'ದಂಗಲ್' ನಟಿ ಜೊತೆ ಆಮಿರ್ ಖಾನ್ ಪಿಕಲ್‌ಬಾಲ್ ಆಟ.. ವಿಡಿಯೋ ವೈರಲ್: "ಬಿಟ್ಟು ಬಿಡು ಆಮಿರ್" ಎಂದ ನೆಟ್ಟಿಗರು

ಬಾಲಿವುಡ್‌ ಸೂಪರ್‌ಸ್ಟಾರ್ ಆಮಿರ್ ಖಾನ್ ಕೊನೆ ಸಿನಿಮಾ 'ಲಾಲ್ ಸಿಂಗ್ ಚಡ್ಡ' ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಈ ಸೋಲಿನಿಂದ ಆಮಿರ್ ಖಾನ್ ಕೆಲವು ವರ್ಷ ಸಿನಿಮಾ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು.

'ಲಾಲ್ ಸಿಂಗ್ ಚಡ್ಡ' ಸಿನಿಮಾ ಬಳಿಕ ಆಮಿರ್ ಖಾನ್ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿಲ್ಲ. ಈ ಮಧ್ಯೆ ಆಮಿರ್ ಖಾನ್ ವೈಯಕ್ತಿಕ ಜೀವನ ಕೂಡ ಹಳ್ಳ ಹಿಡಿದಿದೆ. ಎರಡನೇ ಪತ್ನಿ ಕಿರಣ್ ರಾವ್ ಜೊತೆ ಬೇರೆಯಾದ ಬಳಿಕ ದಂಗಲ್ ನಟಿ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದೆ.

Aamir Khan and Fatima Sana Shaikh play pickleball video viral netizen says 3rd Mummy Coming

ಈಗ ಅದೇ ದಂಗಲ್ ನಟಿ ಫಾತಿಮಾ ಸನಾ ಶೇಕ್ ಜೊತೆ ಆಮಿರ್ ಖಾನ್ ಪಿಕಲ್‌ಬಾಲ್ ಆಟ ಆಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ತರಾವರಿ ಕೆಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಸಲಿಗೆ ಕಮೆಂಟ್‌ಗಳೇನು ಅಂತ ತಿಳಿಯುವುದಕ್ಕೂ ಮುನ್ನ ಆಮಿರ್ ಖಾನ್ ಹಾಗೂ ಫಾತಿಮಾ ಆಟ ಪಿಕಲ್‌ಬಾಲ್ ವಿಡಿಯೋದ ಹಿನ್ನೆಲೆ ಏನು ಅನ್ನೋದನ್ನು ತಿಳಿಯೋಣ.

ಆಮಿರ್-ಫಾತಿಮಾ ಪಿಕಲ್‌ಬಾಲ್ ಗೇಮ್

ಬಾಲಿವುಡ್‌ ಪಾಪರಾಜಿ ಇನ್‌ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆಮಿರ್ ಖಾನ್ ಹಾಗೂ ದಂಗಲ್ ನಟಿ ಫಾತಿಮಾ ಸನಾ ಶೇಕ್ ಇಬ್ಬರು ಪಿಕಲ್‌ಬಾಲ್ ಗೇಮ್ ಆಡುತ್ತಿದ್ದಾರೆ. ಆಮಿರ್ ಖಾನ್ ಹಾಗೂ ಫಾತಿಮಾ ಪಿಕಲ್ ಬಾಲ್‌ ಗೇಮ್ ಆಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಿನ್ನೆ(ಮೇ 23)ರಂದು ಪಾಪರಾಜಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದರು. ಅಲ್ಲದೆ "ಮುಂಬೈನಲ್ಲಿ ಇಂದು ಫಾತಿಮಾ ಸನಾ ಶೇಕ್ ಹಾಗೂ ಆಮಿರ್ ಖಾನ್ ಪಿಕಲ್‌ಬಾಲ್ ಗೇಮ್ ಆಡುತ್ತಿದ್ದಾರೆ" ಎಂದು ಬರೆದು ಪೋಸ್ಟ್ ಮಾಡಿದ್ದರು. ಈ ನೆಟ್ಟಿಗರು ಇದೇ ವಿಡಿಯೋ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.

ಏನಂತಾರೆ ನೆಟ್ಟಿಗರು?

ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಡಿಸೈನ್ ಡಿಸೈನ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬರು "ಲವ್ ಬರ್ಡ್ಸ್" ಅಂತ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು " ಓಹೋ.. ಸಿನಿಮಾದಲ್ಲಿ ಮಗಳು.. ಆದರೆ, ರಿಯಲ್‌ಲೈಫ್‌ನಲ್ಲಿ ಅಲ್ಲ" ಎಂದು ಇಬ್ಬರ ಕಾಲೆಳೆದಿದ್ದಾರೆ.

ಹಾಗಂತ ಇಷ್ಟಕ್ಕೆ ನಿಂತಿಲ್ಲ. ಮತ್ತೊಬ್ಬರು "ಮಮ್ಮಿ ನಂ 3 ಸದ್ಯದ್ರಲ್ಲೇ ಬರುತ್ತಾರೆ" ಎಂದು ಆಮಿರ್ ಖಾನ್ ಕಾಲೆಳೆದಿದ್ದಾರೆ. ಹಾಗೇ ಇನ್ನೊಬ್ಬರು " ಆಮಿರ್ ನಿಮ್ಮ ಮಗಳ ವಯಸ್ಸಿನವರು ಬಿಟ್ಟು ಬಿಡು" ಎಂದು ಸಲಹೆಯನ್ನೂ ನೋಡಿದ್ದಾರೆ. ಕೆಲವರು ಅವರ ಲೈಫ್.. ಏನು ಬೇಕಾದರೂ ಮಾಡುತ್ತಾರೆ ಬಿಟ್ಟು ಬಿಡಿ" ಎಂದು ಸಲಹೆಯನ್ನೂ ನೀಡುತ್ತಿದ್ದಾರೆ.

ಆಮಿರ್ ಜೊತೆ ಫಾತಿಮಾ ಹೆಸರು ತಳುಕು

ಆಮಿರ್ ಖಾನ್ ನಟನೆಯ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ 'ದಂಗಲ್' ದಾಖಲೆ ಗಳಿಕೆ ಕಂಡಿತ್ತು. ಇದರಲ್ಲಿ ಫಾತಿಮಾ ಸನಾ ಶೇಕ್, ಆಮಿರ್‌ಗೆ ಮಗಳಾಗಿ ನಟಿಸಿದ್ದರು. ಆನಂತ್ರ 'ಥಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ವೇಳೆ ಎರಡನೇ ಪತ್ನಿ ಕಿರಣ್ ರಾವ್‌ಗೂ ವಿಚ್ಛೇದನ ನೀಡಿದ್ದರು.

ಇಲ್ಲಿಂದ ಆಮಿರ್ ಖಾನ್ ಎರಡನೇ ಬಾರಿ ವಿಚ್ಛೇದನ ನೀಡುವುದಕ್ಕೆ ಫಾತಿಮಾ ಸನಾ ಶೇಕ್ ಕಾರಣ ಅಂತ ಗೆಲ್ಲೆದ್ದಿತ್ತು. ಆದರೆ, ಆಮಿರ್ ಖಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡದೇ ಹೋದರೂ, ಫಾತಿಮಾ ಸನಾ ಶೇಕ್ ಮಾತ್ರ ಇದೆಲ್ಲಾ ಸುಳ್ಳು ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು.

More from Filmibeat

English summary
Aamir Khan and Fatima Sana Shaikh play pickleball video viral netizen says 3rd Mummy Coming, know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X