುಂದೆ 3ನೇ ವಿವಾಹ

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಸಿನಿಮಾ ಮಾಡುವುದರಲ್ಲಿ ಪರ್ಫೆಕ್ಟ್. ತಾನು ಒಪ್ಪಿಕೊಳ್ಳುವ ಪ್ರತಿಯೊಂದು ಸಿನಿಮಾ ಹೀಗೆ ಬರಬೇಕು ಅಂತ ಪಟ್ಟು ಹಿಡಿದು ಮಾಡುವ ನಟ. ಹೀಗಾಗಿ ಉಳಿದ ಸೂಪರ್‌ಸ್ಟಾರ್‌ಗಳಂತೆ ವರ್ಷಕ್ಕೊಂದು ಸಿನಿಮಾ ಮಾಡುವುದಿಲ್ಲ. ಇವರ ಸಿನಿಮಾ ನೋಡುವುದಕ್ಕೆ ಫ್ಯಾನ್ಸ್ ಮೂರರಿಂದ ನಾಲ್ಕು ವರ್ಷ ಕಾಯಲೇಬೇಕು. ಆದರೆ, ಕೆಲಸ ವಿಚಾರದಲ್ಲಿ ಪರ್ಫೆಕ್ಟ್ ಆಗಿರೋ ಆಮಿರ್ ವೈವಾಹಿಕ ಜೀವನ ಅಷ್ಟೊಂದು ಪರ್ಫೆಕ್ಟ್ ಆಗಿಲ್ಲ.

ಆಮಿರ್ ಖಾನ್ ಎರಡು ಮದುವೆಗಳು ಮುರಿದು ಬಿದ್ದಿವೆ. ಈ ಮೂರನೇ ಮದುವೆಗೆ ಸಜ್ಜಾಗಿದ್ದಾರೆ. ಕಿರಣ್‌ ರಾವ್‌ಗೆ ವಿಚ್ಛೇದನ ನೀಡಿದ ಬಳಿಕ ಆಮಿರ್ ಖಾನ್‌ಗೆ ಮತ್ತೆ ಪ್ರೇಮಾಂಕುರವಾಗಿತ್ತು. ಬೆಂಗಳೂರು ಮೂಲದ ಗೌರಿ ಸ್ಟ್ರಾಟ್ ಜೊತೆ ಗುಟ್ಟಾಗಿ ಡೇಟ್ ಮಾಡುತ್ತಿದ್ದರು. ತಮ್ಮ 60ನೇ ಹುಟ್ಟುಹಬ್ಬದಂದು ಆಮಿರ್ ಖಾನ್ ಇವರನ್ನು ಪರಿಚಯ ಮಾಡಿಸಿದ್ದರು.

Aamir Khan 3rd marriage with girlfriend Gauri Spratt on July 5th here is details

ಒಂದಿಷ್ಟು ದಿನ ಸುತ್ತಾಡಿಕೊಂಡಿದ್ದ ಈ ಜೋಡಿ ಈಗ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದೆ. ಆಮಿರ್ ಖಾನ್ ಹಾಗೂ ಗೌರಿ ಸ್ಟ್ರಾಟ್ ಮದುವೆ ಇನ್ನು ಎರಡು ದಿನಗಳಲ್ಲಿ ನಡೆಯಲಿದೆ. ಹಾಗಿದ್ದರೆ, ಆಮಿರ್ ಖಾನ್ ಹಾಗೂ ಗೌರಿ ಮದುವೆ ಹೇಗೆ ನಡೆಯುತ್ತೆ? ಆಮಿರ್ ಖಾನ್ ಪ್ಲಾನ್ ಏನು? ಯಾರಿಗೆಲ್ಲ ಆಹ್ವಾನವನ್ನು ನೀಡಿದ್ದಾರೆ? ಮದುವೆ ಬಗ್ಗೆ ಆಮಿರ್ ಖಾನ್ ಹೇಳಿದ್ದೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಆಮಿರ್-ಗೌರಿ ಮದುವೆ ಯಾವಾಗ?

ಇತ್ತೀಚೆಗೆ ಇವೆಂಟ್‌ವೊಂದರಲ್ಲಿ ಭಾಗವಹಿಸಿದ್ದ ಆಮಿರ್ ಖಾನ್ ತನ್ನ 3ನೇ ಮದುವೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ಜುಲೈ 5 ರಂದು ಗೆಳತಿ ಗೌರಿ ಸ್ಟ್ರಾಟ್ ಅವರೊಂದಿಗೆ ವೈವಾಹಿ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ವಿಷಯವನ್ನು ಖುದ್ದಾಗಿ ಆಮಿರ್ ಖಾನ್ ಮಾಧ್ಯಮಗಳಿಗೆ ಕನ್ಫರ್ಮ್ ಮಾಡಿದ್ದಾರೆ. ಈ ವಿವಾಹ ಸಮಾರಂಭದಲ್ಲಿ ಕೇವಲ ಕುಟುಂಬದವರು, ಆಪ್ತ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ಆಮಿರ್ ಖಾನ್ ಹೇಳಿದ್ದೇನು?

ತನ್ನ 3ನೇ ಮದುವೆ ಬಗ್ಗೆ ಆಮಿರ್ ಖಾನ್ ಮಾದ್ಯಮಗಳಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ನನ್ನ ಮದುವೆ ಜುಲೈ 5ರಂದು ನಡೆಯಲಿದೆ. ಇದು ಖಾಸಗಿ ಸಮಾರಂಭ ಆಗಿದ್ದು, ನನಗೆ ತುಂಬಾನೇ ವಿಶೇಷವಾದ ದಿನ. ಈ ಮದುವೆಗೆ ಕೇವಲ ಕುಟುಂಬದವರು ಹಾಗೂ ಆಪ್ತರು ಮಾತ್ರ ಬರುತ್ತಾರೆ. ನನ್ನ ಮನೆಯಲ್ಲಿಯೇ ನಡೆಯುವುದರಿಂದ ಸಣ್ಣದಾಗಿ ನಡೆಯಲಿದೆ. ನಾವು ಸಂತೋಷವಾಗಿ ಇರಲೆಂದು ನಿಮ್ಮ ಆಶೀರ್ವಾದವನ್ನು ಬಯಸುತ್ತೇನೆ" ಎಂದು ಆಮಿರ್ ಖಾನ್ ಹೇಳಿದ್ದಾರೆ.

Also Read
ನಿಮಗ್ಯಾಕಿಷ್ಟು ಕುತೂಹಲ ; ಗೌರಿ ಜೊತೆ 3ನೇ ಮದುವೆ, ವೈಯಕ್ತಿಕ ಜೀವನದ ಚರ್ಚೆಗೆ ಕಿಡಿಕಾರಿದ ಆಮಿರ್ ಖಾನ್
ನಿಮಗ್ಯಾಕಿಷ್ಟು ಕುತೂಹಲ ; ಗೌರಿ ಜೊತೆ 3ನೇ ಮದುವೆ, ವೈಯಕ್ತಿಕ ಜೀವನದ ಚರ್ಚೆಗೆ ಕಿಡಿಕಾರಿದ ಆಮಿರ್ ಖಾನ್

ಇಬ್ಬರು ಮಾಜಿ ಪತ್ನಿಯ ಉಪಸ್ಥಿತಿ

ಬಾಳಿವುಡ್ ಮೂಲಗಳ ಪ್ರಕಾರ ಆಮಿರ್ ಖಾನ್ 3ನೇ ಮದುವೆ ಇಬ್ಬರು ಮಾಜಿ ಪತ್ನಿಯರು ಆಗಮಿಸಲಿದ್ದಾರೆ. ಮೊದಲನೇ ಪತ್ನಿ ರೀನಾ ದತ್ತಾ ಹಾಗೂ 2ನೇ ಪತ್ನಿ ಕಿರಣ್ ರಾವ್ ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ ಎನ್ನಲಾಗಿದೆ. ಇಬ್ಬರು ಮಾಜಿ ಪತ್ನಿಯರ ಸಮ್ಮುಖದಲ್ಲಿ ಆಮಿರ್ ಖಾನ್ ಮೂರನೇ ಮದುವೆ ಆಗುತ್ತಿದ್ದಾರೆ. ವಿಚ್ಚೇದನದ ಬಳಿಕ ಇಬ್ಬರು ಪತ್ನಿಯರೊಂದಿಗೆ ಆಮಿರ್ ಖಾನ್ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಹೀಗಾಗಿ ರೀನಾ ಹಾಗೂ ಕಿರಣ್ ಇಬ್ಬರೂ 3ನೇ ಮದುವೆಯನ್ನು ಕಣ್ತುಂಬಿಕೊಳ್ಳುವ ಸಾಧ್ಯತೆಯಿದೆ. ಹಾಗೇ ಆಮಿರ್ ಖಾನ್ ಮಕ್ಕಳು ಕೂಡ ಈ ಮದುವೆಯಲ್ಲಿ ಭಾಗವಹಿಸಲಿದ್ದಾರೆ.

ಗೌರಿ ಸ್ಟ್ರಾಟ್ ಯಾರು?

ಆಮಿರ್ ಖಾನ್ 3ನೇ ಮದುವೆ ಆಗುತ್ತಿರುವ ಗೌರಿ ಸ್ಟ್ರಾಟ್ ಕೂಡ ಬೆಂಗಳೂರಿನವರೇ. ಇವರ ಅಜ್ಜ ಫಿಲಿಪ್ ಸ್ಟ್ರಾಟ್ ಬ್ರಿಟಿಷ್ ಮೂಲದವರಾಗಿದ್ದು, 1920ರಲ್ಲಿ ಭಾರತಕ್ಕೆ ಬಂದಿದ್ದರು. ಇಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು. ಆಮಿರ್ ಖಾನ್ ಹಾಗೂ ಗೌರಿ ಸ್ಟ್ರಾಟ್ ಅವರದ್ದು 25 ವರ್ಷಗಳ ಹಿಂದಿನ ಪರಿಚಯ. 2ನೇ ಪತ್ನಿಯೊಂದಿಗೆ ಬೇರೆಯಾದ ಬಳಿಕ ಮತ್ತೆ ಸಂಪರ್ಕಕ್ಕೆ ಬಂದಿದ್ದರು. ಅಲ್ಲಿಂದ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದು, ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

English summary
Aamir Khan 3rd marriage with girlfriend Gauri Spratt on July 5th here is details.
Read more about: aamir khan marriage girlfriend
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X